ಬೆಂಗಳೂರು: ಕಿರಿಕ್ ಹುಡುಗಿ ಎಂದೇ ಹೆಸರಾಗಿರುವ ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇದೀಗ ರಾಜ್ಯ-ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಮಾತ್ರವಲ್ಲ ಇನ್ಸ್ಟಾಗ್ರಾಮ್ ಫಾಲೋವರ್ಸ್ ಲೆಕ್ಕದಲ್ಲಿ ಆಕೆ ಇದೀಗ ದಕ್ಷಿಣ ಭಾರತದಲ್ಲೇ ಟಾಪ್-1 ನಟಿ. ಹೀಗಿರುವ ರಶ್ಮಿಕಾ ಇದೀಗ ಒಂದು ವರ್ಷದ ಮಗುವೊಂದನ್ನು ನೋಡಿ ಫಿದಾ ಆಗಿದ್ದಾರೆ.
ಓ ಮೈ ಗಾಡ್.. ಎಷ್ಟು ಚಂದದ ಮಗು, ಹ್ಯಾಪಿ ಬರ್ತ್ಡೇ ಮೈ ಡಾರ್ಲಿಂಗ್. ಬಹುಶಃ ಒಂದು ದಿನ ನಾನು ನಿನ್ನನ್ನು ಭೇಟಿ ಮಾಡುತ್ತೇನೆ ಎಂದು ರಶ್ಮಿಕಾ ಮಂದಣ್ಣ ಆ ಮಗುವಿನ ಕುರಿತಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಮಗುವನ್ನು ರಶ್ಮಿಕಾ ನೋಡಲು ಬಯಸಿರುವುದಕ್ಕೆ ಕಾರಣ ಕೂಡ 'ರಶ್ಮಿಕಾ'ನೇ.
ಅಂದರೆ ನಿನ್ನೆಯಷ್ಟೇ ಮೊದಲ ವರ್ಷದ ಜನ್ಮದಿನ ಆಚರಿಸಲ್ಪಟ್ಟಿರುವ ಆ ಮಗುವಿನ ಹೆಸರು ಕೂಡ ರಶ್ಮಿಕಾ. ನಟಿ ರಶ್ಮಿಕಾ ಮೇಲಿನ ಅಭಿಮಾನದಿಂದ ಆ ಮಗುವಿಗೆ ರಶ್ಮಿಕಾ ಎಂದು ಹೆಸರಿಡಲಾಗಿದ್ದು, ಜನ್ಮದಿನದ ಫೋಟೋವನ್ನು ಟ್ವೀಟ್ ಮಾಡಲಾಗಿದೆ. ಅದನ್ನು ನೋಡಿದ ರಶ್ಮಿಕಾ ತುಂಬಾ ಖುಷಿಯಾಗಿ, ಆ ಮಗುವನ್ನು ಒಂದು ದಿನ ಭೇಟಿ ಆಗುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ಅದು ಬಹುಶಃ ನನ್ನದೇ ಹೆಸರಿನವರೊಬ್ಬರ ಮೊದಲ ಭೇಟಿ ಆಗಿರಬಹುದು ಎಂದೂ ರಶ್ಮಿಕಾ ಹೇಳಿಕೊಂಡಿದ್ದಾರೆ.