ಸಿನಿವಾಣಿ

'ಆರ್​.ಎಕ್ಸ್​ 100' ಗೊತ್ತು, ಈ 'ಆರ್​.ಎಚ್​ 100' ಏನು?

manjunathktgns

ಬೆಂಗಳೂರು: 'ಆಕ್ಟ್​ 1978' ಚಿತ್ರದ ಬಿಡುಗಡೆಯ ನಂತರ ಒಂದೊಂದೇ ಹೊಸ ಚಿತ್ರಗಳು ಬಿಡಗುಡೆಗೆ ಸಜ್ಜಾಗುತ್ತಿವೆ. ಈಗಾಗಲೇ ಮುಂದಿನ ವಾರ 'ಅರಿಷಡ್ವರ್ಗ' ಮತ್ತು 'ಮುಖವಾಡ ಇಲ್ಲದವನು 84' ಚಿತ್ರಗಳು ಬಿಡುಗಡೆಯಾಗುತ್ತಿವೆ. ಇನ್ನು ಡಿಸೆಂಬರ್​ನಲ್ಲಿ 'ಆರ್​.ಎಚ್​ 100' ಎಂಬ ಇನ್ನೊಂದು ಹೊಸಬರ ಚಿತ್ರವು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ.

ಪ್ರಾದೇಶಿಕ ಸೆನ್ಸಾರ್ ಮಂಡಳಿಯು 'ಆರ್​.ಎಚ್​ 100' ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ್ದು ಚಿತ್ರಕ್ಕೆ 'ಎ' ಪ್ರಮಾಣಪತ್ರವನ್ನು ನೀಡಿದೆ. ಪ್ರಮಾಣಪತ್ರ ಸಿಕ್ಕಿರುವ ಚಿತ್ರತಂಡವು ಚಿತ್ರವನ್ನು ಡಿಸೆಂಬರ್​ 18ರಂದು ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದೆ.

'ಆರ್​.ಎಕ್ಸ್​ 100' ಗೊತ್ತು, ಈ 'ಆರ್​.ಎಚ್​ 100' ಎಂದರೇನು? ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಚಿತ್ರತಂಡ ಈ ವಿಷಯವನ್ನು ರಹಸ್ಯವಾಗಿಟ್ಟಿದ್ದು, ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

ಅಂದಹಾಗೆ, ಎಸ್.ಎಲ್.ಎಸ್ ಪ್ರೊಡಕ್ಷನ್ಸ್​ನಡಿ ಹರೀಶ್ ಕುಮಾರ್ ಎಲ್ ನಿರ್ಮಿಸುತ್ತಿರುವ 'ಆರ್​.ಎಚ್​ 100' ಚಿತ್ರವನ್ನು ಮಹೇಶ್ ಎಂ.ಸಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಜ್ ಹಾಗೂ ಸಿದ್ದು ಕೋಡಿಪುರ್ ಹಾಡುಗಳನ್ನು ಬರೆದಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ.

ಇದೊಂದು ಸಂಪೂರ್ಣ ಹೊಸಬರ ಚಿತ್ರವಾಗಿದ್ದು, ಗಣೇಶ್, ಹರ್ಷ್, ಚಿತ್ರ, ಕಾವ್ಯ, ಸೋಮ್, ಸುಹಿತ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.