ಲಾಕ್ಡೌನ್ ಸಮಯವನ್ನು ಊರಿನ ಮನೆಯಲ್ಲಿ ಫ್ಯಾಮಿಲಿಯೊಟ್ಟಿಗೆ ಕಳೆದ ರಿಷಭ್ ಶೆಟ್ಟಿ, ಇದೀಗ ಮತ್ತೆ ಫೀಲ್ಡ್ಗೆ ಇಳಿದಿದ್ದಾರೆ. ಈಗಾಗಲೇ ಅವರ ಅಭಿನಯದ 'ಹರಿಕಥೆ ಅಲ್ಲ ಗಿರಿಕಥೆ' ಎಂಬ ಚಿತ್ರದ ಮುಹೂರ್ತ ಆಗಿದೆ. ಬಹುಶಃ ಸದ್ದಿಲ್ಲದೆ ಚಿತ್ರೀಕರಣ ಸಹ ಶುರುವಾದ ಹಾಗೆ ಕಾಣುತ್ತಿದೆ.
ಇದನ್ನೂ ಓದಿ: ಮತ್ತೆ ಶುರುವಾಯ್ತು ‘ಭಜರಂಗಿ 2’ ಚಿತ್ರದ ಚಿತ್ರೀಕರಣ …
ಈ ಮಧ್ಯೆ, ರಿಷಭ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಇಷ್ಟುದ್ದ ಕೂದಲು, ಗಡ್ಡ ಬಿಟ್ಟಿದ್ದ ಅವರು ಅದನ್ನೆಲ್ಲಾ ಫುಲ್ ಟ್ರಿಮ್ ಮಾಡಿಸಿದ್ದಾರ. ಮೀಸೆ ಸಹ ತೆಗೆದು ಗೋಟಿ ಮಾತ್ರ ಬಿಟ್ಟಿದ್ದಾರೆ. ನ್ಯೂ ಲುಕ್ ಎಂಬ ಕ್ಯಾಪ್ಶನ್ನಡಿ ಈ ಫೋಟೋ ಹಂಚಿಕೊಂಡಿದ್ದಾರೆ.
ರಿಷಭ್ ಅವರ ಈ ನ್ಯೂಲುಕ್ಗೆ ಜನ ತರಹೇವಾರಿ ಕಾಮೆಂಟ್ಗಳನ್ನು ಹಾಕಿದ್ದಾರೆ. 'ರಿಷಭ್ ಸಾರ್ ಬ್ರದರ್ ಇದ್ದ ಹಾಗಿದ್ದಾರೆ ...' ಅಂತ ಒಬ್ಬರು ಬರೆದರೆ, 'ಇದ್ಯಾವುದೋ ಹೊಸ ಸಿನಿಮಾದ ಲುಕ್ ಇರಬಹುದು' ಎಂದು ಇನ್ನೊಬ್ಬರು ಬರೆದಿದ್ದಾರೆ. ಒಬ್ಬರಂತೂ, 'ಮೀಸೆ ಬಿಡೋ ಯಪ್ಪಾ.. ಇಲ್ಲಾಂದ್ರೆ ಕೋತಿಮಿರಿ ಸಪ್ಪು ತರಬೇಕಾಗತ್ತೆ ರಾತ್ರೆ 1ಘಂಟೆಗೆ' ಎಂದು ತಮಾಷೆ ಮಾಡಿದ್ದಾರೆ. ಹೀಗೆ ರಿಷಭ್ ಪೋಸ್ಟ್ಗೆ ತರಹೇವಾರಿ ಕಾಮೆಂಟ್ಗಳು ಸಿಕ್ಕಿವೆ.
ಅಂದಹಾಗೆ, ರಿಷಭ್ ನಿರ್ದೇಶನದ 'ರುದ್ರಪ್ರಯಾಗ' ಚಿತ್ರವು ಸ್ವಲ್ಪ ಮುಂದಕ್ಕೆ ಹೋಗಿದೆ. ಎಲ್ಲಾ ಅಂದುಕೊಂಡಂತೆ ಇಷ್ಟರಲ್ಲಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಚಿತ್ರದ ಗ್ರಾಫಿಕ್ಸ್ ಕೆಲಸಕ್ಕೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ಮತ್ತು ಗ್ರಾಫಿಕ್ಸ್ನಲ್ಲಿ ಚಿರತೆಯೊಂದನ್ನು ಸೃಷ್ಟಿಸಬೇಕಾಗಿರುವುದರಿಂದ, ಚಿತ್ರೀಕರಣ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ.
ಮೊದಲು 'ಗಿರಿಕಥೆ' ಚಿತ್ರವನ್ನು ಮುಗಿಸುವ ರಿಷಭ್, ಆ ನಂತರ 'ರುದ್ರಪ್ರಯಾಗ' ಚಿತ್ರವನ್ನು ಕೈಗೆತ್ತುಕೊಳ್ಳುವ ಸಾಧ್ಯತೆ ಇದೆ. ಇದೆಲ್ಲದೆ ಇನ್ನೊಂದಿಷ್ಟು ಚಿತ್ರಗಳಲ್ಲಿ ರಿಷಭ್ ನಟಿಸುತ್ತಿದ್ದು, ಅವೆಲ್ಲಾ 'ರುದ್ರಪ್ರಯಾಗ' ಮುಗಿದ ನಂತರ ಪ್ರಾರಂಭವಾಗುವ ನಿರೀಕ್ಷೆ ಇದೆ.