ಸಿನಿವಾಣಿ

ನಟ ಯಶ್​ ಮಾಡಿದ ಈ ಕೆಲಸದ ಬಗ್ಗೆ ತಿಳಿದ್ರೆ ನೀವು ಮೆಚ್ಚಿಕೊಳ್ಳದೆ ಇರಲಾರಿರಿ!

ಬೆಂಗಳೂರು: ದೇವಸ್ಥಾನ ನಿರ್ಮಾಣಕ್ಕೆ ನಟ ಯಶ್​ ದೇಣಿಗೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳು ನಟ ಡೇನಿಯಲ್​ ಬಾಲಾಜಿ ಅವರು ದಿಗ್ವಿಜಯ ನ್ಯೂಸ್​ಗೆ ಮೊದಲ ಪ್ರತಿಕ್ರಿಯೆ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಯಶ್​ ಅವರಿಗೆ ನಾನು ಕೃತಜ್ಙತೆ ಸಲ್ಲಿಸುತ್ತೇನೆ. ದೇಣಿಗೆ ವಿಚಾರವನ್ನು ಪದೇ ಪದೆ ಹೇಳುವುದು ಬೇಡ. ಬಂಧುಗಳಂತೆ ಅಮ್ಮನ್ ದೇವಾಲಯದ ನಿರ್ಮಾಣಕ್ಕೆ ಯಶ್​ ಸಹಕರಿಸಿದರು ಎನ್ನುವ ಮೂಲಕ ರಾಕಿಭಾಯ್ ಸಹಾಯವನ್ನು ಬಾಲಜಿ ಅವರು ನೆನೆದಿದ್ದಾರೆ.

4 ವರ್ಷಗಳ ಹಿಂದೆ ಯಶ್​ ಅವರು ನನಗೆ ಕರೆ ಮಾಡಿದರು. ಸಿನಿಮಾವೊಂದರಲ್ಲಿ ನಟಿಸಲು ಆಫರ್​ ಮಾಡಿದರು. ಒಂದು ಸಣ್ಣ ಕೆಲಸ ಇದೆ. 20 ದಿನಗಳು ಆಗುತ್ತದೆ ಎಂದು ಹೇಳಿದ್ದೆ. ಬಳಿಕ ಏನು ಕೆಲಸ ಎಂದು ಕೇಳಿದರು. ನಾನು ತಮಿಳುನಾಡಿನಲ್ಲಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದೇನೆ. ಅದು ಮುಗಿಯುವವರೆಗೂ ನಾನು ಬರಲು ಆಗುವುದಿಲ್ಲ ಎಂದಿದ್ದೆ. ಬಳಿಕ ಯಶ್​ ಅವರು ನನಗೆ ಶುಭ ಕೋರಿದರು. ಇದಾದ ಕೆಲವೇ ಕ್ಷಣಗಳಲ್ಲಿ ನನ್ನ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಆಯಿತು. ಇನ್ನು ಸಿನಿಮಾ ಪ್ರೊಡಕ್ಷನ್​ ಬಗ್ಗೆಯೇ ತೀರ್ಮಾನವಾಗಿಲ್ಲ ಅಷ್ಟರಲ್ಲೇ ನೀವು ನನಗೆ ಮುಂಗಡ ಪಾವತಿಸಿದಿರಲ್ಲ ಎಂದು ಕೇಳಿದೆ. ಅದಕ್ಕೆ ಯಶ್​, ಈ ಹಣ ಸಿನಿಮಾಗಾಗಿ ಅಲ್ಲ, ನಿಮ್ಮ ದೇವಸ್ಥಾನಕ್ಕೆ ನನ್ನ ದೇಣಿಗೆ ಎಂದು ಹೇಳಿದರು ಅಂತಾ ಇತ್ತೀಚೆಗೆ ನಟಡೆದ ಸಂದರ್ಶನವೊಂದರಲ್ಲಿ ಡೇನಿಯಲ್​ ಬಾಲಾಜಿ ಹೇಳಿಕೊಂಡಿದ್ದರು.

ಇದೀಗ ದೇವಸ್ಥಾನ ನಿರ್ಮಾಣ ಪೂರರ್ತಿಯಾಗಿದ್ದು, ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಖುಷಿಯನ್ನು ಸ್ಥಳಿಯ ಮಾಧ್ಯಮದ ಮುಂದೆ ಹಂಚಿಕೊಂಡಿದ್ದು, ಇದೇ ಸಂದರ್ಭದಲ್ಲಿ ಯಶ್​ ಅವರ ಸಹಾಯವನ್ನು ನೆನೆದಿದ್ದಾರೆ. ಇದೀಗ ದಿಗ್ವಿಜಯ ರಿಪೋರ್ಟರ್ ಜತೆ ನೀವು ಕೇಳಿದ್ದು ಓದಿದ್ದೆಲ್ಲಾ ಸತ್ಯ ಎಂದು ಯಶ್ ಸಹಾಯಕ್ಕೆ ಕೃತಜ್ಙತೆ ಸಲ್ಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)