ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಲ್ಕು ಚಿತ್ರರಂಗಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ, ಬಾಲಿವುಡ್ಗೂ ಕಾಲಿಟ್ಟ ನಟಿಯ ಹವಾ ಸಿಕ್ಕಾಪಟ್ಟೆ ಜೋರಾಗಿಯೇ ಇದೆ. ಆದರೆ, ಎಷ್ಟೇ ಬ್ಯೂಸಿಯಾಗಿದ್ದರೂ ನಟಿ ವರ್ಕ್ಔಟ್ ಮಾತ್ರ ಮರೆಯುವುದೇ ಇಲ್ಲ. ಇನ್ನು, ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ರಶ್ಮಿಕಾ ತಮ್ಮ ಪ್ರತಿದಿನದ ವರ್ಕ್ಔಟ್ ಬಗ್ಗೆ ಅಭಿಮಾನಿಗಳ ಜತೆಗೆ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆ, ರಶ್ಮಿಕಾ ಹಂಚಿಕೊಳ್ಳುವ ವಿಡಿಯೋ ಅಥವಾ ಫೋಟೋಗಳಿಗೆ ಅವರ ಕಟ್ಟಾಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಾರೆ. ಆದರೆ, ಟ್ರೋಲರ್ಗಳು ಮಾತ್ರ ರಶ್ಮಿಕಾ ಅವರನ್ನ ಒಂದಲ್ಲಾ ಒಂದು ಕಾರಣಕ್ಕೆ ಹಿಗ್ಗಾ-ಮುಗ್ಗಾ ಟ್ರೋಲ್ ಮಾಡಿತ್ತಾರೆ. ಇದು, ರಶ್ಮಿಕಾಗೆ ಹಾಗೂ ಟ್ರೋಲರ್ಗಳಿಗೆ ಸಹಜವಾಗಿದೆ ಎನ್ನಬಹುದು. ಆದರೆ, ಆಗೊಮ್ಮೆ ಈಗೊಮ್ಮೆ ರಶ್ಮಿಕಾ ಟ್ರೋಲರ್ಗಳಿಗೆ ದಿಟ್ಟ ಉತ್ತರಗಳನ್ನು ನೀಡುತ್ತಾರೆ.
ಕೆಲವೊಮ್ಮ ಏನೂ ಪ್ರತಿಕ್ರಿಯಿಸದೆ ಮೌನವಾಗಿದ್ದು ಟ್ರೋಲರ್ಗಳಿಗೆ 'ಐ ಡೋಂಟ್ ಕೇರ್' ಎಂದು ಪರೋಕ್ಷವಾಗಿ ತಿಳಿಸುತ್ತಾರೆ. ಆದರೆ, ಇದೀಗ ಒಂದು ಫೋಟೋ ಶೇರ್ ಮಾಡಿಕೊಳ್ಳುವ ಮುನ್ನವೇ ಟ್ರೋಲರ್ಗಳಿಗೆ ಉತ್ತರ ಕೊಟ್ಟು ನಂತರ ಪೋಸ್ಟ್ ಮಾಡಿದ್ದಾರೆ. ಹೌದು, ‘ನಿಮ್ಮಲ್ಲಿ ತುಂಬ ಜನರಿಗೆ, ಇದು ಇಷ್ಟ ಆಗಲ್ಲ’ ಎಂಬ ಕ್ಯಾಪ್ಷನ್ ಕೊಟ್ಟು ತನ್ನ ವರ್ಕ್ಔಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಆ ಫೋಟೋದಲ್ಲಿ ಅಂತಹದ್ದು ಏನಿದೆ ಅಂತ ಟ್ರೋಲರ್ಗಳಿಗೆ 'ಇಷ್ಟ ಆಗಲ್ಲ' ಎಂದು ಮುಂಚಿತವಾಗಿಯೇ ರಶ್ಮಿಕಾ ಬರೆದುಕೊಂಡಿದ್ದಾರೆ ಎಂಬ ಅನುಮಾನ ಹಲವರಲ್ಲಿ ಸಹಜವಾಗಿಯೇ ಮೂಡಿದೆ. ಈ ಫೋಟೋವನ್ನು ಒಮ್ಮೆ ನೋಡಿ ವೀಕ್ಷಕರೆ. ವರ್ಕ್ಔಟ್ ಮಾಡುವಾಗ ಮಹಿಳೆಯರು ತಮಗೆ ಆರಾಮಗಿರಲಿ ಅಂತ ಫಿಟ್ಟಿಂಗ್ ಇರುವ ಬಟ್ಟೆ ಧರಿಸುವುದು ಸಹಜ. ಇನ್ನು, ಅಂತಹ ಫಿಟ್ಟಿಂಗ್ ಉಡುಪುಗಳಲ್ಲಿ ನಟಿಯರಂತೂ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುವುದು ಕೂಡಾ ಸಹಜ ಎಂದೇ ಹೇಳಬೇಕು.
ರಶ್ಮಿಕಾ ಕೂಡಾ ಅಂತಹ ಫಿಟ್ಟಿಂಗ್ ಇರುವ ಬಟ್ಟೆಯಲ್ಲಿ, ಅದೂ ಸೈಡ್ ಆ್ಯಂಗಲ್ನಲ್ಲಿ ನಿಂತೂ ಅವರ ಮೈಮಾಟ ತೋರಿಸುತ್ತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಸ್ತ್ರೀವಾದಿಗಳಿಗೆ ಮತ್ತು ಟ್ರೋಲರ್ಗಳಿಗೆ ಇದು ಇಷ್ಟ ಆಗಲ್ಲಾ ಎಂದು ಬಹುಶಃ ರಶ್ಮಿಕಾ ಅವರಿಗೆ ಮುಂಚೆಯೇ ಅನಿಸಿರಬೇಕು. ಹಾಗಾಗಿ, ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಈ ಫೋಟೋಗೆ, ''ಈ ಫೋಟೋವನ್ನು ನಾನು ಪೋಸ್ಟ್ ಮಾಡಬಹುದೋ ಇಲ್ಲವೋ ನನಗೆ ಗೊತ್ತಿಲ್ಲ. ನಿಮ್ಮಲ್ಲಿ ತುಂಬ ಜನರಿಗೆ, ಇದು ಇಷ್ಟ ಆಗಲ್ಲ'', ಎಂದು ಬರೆದುಕೊಂಡಿದ್ದಾರೆ.
ಹೀಗಿದ್ದರೂ, ತಾನು ಟ್ರೋಲರ್ಗಳಿಗೆ ಹೆದರುವುದಿಲ್ಲ ಎಂದು ಸಹ ರಶ್ಮಿಕಾ ಮತ್ತೆ ಸಾಬೀತು ಪಡಿಸಿದ್ದಾರೆ. ಅದು ಹೇಗೆ ಅಂತೀರಾ...? ತನ್ನ ಫೋಟೋಗೆ ಕೊಟ್ಟ ಕ್ಯಾಪ್ಷನ್ ಅನ್ನು ಮುಂದುವರಿಸುತ್ತಾ, ''ಆದರೂ, ನಿರಂತರ ಪ್ರಯತ್ನವೇ ನಿಮ್ಮ ಫಿಟ್ನೆಸ್ ಗೋಲ್ಗೆ ತುಂಬ ಮುಖ್ಯವಾದ ಅಂಶ. ವರ್ಕೌಟ್, ಡಯೆಟ್, ಆಲೋಚನೆಗಳು ಮತ್ತು ಜರ್ನಿ ನಿರಂತರವಾಗಿ ಇರಲಿ ಹಾಗೂ ಅದನ್ನು ಎಂಜಾಯ್ ಮಾಡಿ. ಸ್ವಲ್ಪ ಸಮಯದವರೆಗೆ ಈ ಕಷ್ಟ ನಿಮಗೆ ಖುಷಿ ನೀಡದೇ ಇದ್ದರು, ಆ ಕಷ್ಟ ನಿಮಗೆ ಅಭ್ಯಾಸವಾದ ಬಳಿಕ ನಿಮಗೆ ಫಿಟ್ನೆಸ್ ಎಷ್ಟು ಮುಖ್ಯ ಎಂದು ಅರ್ಥವಾಗುತ್ತದೆ'', ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ.
ಈ ಮೂಲಕ, ಯಾರಿಗೆ ಇಷ್ಟ ಇಲ್ಲ ಎಂದರೂ, ತಾನು ಮಾಡಬೇಕು ಅಂದುಕೊಂಡಿದ್ದನ್ನು ಮಾಡುವೆ ಎಂಬಂತೆ ಫೋಟೋ ಶೇರ್ ಮಾಡಿಯೇ ಬಿಟ್ಟರು. ಹಾಗೆಯೇ, ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವ ರಶ್ಮಿಕಾ ಮಂದಣ್ಣ ಫೋಟೋ ಶೇರ್ ಮಾಡುವುದರ ಹಿಂದಿನ ಉದ್ದೇಶ ಕೇವಲ 'ಫಿಟ್ನೆಸ್ನ ಮಂತ್ರ ಫಾಲೋ ಮಾಡಿದರೆ ಸಿಗುವುದರ ಪ್ರಯೋಜನಗಳು ಏನು ಎಂದು ತೋರಿಸಲು ಮಾತ್ರ ಆ ಫೋಟೋ ಹಂಚಿಕೊಂಡಿದ್ದೇನೆ' ಎಂದು ಟ್ರೋಲಿಗರಿಗೆ ತಿಳಿಸಿದಂತೆ ಇದೆ. ಸದ್ಯ, ಫಿಟ್ನೆಸ್ ಪ್ರಿಯರಿಗೆ ಸ್ಫೂರ್ತಿ ನೀಡುವಂತಿರುವ ನಟಿಯ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.