ಹೈದರಾಬಾದ್: ಟಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೇ ಶ್ಯಾಮ್' ಚಿತ್ರ ಸಹ ಒಂದು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎಲ್ಲಾ ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಯಲ್ಲಿ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ‘ಮಲ್ಗೋಣ ಬಾ ಅಂತ ಕರೀತಾನೆ!’ ಸುದೀಪ್ ಎದುರೇ ಮಂಜುನ ನಡವಳಿಕೆ ಖಂಡಿಸಿದ ಚಕ್ರವರ್ತಿ! ಪರ್ಸನಲ್ ವಿಚಾರವೂ ಬಯಲು
ಹೊಸ ವಿಷಯವೇನೆಂದರೆ, ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು 'ಆರ್ಆರ್ಆರ್' ಫಾರ್ಮುಲದಲ್ಲಿ ಮಾರಾಟ ಮಾಡಲಾಗಿದೆ. ಇಷ್ಟಕ್ಕೂ ಏನಿದು 'ಆರ್ಆರ್ಆರ್' ಫಾರ್ಮುಲ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಸಾಮಾನ್ಯವಾಗಿ, ಒಂದು ಚಿತ್ರದ ಡಿಜಿಟಲ್ ಹಕ್ಕುಗಳನ್ನು ಒಂದು ಓಟಿಟಿಗೆ ಮಾರಾಟ ಮಾಡಲಾಗುತ್ತದೆ. ಆದರೆ, 'ಆರ್ಆರ್ಆರ್' ಚಿತ್ರದ ಡಿಜಿಟಲ್ ಹಕ್ಕುಗಳನ್ನು ಎರಡು ಓಟಿಟಿಗಳಿಗೆ ಮಾರಾಟ ಮಾಡಲಾಗಿದೆ.
ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬರಬಹುದು. ಅದು ಹೇಗೆ ಎಂದರೆ, 'ಆರ್ಆರ್ಆರ್' ಚಿತ್ರದ ಹಿಂದಿ ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ಗೆ ಮಾರಲಾಗಿತ್ತು. ಮಿಕ್ಕಂತೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಅವತರಣಿಕೆಗಳ ಡಿಜಿಟಲ್ ಹಕ್ಕುಗಳನ್ನು ಜೀ5ಗೆ ಮಾರಾಟ ಮಾಡಲಾಗಿತ್ತು.
ಅದೇ ರೀತಿ, ಇದೀಗ 'ರಾಧೇ ಶ್ಯಾಮ್' ಚಿತ್ರದ ಡಿಜಿಟಲ್ ಹಕ್ಕುಗಳನ್ನು ಸಹ ಮಾರಾಟ ಮಾಡಲಾಗಿದೆಯಂತೆ. 'ರಾಧೇ ಶ್ಯಾಮ್'ನ ಹಿಂದಿ ಅವತರಣಿಕೆಯನ್ನು ನೆಟ್ಫ್ಲಿಕ್ಸ್ ಪಡೆದರೆ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನ ಹಕ್ಕುಗಳನ್ನು ಜೀ5 ಪಡೆದಿದೆ ಎಂದು ಹೇಳಲಾಗುತ್ತಿದೆ. ಈ ಐದು ಭಾಷೆಗಳ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿರಬಹುದು ಎಂಬ ಪ್ರಶ್ನೆ ಬರಬಹುದು. ಆ ವಿಷಯವನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಸದ್ಯಕ್ಕೆ ರಹಸ್ಯವಾಗಿಟ್ಟು, ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ವರ್ಷಾಂತ್ಯಕ್ಕೆ ವಿಘ್ನೇಶ್ ಶಿವನ್, ನಯನತಾರಾ ಮದುವೆ?
'ರಾಧೇ ಶ್ಯಾಮ್' ಚಿತ್ರದಲ್ಲಿ ಪ್ರಭಾಸ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದುಮ ರಾಧಾಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ.