ನವದೆಹಲಿ: ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾರ ಮತ್ತು ಪಾಕ್ ಮಾಜಿ ಆಟಗಾರ ಶೋಯಿಬ್ ಮಲಿಕ್ ವೈವಾಹಿಕ ಸಂಬಂಧ ಮುರಿದುಬಿದ್ದಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಇಷ್ಟು ದಿನ ಸಾನಿಯಾ ಮತ್ತು ಶೋಯಿಬ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿದರೂ ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಮಲಿಕ್ ಅವರು ದಿಢೀರನೇ ಪಾಕ್ ನಟಿ ಸನಾ ಜಾವೇದ್ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್ ವದಂತಿ ಅಧಿಕೃತ ಸ್ವರೂಪ ಪಡೆದುಕೊಂಡಿತು.
ಸನಾ ಜಾವೇದ್ಗೆ ಇದು ಎರಡನೇ ಮದುವೆಯಾದರೆ, ಮಲಿಕ್ಗೆ ಮೂರನೇ ಮದುವೆ. ಇಬ್ಬರ ಮದುವೆಗೆ ಬೆರಳಣಿಕೆಯಷ್ಟೇ ಮಂದಿ ಅಭಿನಂದನೆ ಸಲ್ಲಿಸಿದರು. ಆದರೆ, ಬಹುತೇಕ ಮಂದಿ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪಾಕ್ ಮೀಡಿಯಾಗಳು ಸಹ ಮಲಿಕ್ ವಿರುದ್ಧವೇ ಆರೋಪಗಳ ಸುರಿಮಳೆಗೈದಿವೆ. ಗಮನಾರ್ಹ ಸಂಗತಿ ಏನೆಂದರೆ, ಮಲಿಕ್ ಮದುವೆಗೆ ಅವರ ಕುಟುಂಬಸ್ಥರೇ ಹಾಜರಾಗಿರಲಿಲ್ಲ. ಸಾಕಷ್ಟು ಟೀಕೆಗಳ ನಡುವೆಯೂ ಶೋಯಿಬ್ ಮತ್ತು ಸನಾ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
ಸದ್ಯ ಸನಾ ಮತ್ತು ಶೋಯಿಬ್ ಹನಿಮೂನ್ನಲ್ಲಿದ್ದಾರೆ. ಫೆ.8ರಂದು ಸನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ ಸ್ವಿಮ್ಮಿಂಗ್ಫೂಲ್ ಪಕ್ಕದ ಬೆಡ್ನಲ್ಲಿ ಇಬ್ಬರು ಮಲಗಿದ್ದು, ಹಳದಿ ಮತ್ತು ಬಿಳಿ ಗೆರೆಯ ಟವಲ್ ಹೊದ್ದಿಕೊಂಡಿದ್ದಾರೆ. ಇಬ್ಬರ ಅರ್ಧ ದೇಹ ಮಾತ್ರ ಕಾಣಿಸುತ್ತದೆ. ಸನಾ ಮತ್ತು ಶೋಯಿಬ್ ಹನಿಮೂನ್ ಕ್ಷಣಗಳನ್ನು ಎಂಜಾಯ್ ಮಾಡುತ್ತಿರುವಂತೆ ಕಾಣುತ್ತಿದೆ. ಹೆಚ್ಚಿನ ಮಾಹಿತಿಯನ್ನು ಸನಾ ಹಂಚಿಕೊಂಡಿಲ್ಲ. ಆದರೆ, ಫೋಟೋ ಮಾತ್ರ ಸ್ಪಷ್ಟ ಸುಳಿವು ನೀಡಿದೆ.
ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸನಾ ಮತ್ತು ಶೋಯಿಬ್ರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೇನು ನಾಚಿಕೆಯಾಗಲ್ವಾ ಎಂದು ಕುಟುಕಿದ್ದಾರೆ. ಸನಾ ತನ್ನೊಂದಿಗೆ ಗಂಡನಲ್ಲ ಸಮಸ್ಯೆಯನ್ನು ಹೊತ್ತುಕೊಂಡು ಹೋಗಿದ್ದಾಳೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಮತ್ತೆ ಮದುವೆಯಾಗಲು ನಾಚಿಕೆಯಾಗುವುದಿಲ್ಲವೇ ಎಂಬ ಕಾಮೆಂಟ್ಗಳ ಮೂಲಕ ಇಬ್ಬರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಟೀಕೆಗಳಿಗೆ ಶೋಯಿಬ್ ಉತ್ತರ
ಶಾಡೋ ಪ್ರೊಡಕ್ಷನ್ಸ್ ಮಾಧ್ಯಮದೊಂದಿಗೆ ಇತ್ತೀಚಿಗೆ ನಡೆದ ಪಾಡ್‌ಕಾಸ್ಟ್ ಸಂಚಿಕೆಯಲ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಶೋಯಿಬ್ ತಿರುಗೇಟು ನೀಡಿದರು. ನಿಮ್ಮ ಹೃದಯ ಹೇಳುವುದನ್ನು ನೀವು ಮಾಡಬೇಕು. ಅದನ್ನು ಬಿಟ್ಟು ಜನ ಏನಂದುಕೊಳ್ಳುತ್ತಾರೋ ಅಂತ ಯಾವುದೇ ಕಾರಣಕ್ಕೂ ಯೋಚನೆ ಮಾಡಬಾರದು. ಜನರು ಏನು ಯೋಚಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ 10 ರಿಂದ 20 ವರ್ಷಗಳೇ ಬೇಕಾಗಬಹುದು ಆದರೆ, ನಿಮ್ಮ ಕೆಲಸಗಳನ್ನು ನೀವು ಮಾಡಿ, 20 ವರ್ಷಗಳ ನಂತರ ನಿಮಗೆ ಅರ್ಥವಾದರೂ ಕೂಡ ನಿಮ್ಮ ಹೃದಯ ಹೇಳಿದ ಕೆಲಸದ ಕಡೆ ಗಮನಹರಿಸಿ ಎನ್ನುವ ಮೂಲಕ ಟ್ರೋಲಿಗರಿಗೆ ಶೋಯಿಬ್ ತಿರುಗೇಟು ನೀಡಿದ್ದಾರೆ.
ಸಾನಿಯಾ ಟಾಂಗ್
ತುಂಬಾ ಪ್ರೀತಿಸುವ ಕುಟುಂಬವನ್ನೂ ಬಿಟ್ಟು ಮತ್ತೊಬ್ಬಳ ಹಿಂದೆ ಹೋದ ಮಾಜಿ ಪತಿ ಮಲಿಕ್ಗೆ ಸಾನಿಯಾ ಸರಿಯಾಗಿ ತಿರುಗೇಟು ನೀಡಿದ್ದಾರೆ. ಮಗ ಮತ್ತು ಸೋದರ ಸೊಸೆಯನ್ನು ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡು ನನ್ನ ಜೀವ ರಕ್ಷಕರು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ನಿಮ್ಮ ಜೀವನದಲ್ಲಿ ಜನರು ಸಹ ತಿಳಿದಿಲ್ಲದ ಸಾವಿರ ಸಂಗತಿಗಳನ್ನು ನೀವು ಅನುಭವಿಸಿದ್ದೀರಿ. ನಿಮ್ಮನ್ನು ಬೆಚ್ಚಿಬೀಳಿಸಿದ, ನಿಮ್ಮನ್ನು ಬದಲಾಯಿಸಿದ, ನಿಮ್ಮನ್ನು ಮುರಿದ, ನಿಮ್ಮನ್ನು ನಿರ್ಮಿಸಿದ ಮತ್ತು ನಿಮಗೆ ಕಲಿಸಿದ ವಿಷಯಗಳನ್ನು ಅರಿತುಕೊಂಡಿದ್ದೀರಿ. ಈ ಮೂಲಕ ನೀವು ಯೋಚಿಸಿದ್ದಕ್ಕಿಂತ ಹೆಚ್ಚು ಬಲಶಾಲಿಯಾಗಿದ್ದೀರಿ ಎಂದು ಹೇಳುವ ಮೂಲಕ ಮಲಿಕ್ಗೆ ಟಾಂಗ್ ನೀಡಿದ್ದಾರೆ.
ಡಿವೋರ್ಸ್ ವಿಚಾರ ಶುರುವಾಗಿದ್ದು ಯಾವಾಗ?
2022ರ ನವೆಂಬರ್ 11ರಂದು ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್ ವದಂತಿ ಕತೆ ಇಂದು ಶೋಯಿಬ್, ಸನಾ ಜಾವೇದ್ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್ ಬೇರೆಯಾಗಿರುವುದು ಖಚಿತವಾಗಿದೆ.
ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್)
ಶೀಘ್ರದಲ್ಲೇ ಸಾನಿಯಾ ಜತೆ ಮೊಹಮ್ಮದ್ ಶಮಿ ಮದುವೆ!? ಇಲ್ಲಿದೆ ನೋಡಿ ಅಸಲಿ ಸಂಗತಿ…
ಸಾನಿಯಾ ಮಿರ್ಜಾಗೆ ಮೋಸ! ಕಟು ಟೀಕೆಗಳಿಗೆ ಕೊನೆಗೂ ಉತ್ತರ ನೀಡಿದ ಶೋಯಿಬ್ ಮಲಿಕ್
ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ? ದುಬೈಗೆ ಮರಳಿದ ಮರುಕ್ಷಣವೇ ಮಲಿಕ್ಗೆ ಬಿಗ್ ಶಾಕ್!
ದೂರಾದ ತಂದೆಯಿಂದಾಗಿ ಶಾಲೆಯಲ್ಲಿ ನಿಂದನೆ: ಪುತ್ರನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಾನಿಯಾ