ಸಿನಿವಾಣಿ

ಪಶ್ಚಾತಾಪದ ಮಾತೇ ಇಲ್ಲ ಬೆತ್ತಲಾಗಿ ಆ ಚಿತ್ರದಲ್ಲೂ ನಟಿಸಲು ರೆಡಿ ಎಂದ ನಟಿ ಶ್ವೇತಾ ಮೆನನ್​!

ತಿರುವನಂತಪುರಂ: ಶ್ವೇತಾ ಮೆನನ್​, ಮಲಯಾಳಂ ಸಿನಿರಸಿಕರಲ್ಲಿ ತುಂಬಾ ಪರಿಚಿತ ಹೆಸರು. ಮಾಡೆಲಿಂಗ್​ ಕ್ಷೇತ್ರದಿಂದ ಸಿನಿಮಾಗೆ ಕಾಲಿಟ್ಟ ಶ್ವೇತ ಮೊದಲ ಚಿತ್ರದಲ್ಲೇ ತಮ್ಮ ನೆಚ್ಚಿನ ನಟ ಹಾಗೂ ಸ್ಟಾರ್​ ನಟ ಮುಮ್ಮುಟ್ಟಿ ಅವರೊಂದಿಗೆ ಅನಸ್ವರಮ್ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ತಮಿಳು, ತೆಲುಗು ಮತ್ತು ಬಾಲಿವುಡ್​ ಸಿನಿಮಾಗಳಲ್ಲಿಯೂ ಶ್ವೇತಾ ಬಣ್ಣ ಹಚ್ಚಿದ್ದಾರೆ.

ಇದೀಗ ಬೋಲ್ಡ್​ ಹೇಳಿಕೆ ನೀಡುವ ಮೂಲಕ ಶ್ವೇತಾ ಭಾರಿ ಸುದ್ದಿಯಲ್ಲಿದ್ದಾರೆ. ಇಂದಿಗೂ ನಾನು ರತಿನಿರ್ವೇದಂ ಮತ್ತು ಕಾಮಸೂತ್ರದಲ್ಲಿ ಅಭಿನಯಿಸಲು ರೆಡಿ ಇದ್ದೀನಿ ಎಂದಿದ್ದಾರೆ. ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ ನಾನು ಈವರೆಗೂ ಮಾಡಿದ ಯಾವುದನ್ನು ವಿಮರ್ಶಿಸುವುದಿಲ್ಲ ಮತ್ತು ಪಶ್ಚತಾಪವನ್ನೂ ಪಡುವುದಿಲ್ಲ. ಪ್ರಜ್ಞಾಪೂರ್ವಕವಾಗಿಯೇ ಎಲ್ಲವನ್ನು ಮಾಡಿದ್ದೇನೆ. ನನಗೆ ಅರಿವಿಲ್ಲದೇ ನಾನು ಯಾವುದನ್ನು ಮಾಡಿಲ್ಲ ಎಂದು ಮಾಧ್ಯಮ ಸಂದರ್ಶನದಲ್ಲಿ ಶ್ವೇತಾ ಹೇಳಿದ್ದಾರೆ.

ಬಿಕಿನಿಯಲ್ಲಿ ನಟಿಸುವಂತೆ ಯಾರಾದರೂ ಕೇಳಿದರೆ ನಾನು ಖಂಡಿತವಾಗಿಯೂ ಮಾಡುತ್ತೇನೆ. ಒಂದು ವೇಳೆ ಪಾತ್ರವು ಬೇಡಿಕೆ ಇಟ್ಟರೆ ಬೆತ್ತಲಾಗಿ ನಟಿಸಲು ನಾನು ರೆಡಿಯಾಗಿದ್ದೇನೆ ಎಂದು ಶ್ವೇತಾ ಬೋಲ್ಡ್​ ಆಗಿ ಹೇಳಿಕೆ ನೀಡಿದ್ದಾರೆ. ಕಾಮಸೂತ್ರ ಜಾಹೀರಾತು ಶ್ವೇತಾ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು.

ರತಿನಿರ್ವೇದಂ ರಿಮೇಕ್‌ನಲ್ಲಿ ಮೂಲ ಆವೃತ್ತಿಯಲ್ಲಿ ಜಯಭಾರತಿ ನಿರ್ವಹಿಸಿದ ರತಿ ಚೆಚ್ಚಿ ಪಾತ್ರವನ್ನು ಶ್ವೇತಾ ಮೆನನ್ ನಿರ್ವಹಿಸಿದ್ದಾರೆ. ಶ್ವೇತಾ ಮೆನನ್ ಅವರ ನಟನಾ ವೃತ್ತಿಜೀವನದಲ್ಲಿ ರತಿನಿರ್ವೇದಂ ಒಂದು ವಿಶೇಷ ಚಿತ್ರವಾಗಿ ಇಂದಿಗೂ ಉಳಿದುಕೊಂಡಿದೆ. (ಏಜೆನ್ಸೀಸ್​)