ಸಿನಿವಾಣಿ

ಆಪರೇಷನ್​ 'ಓಂ' ಕೈಗೆತ್ತಿಕೊಂಡ ಸಾಯಿ ಪಲ್ಲವಿ; IPS ಅಧಿಕಾರಿ ನಿತ್ಯಾ ರೆಡ್ಡಿಯಾಗಿ ಸೆನ್ಸೇಷನ್​ ಕ್ರಿಯೇಟ್​..'OM – Chapter 1: Udhiram

  • ರಾಜ್‌ಕುಮಾರ್ ಪೆರಿಯಾಸಾಮಿ ನಿರ್ದೇಶದ 'ಓಮ್ – ಚಾಪ್ಟರ್ 1: ಊದಿರಮ್ – ದಿ ಬ್ಲಡ್ ವುಡ್'.

  • ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ ಸೆನ್ಸೇಷನ್​ ಕ್ರಿಯೇಟ್​.

  • ರಕ್ತ ಚಂದನ ಮರಗಳ ಸಾಗಣೆಯ ಸುತ್ತ ಸಿನಿಮಾ ಕತೆಯನ್ನು ಹೆಣೆಯಲಾಗಿದೆ.

  • ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಾಯಿ ಪಲ್ಲವಿ ಪಾತ್ರ ಪರಿಚಯಿಸುವ ವಿಡಿಯೋ ರಿಲೀಸ್.

'OM – Chapter 1: Udhiram: ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಫ್ಯಾನ್ಸ್​ಗೆ ಸಾಲು ಸಾಲು ಗುಡ್​ನ್ಯೂಸ್ ಇದೆ. ಸದ್ಯ ರಾಜ್‌ಕುಮಾರ್ ಪೆರಿಯಾಸಾಮಿ ಆಕ್ಷನ್​ ಕಟ್ ಹೇಳಿರುವ ಬಹುನಿರೀಕ್ಷಿತ 'ಓಮ್ – ಚಾಪ್ಟರ್ 1: ಊದಿರಮ್ – ದಿ ಬ್ಲಡ್ ವುಡ್' ಸಿನಿಮಾದಿಂದ ನಟಿಯ ಹೊಸ ಖದರ್​​ ಲುಕ್ ರಿಲೀಸ್ ಆಗಿದ್ದು, ಐಪಿಎಸ್​ ಅಧಿಕಾರಿಯಾಗಿ ಸೆನ್ಸೇಷನ್​ ಕ್ರಿಯೇಟ್ ಮಾಡಿದ್ದಾರೆ.

ಧನುಷ್​​, ಮಮ್ಮುಟಿ, ಶ್ರೀಲೀಲಾ, ಸಾಯಿ ಪಲ್ಲವಿ ಓಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾಯಿ ಅಭಯಂಕರ್​ ಅವರ ಸಂಗೀತವಿದ್ದು, ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಸದ್ಯ ಸಿನಿಮಾ ಸಾಯಿ ಪಲ್ಲವಿ ಅವರ ಪಾತ್ರ ಪರಿಚಯದ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಐಪಿಎಸ್​ ಅಧಿಕಾರಿಯಾಗಿ ಸಾಯಿಪಲ್ಲವಿ ಮಿಂಚಿದ್ದಾರೆ.

ಐಪಿಎಸ್ ನಿತ್ಯಾ ರೆಡ್ಡಿ

ಓಂ ಸಿನಿಮಾದಲ್ಲಿ ಸಾಯಿ ಪಲ್ಲವಿ, ಆಂಧ್ರಪ್ರದೇಶದ 'ನೈಡುಪೇಟೆ ಅಮ್ಮಾಯಿ', ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿಯಾಗಿ ಮಿಂಚಿದ್ದಾರೆ. ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರ ಅಳು, ಪ್ರೀತಿ, ನಗು, ಆಕ್ಷನ್​​ ಸೇರಿದಂತೆ ಎಲ್ಲಾ ಭಾವನೆಗಳನ್ನು ವಿವರಿಸಲು ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಾಯಿಪಲ್ಲವಿ ಅವರ ಹೊಸ ಕೇಶ ವಿನ್ಯಾಸ ಸೆಂಟರ್​ ಆಫ್​ ಅಟ್ರ್ಯಾಕ್ಷನ್​ ಆಗಿದೆ.

ಧನುಷ್​ ಜೊತೆಗೆ 2ನೇ ಸಿನಿಮಾ

ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಪಾರ ಪ್ರಾಮಾಣಿಕತೆ, ಬುದ್ಧಿವತ್ತಿಕೆ ಮತ್ತು ಅನುಭವ ಹೊಂದಿರುವ ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿ(ಸಾಯಿ ಪಲ್ಲವಿ), ಆರಂಭದಲ್ಲಿ ಆಂಧ್ರಪ್ರದೇಶ ಪೊಲೀಸ್ ಕೇಡರ್‌ನಲ್ಲಿ ಎಎಸ್ಪಿ ಆಗಿ ಸೇವೆ ಸಲ್ಲಿಸಿರುತ್ತಾರೆ. ಬಳಿಕ ಇಂಟರ್‌ಪೋಲ್ ಜೊತೆ ಕೆಲಸ ಮಾಡಲು ಸಿಬಿಐಗೆ ಹೆಚ್ಚುವರಿ ಎಸ್‌ಪಿಯಾಗಿ ನೇಮಕಗೊಳ್ಳುತ್ತಾರೆ.

ರಕ್ತ ಚಂದನದ ಮರಗಳನ್ನು ಸಾಗಣೆ ಮಾಡುವ ರಹಸ್ಯದ ಸುತ್ತ ಸಿನಿಮಾದ ಕತೆ ಹೆಣೆಯಲಾಗಿದೆ. 'ಓಮ್' ಹೆಸರಿನ ಈ ಕಾರ್ಯಾಚರಣೆಯನ್ನು ನಿತ್ಯಾ(ಸಾಯಿ ಪಲ್ಲವಿ) ಮುನ್ನಡೆಸುತ್ತಾರೆ. ಈ ಗ್ಲಿಂಪ್ಸ್‌ನಲ್ಲಿ ಸಾಯಿ ಪಲ್ಲವಿ ಮತ್ತು ನಾಯಕ ನಟ ಧನುಷ್ ನಡುವಿನ ಕೆಲವು ಸುಂದರ ಹಾಗೂ ಭಾವನಾತ್ಮಕ ಕ್ಷಣಗಳೂ ಕೂಡ ವೀಕ್ಷಕರ ಗಮನ ಸೆಳೆದಿದ್ದು, ಇಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಕುರಿತು ಕುತೂಹಲ ಮೂಡಿಸಿದೆ. ಮಾರಿ 2 ನಂತರ ಧನುಷ್- ಸಾಯಿ ಪಲ್ಲವಿ ಕಾಂಬಿನೇಷನ್​​ನ ಎರಡನೇ ಸಿನಿಮಾವಾಗಿದೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಎಲ್ಲಾ ಭಾಷೆಯ ಸಿನಿಪ್ರೇಮಿಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಅ.16ರಂದೇ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಇತ್ತು. ಆದರೆ, ರಜನಿ ಕಾಂತ್​ ನಟನೆಯ ಜೈಲರ್​ 2 ಸಿನಿಮಾಕ್ಕಾಗಿ 'ಓಮ್ – ಚಾಪ್ಟರ್ 1: ಊದಿರಮ್ – ದಿ ಬ್ಲಡ್ ವುಡ್' ರಿಲೀಸ್​​ ಮುಂದೂಡಲಾಗಿತ್ತು. ನವೆಂಬರ್​ 20ರಂದು ರಿಲೀಸ್ ಆಗಲಿದೆ, (ಏಜೆನ್ಸೀಸ್).