ಸಿನಿವಾಣಿ

ಈ ಪುಟ್ಟ ಹುಡುಗಿ ಯಾರು? ಆಕೆ ಯಾವುದಕ್ಕಾಗಿ ಕಾಯುತ್ತಿದ್ದಾಳೆ?

ಹೈದರಾಬಾದ್​: ಲಾಕ್​ಡೌನ್ ಸಮಯದಲ್ಲಿ ಹಲವು ನಟ-ನಟಿಯರು ತಮ್ಮ ಬಾಲ್ಯದ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ, ತಮ್ಮ ಬಾಲ್ಯದ ದಿನಗಳನ್ನು ನೆನೆಯುತ್ತಾ ಇರುತ್ತಾರೆ. ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ಚಿಕ್ಕಂದಿನ ತಮ್ಮ ಫೋಟೋ ಹಂಚಿಕೊಂಡಿದ್ದು, ಈ ಪೋಟೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಂದಹಾಗೆ, ಈ ನಟಿ ಯಾರು ಗೊತ್ತಾ? ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಸದ್ಯ ಹೈದರಾಬಾದ್​ನಲ್ಲಿರುವ ರಶ್ಮಿಕಾ, ಬಿಡುವಿದ್ದಾಗ, ತಮ್ಮ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಕರೊನಾ ಹೋಗುವುದಕ್ಕೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ರಶ್ಮಿಕಾ, ಮುಂಬೈನಲ್ಲಿ ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆಯೇ ಹೈದರಾಬಾದ್​ಗೆ ವಾಪಸ್ಸಾದರು. ಅಲ್ಲು ಅರ್ಜುನ್​ ಅಭಿನಯದ ಪುಷ್ಪಾ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಅವರು, ತೆಲಂಗಾಣದಲ್ಲಿ ಲಾಕ್​ಡೌನ್​ ಘೋಷಣೆಯಾಗುತ್ತಿದ್ದಂತೆಯೇ, ಹೈದರಾಬಾದ್​ನ ತಮ್ಮ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.