2022 ರಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ‘ಆರ್ಆರ್ಆರ್’ ಚಿತ್ರ ಕೊನೆಗೂ ಈಗ ರಿಲೀಸ್ಗೆ ರೆಡಿಯಾಗಿದೆ. ಹೌದು, ಇದೇ ಮಾ.25 ರಂದು ವಿಶ್ವಾದ್ಯಂತ ಎಸ್.ಎಸ್.ರಾಜಮೌಳಿ ಅವರ ‘ಆರ್ಆರ್ಆರ್’ ಬಿಡುಗಡೆ ಆಗಲಿದೆ. ಇನ್ನು, ಚಿತ್ರದ ರಿಲೀಸ್ಗೆ ಸಕಲ ತಯಾರಿಗಳನ್ನು ಚಿತ್ರತಂಡ ಈಗಾಗಲೇ ಮಾಡಿಕೊಳ್ಳಲಾಗಿದೆ. ನಟ ರಾಮ್ ಚರಣ್ ತೇಜ್ ಮತ್ತು ನಟ ಜ್ಯೂ.ಎನ್ಟಿಆರ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಈ ನಟರ ಜೊತೆ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ಆಲಿಯಾ ಭಟ್ ಕೂಡಾ ಈ ಸಿನಿಮಾದ ಮೂಲಕ ದಕ್ಷಿಣ ಭಾರತದಲ್ಲಿ ಮಿಂಚಲಿದ್ದಾರೆ. ಹೀಗಾಗಿ, ಸಿನಿಪ್ರೇಕ್ಷಕರು ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಂದಹಾಗೆ, ಈಗಾಗಲೇ ‘ಆರ್ಆರ್ಆರ್’ ಚಿತ್ರದ ಮೇಲೆ ಪ್ರೇಕಕರಿಗೆ ಎಷ್ಟು ಕ್ರೇಜ್ ಇದೆ ಎಂಬುದನ್ನು ನಾವು ನೋಡಿದೀವಿ. ಹೀಗಿರುವಾಗಲೇ, ದೇಶದಲ್ಲಿ ಹಾಗೂ ವಿದೇಶದಲ್ಲಿ ಕೂಡಾ ಈ ಚಿತ್ರಕ್ಕೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಅಲ್ಲಿನ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡಾ ಗಿಟ್ಟಿಸಿಕೊಂಡಿದೆ. ಅದರಲ್ಲೂ, ಜ್ಯೂ. ಎನ್ಟಿಆರ್ ಅಭಿಮಾನಿಗಳು ರಾಶಿ ರಾಶಿ ಟಿಕೆಟ್ ಖರೀದಿಸುತ್ತಿದ್ದಾರೆ ಎನ್ನಲಾಗಿದೆ.
ಹೌದು, ‘ಬಾಹುಬಲಿ’ ಸಿನಿಮಾದಿಂದಾಗಿ ವಿದೇಶದಲ್ಲೂ ರಾಜಮೌಳಿ ಅವರ ಖ್ಯಾತಿ ಹೆಚ್ಚಿತು. ವಿಶ್ವಮಟ್ಟದಲ್ಲಿ ಗಮನ ಸೆಳೆದ ಆ ಚಿತ್ರದ ಬಳಿಕ ಅವರ ಬತ್ತಳಿಕೆಯಿಂದ ಈಗ ‘ಆರ್ಆರ್ಆರ್’ ಬರುತ್ತಿದೆ. ಮತ್ತೊಂದೆಡೆ, ನಟ ಜ್ಯೂ.ಎನ್ಟಿಆರ್ ಅವರಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಅವರ ನಟನೆ, ಡ್ಯಾನ್ಸ್ಗೆ ಅಭಿಮಾನಿಗಳು ಸದಾ ಫಿದಾ ಆಗುತ್ತಾರೆ. ಅಮೆರಿಕದಲ್ಲಿ ಇರುವ ನಟನ ಅಭಿಮಾನಿಯೊಬ್ಬರು ಬರೋಬ್ಬರಿ 75 ಟಿಕೆಟ್ಗಳನ್ನು ಏಕಕಾಲಕ್ಕೆ ಖದೀರಿಸಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಸಿನಿಮಾ ಬಿಡುಗಡೆಯಾಗುವ 20 ದಿನಗಳ ಮುನ್ನವೇ ಈ ರೀತಿ ಟಿಕೆಟ್ಗಳು ಸೇಲ್ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಇನ್ನೂ, ಆ ಅಭಿಮಾನಿಯೊಬ್ಬರು ಖರೀದಿಸಿದ ಟಿಕೆಟ್ಗಳ ಫೋಟೋವನ್ನು ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಒಂದು ಘಟನೆ ಸಾಕು, ‘ಆರ್ಆರ್ಆರ್’ ಚಿತ್ರದ ಬಗ್ಗೆ ವಿದೇಶದಲ್ಲಿಯೂ ಎಷ್ಟರಮಟ್ಟಿಗೆ ಕ್ರೇಜ್ ಇದೆ ಎಂದು ತಿಳಿಸಲು. ಅಂದಹಾಗೆ, ಇಂಗ್ಲೆಂಡ್, ಆಸ್ಟ್ರೇಲಿಯಾ, ದುಬೈ ನಂತಹ ಮುಂತಾದ ದೇಶಗಳಲ್ಲೂ ಬುಕಿಂಗ್ ಶುರುವಾಗಿದೆ. ಎಲ್ಲೆಡೆ ಟಿಕೆಟ್ ಸೋಲ್ಡ್ ಔಟ್ ಆಗುತ್ತಿರುವುದು ಸದ್ಯ ಈ ಚಿತ್ರತಂಡಕ್ಕೆ ಕೂಡಾ ಖುಷಿಯಾಗಿದೆ.