

ರಾಮಾಯಣದಲ್ಲಿ ಸೀತೆಯಾಗಿ ಸೌತ್ ಇಂಡಿಯನ್ ನಟಿ ಸಾಯಿ ಪಲ್ಲವಿ ಮಿಂಚು.
ಸಾಯಿ ಪಲ್ಲವಿ ಜಾಸ್ತಿ ಮಾತಾಡ್ತಾರೆ ಎಂದು ಸೀಕ್ರೆಟ್ ಬಿಚ್ಚಿಟ್ಟ ನಟ ನಾಗಚೈತನ್ಯ
ನಿಮ್ಮನ್ನು ಬಿಟ್ಟು ಸೀತೆಯಾಗಿ ಬೇರೆಯಾರನ್ನು ಊಹಿಸುವುದು ಅಸಾಧ್ಯ ಎಂದ ರಣಬೀರ್
Naga Chaitanya Reveals Sai Pallavi Surprising Secret: ನಟಿ ಸಾಯಿಪಲ್ಲವಿ ಸಹಜ ನಟನೆ, ನ್ಯಾಚುರಲ್ ಬ್ಯೂಟಿಗೆ ಹೆಸರಾದ ನಟಿ. ಕೋಟಿ ಕೊಡುತ್ತೇವೆ ಎಂದ ಜಾಹೀರಾತನ್ನೇ ದಿಕ್ಕರಿಸಿದ ನಟಿ ಸದ್ಯ ರಾಮಾಯಣ ಭಾಗ 1ರಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಮಾಡ್ರನ್ ಸೀತೆಯ ಹವಾ ಕ್ರಿಯೇಟ್ ಆಗಿದೆ. ಇದಕ್ಕೆ ಕಾರಣ ಜಯಮ್ಮು ನಿಶ್ಚಯಮ್ಮು ರಾ ಸೀಸನ್ 2 .
ಹೌದು, ನಟ ಜಗಪತಿ ಬಾಬು ಅವರು ನಡೆಸಿಕೊಡುವ ಜಯಮ್ಮು ನಿಶ್ಚಯಮ್ಮು ರಾ ಸೀಸನ್ 2ನಲ್ಲಿ ನಟಿ ಸಾಯಿ ಪಲ್ಲವಿ ಭಾಗಿಯಾಗಿದ್ದು, ಅವರಿಗೆ ಸರ್ಪೈಸ್ ಮೇಲೆ ಸರ್ಪೈಸ್ ಅನ್ನು ನಟ ಜಗಪತಿ ಬಾಬು ಅವರು ನೀಡಿದ್ದಾರೆ. ರಣಬೀರ್ ಮತ್ತು ನಾಗಚೈತನ್ಯ ಅವರು ಮಾತನಾಡಿರುವ ವಿಡಿಯೋ ಪ್ರಸಾರವಾಗಿದ್ದು, ಸಾಕಷ್ಟು ವೈರಲ್ ಆಗಿದೆ. ಸಾಯಿ ಪಲ್ಲವಿಯ ನಗು, ಸರಳತೆಗೆ ಫ್ಯಾನ್ಸ್ ಫಿದಾ ಆಗಿ ಸಾಕಷ್ಟು ಪ್ರಮಾಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಾಯಿ ಪಲ್ಲವಿ ಅವರು ಎರಡು ಸಿನಿಮಾದಲ್ಲಿ ನಾಗಚೈತನ್ಯ ಅವರೊಂದಿಗೆ ನಟಿಸಿದ್ದಾರೆ. ತಂಡೇಲ್ ಮತ್ತು ಲವ್ಸ್ಟೋರಿ. ಅವರಿಬ್ಬರ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿವೆ. ಅವರ ಆನ್ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರ ಗಮನ ಸೆಳೆದಿತ್ತು. ಶೂಟಿಂಗ್ ಸಮಯದಲ್ಲಿ ಸಾಯಿಪಲ್ಲವಿ ಅವರು ಇನೋಸೆಂಟ್ ಆಗಿ ಕೇಳಿದ ಪ್ರಶ್ನೆ, ಅವರೊಂದಿಗೆ ಕಳೆದ ಕ್ಷಣದ ಬಗ್ಗೆ ನಾಗಚೈತನ್ಯ ಮಾತನಾಡಿದ್ದಾರೆ.
ನಾಗಚೈತನ್ಯ ಮಾತು ಶುರು ಮಾಡಿದ್ದು ಹೀಗೆ, 'ಶೂಟಿಂಗ್ ಶುರುವಾದ ಒಂದರಿಂದ ಮೂರು ದಿನಗಳ ಬಳಿಕ ಸಾಯಿ ಪಲ್ಲವಿ ನನ್ನ ಬಳಿ ಇನೋಸೆಂಟ್ ಆಗಿ ಬಂದು ಒಂದು ಪ್ರಶ್ನೆ ಕೇಳಿದ್ದರು' ಎಂದು ನಾಗಚೈತನ್ಯ ಹೇಳಿದರು. ಹಾಗೆ ಹೇಳುತ್ತಾ ಸಾಯಿ ಪಲ್ಲವಿ ಮುಖ ಮುಚ್ಚಿಕೊಂಡು ನಾಚಿ ನೀರಾದರು. 'ಆಕೆ ಜಾಸ್ತಿ ಮಾತಡಲ್ಲ ಅಂದ್ರೆ ನಂಬೋಕೆ ಹೋಗ್ಬೇಡಿ. ಬಿಡುವೇ ಇಲ್ಲದಷ್ಟು ಮಾತನಾಡ್ತಾಳೆ'. ಇದಲ್ಲದೆ, 'ಚೈತನ್ಯ ತನ್ನನ್ನು ಹುಡುಗನಂತೆ ನೋಡಿಕೊಳ್ಳುತ್ತಾರೆ' ಎಂದು ಸಾಯಿ ಪಲ್ಲವಿ ಹೇಳಿದರು. 'ಅವಳು ಮದುವೆಯಾದಳು. ಏನು, ಅವಳು ಮದುವೆಯಾದಳೇ? ಓಹ್.' ಎಂದು ಜಗಪತಿ ಬಾಬು ಕೀಟಲೆ ಮಾಡಿದರು.
ಸಾಯಿ ಪಲ್ಲವಿ ಅವರಲ್ಲಿ ತನಗೆ ಅತಿ ಹೆಚ್ಚು ಇಷ್ಟವಾಗುವ ಗುಣದ ಬಗ್ಗೆ ರಣಬೀರ್ ಮಾತನಾಡಿದ್ದಾರೆ, 'ಸಾಯಿ, ನಿಮ್ಮಲ್ಲಿ ನಾನು ಅತ್ಯಂತ ಹೆಚ್ಚು ಮೆಚ್ಚುವ ಗುಣ ನಿಮ್ಮ ಪ್ರಾಮಾಣಿಕತೆ. ನಿಮ್ಮಂತಹವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುವ ಭಾಗ್ಯ ಪ್ರತಿಯೊಬ್ಬ ಸಹ-ನಟನಿಗೂ ಸಿಗಬೇಕು. ಸೀತಾ ಪಾತ್ರದ ವಿಚಾರಕ್ಕೆ ಬಂದಾಗ, ಪ್ರಾಮಾಣಿಕವಾಗಿ ಬೇರೆ ಯಾರನ್ನೂ ನನಗೆ ಊಹಿಸಿಕೊಳ್ಳಲೂ ಆಗುವುದಿಲ್ಲ. ಜನರು ನಿಮ್ಮನ್ನು ಸಂಪೂರ್ಣವಾಗಿ ಹೊಸ ರೂಪದಲ್ಲಿ ನೋಡಲಿದ್ದಾರೆ, ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ರಣಬೀರ್ ಕಪೂರ್ ಹೇಳಿದ್ರು.
ಒಟ್ಟಾರೆ, ಸಾಯಿ ಪಲ್ಲವಿ ಅವರ ಮೂರು ಸಿನಿಮಾ ಧನುಷ್ ಜೊತೆ ನಟನೆಯ ಓಂ, ವಿಜಯ್ ಸೇತುಪತಿ ಜೊತೆಗಿನ ಇಂಜಿ ವೆಲ್ಲಂ’ ರಿಲೀಸ್ಗೆ ಸಜ್ಜಾಗಿದೆ, (ಏಜೆನ್ಸೀಸ್).