ಟಾಲಿವುಡ್‌ನ ಬೋಲ್ಡ್ ಡೈರೆಕ್ಟರ್ ಆರ್‌ಜಿವಿ ಅವರು ವಿವಾದಗಳನ್ನು ಬೇಕು ಅಂತಲೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಹೌದು, ಆರ್‌ಜಿವಿಗೆ ವಿವಾದಗಳು ಹೊಸತೇನಲ್ಲ. ಸದ್ಯ, ಪಬ್‌ನಲ್ಲಿ ಒಂದು ನಟಿಯ ಜೊತೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದ ಆರ್‌ಜಿವಿಯ ವಿಡಿಯೋ ಕಂಡು ನೆಟ್ಟಿಗರು ಕಗರಂ ಆಗಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಆರ್‌ಜಿವಿಗೆ ಹುಡುಗಿಯರು, ಪಾರ್ಟಿ, ಪಬ್ಗಳು, ಇದ್ಯಾವುದೂ ಹೊಸತೇನಲ್ಲ. ಹಾಗೆ, ಪಾರ್ಟಿ ಮೂಡಿನಲ್ಲಿ ಕಂಠ ಪೂರ್ತಿ ಎಣ್ಣೆ ಕುಡಿದು, ಆರ್‌ಜಿವಿ ಎನಾದರೂ ಕಿರಿಕ್ ಮಾಡಿಕೊಳ್ಳುತ್ತಾರೆ.
ಹಾಗೆಯೇ, ಈ ಬಾರಿ ಕೂಡ ರಾಮ್ ಗೋಪಾಲ್ ವರ್ಮಾ ನಟಿರಯೊಬ್ಬರ ಜೊತೆ ಪಾರ್ಟಿ ಮಾಡಿದ್ದು, ಎಣ್ಣೆ ಹೊಡೆದಿರುವ ಆ ನಟಿ ಜೊತೆ ಹೆಜ್ಜೆ ಹಾಕಿ, ತಬ್ಬಿಕೊಂಡು, ಮುತ್ತು ಕೂಡ ಕೊಟ್ಟಿದ್ದಾರೆ. ಇನ್ನು, ಅವರ ಆ ಸಿಹಿ ಕ್ಷಣದ ಫೋಟೋಗಳನ್ನು ಒಂದರ ನಂತರ ಮತ್ತೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಅವು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದಿಷ್ಟೇ ಅಲ್ಲದೇ, ತಮ್ಮ ಈ ಫೋಟೋಗಳಿಗೆ ಟೈಟಲ್, ಕ್ಯಾಪ್ಷನ್ ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ. ಇದೀಗ, ಈ ವಿಷಯ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
ಇವರ ಈ ನಡೆ ಹಲವರಿಗೆ ಮುಜುಗರ ತರಿಸಿದೆ. ಅವರ ಫೋಟೋಗೆ ಅತ್ಯುತ್ತಮ ಟೈಟಲ್ ಕೊಟ್ಟವರಿಗೆ 1 ಲಕ್ಷ ನೀಡುವುದಾಗಿ ಹೇಳಿದ್ದು, ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಅಂದಹಾಗೆ, RGV ಮುತ್ತು ಕೊಟ್ಟ ಆ ನಟಿ ಯಾರು ಅಂತೀರಾ? ಅವರು ಆಂಧ್ರದ ನಟಿ ಇನಯಾ ಸುಲ್ತಾನಾ. ತೆಲುಗಿನ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್‌ಜಿವಿ ವಿಡಿಯೋದಲ್ಲಿ ನಟಿಯನ್ನು ಟ್ಯಾಗ್ ಮಾಡಿದ್ದಾರೆ. ಸದ್ಯ, ತಾವು ಶೇರ್ ಮಾಡಿರುವ ಫೋಟೋವನ್ನು RGV ಡಿಲೀಟ್ ಮಾಡಿದ್ದಾರೆ. ಆದರೆ, ವಿಡಿಯೋಗಳು ಮಾತ್ರ ಹಾಗೆ ಇವೆ.