ಟಾಲಿವುಡ್ ನಟ ವಿಜಯ್ ದೇವರಕೊಂಡ ಸದ್ಯ ಖುಷಿ ಮೂಡ್ನಲ್ಲಿದ್ದಾರೆ. ಅದಕ್ಕೆ ಕಾರಣ ಇಂದು (ಮೇ 9) ಅವರ ಜನ್ಮದಿನ. ಇಡೀ ಟಾಲಿವುಡ್ ಸೇರಿ ಚಿತ್ರರಂಗದ ಗಣ್ಯರು, ಕಲಾವಿದರು ಬರ್ತಡೇ ಶುಭಾಶಯ ಕೋರಿದ್ದಾರೆ. ಈ ನಡುವೆ ಅಭಿಮಾನಿಗಳೂ ಸಹ ಬಗೆಬಗೆ ಸಿಡಿಪಿ ತಯಾರಿಸಿ ಫ್ಯಾನ್ ಪೇಜ್ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಜತೆಗೆ ರಶ್ಮಿಕಾ ಮೇಲೂ ಒಂದು ಕಣ್ಣಿಟ್ಟಿದ್ದಾರೆ. ಅರೇ.. ವಿಜಯ್ ದೇವರಕೊಂಡ ಬರ್ತಡೇಗೂ ರಶ್ಮಿಕಾಗೂ ಎಲ್ಲಿಂದ ಎಲ್ಲಿಯ ಸಂಬಂಧ?
ಹೌದು, ‘ಗೀತ ಗೋವಿಂದಂ‘ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದೇ ಬಂತು, ಇಬ್ಬರ ನಡುವೆ ಏನೆನೋ ವದಂತಿಗಳನ್ನು ಸೃಷ್ಟಿಸಿತ್ತು ಅಭಿಮಾನಿ ಬಳಗ. ಅದ್ಯಾವುದಕ್ಕೂ ಕ್ಯಾರೆ ಎನ್ನದೆ, ಯಾವಾಯ್ತು ತಮ್ಮ ಕೆಲಸವಾಯ್ತು ಎಂದುಕೊಂಡಿದ್ದರು ವಿಜಯ್- ರಶ್ಮಿಕಾ. ಅದಾದ ಬಳಿಕ, ‘ಡಿಯರ್ ಕಾಮ್ರೆಡ್‘ ಸಿನಿಮಾದಲ್ಲಿಯೂ ಇವರಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಆ ಚಿತ್ರವೂ ಸಿನಿಮಾ ಪ್ರೇಮಿಗಳ ಮನತಣಿಸಿತ್ತು. ಎರಡು ಹಿಟ್ ಸಿನಿಮಾ ಕೊಟ್ಟ ಮೇಲೆ ಈ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದೇ ವದಂತಿಗಳು ಕೇಳಲಾರಂಭಿಸಿದವು.
ಅದರಲ್ಲೂ ಇಬ್ಬರಲ್ಲಿ ಒಬ್ಬರ ಜನ್ಮ ದಿನ ಬಂದರೆ, ಏನೆಂದು ವಿಶ್ ಮಾಡುತ್ತಾರೆ ಎಂದು ಕಾಯುವುದೇ ಅಭಿಮಾನಿಗಳ ಕೆಲಸವಾಗಿತ್ತು. ಅದರಂತೆ ಇಂದು ವಿಜಯ್ 31 ನೇ ಬರ್ತ್ಡೇ. ಹಾಗಾಗಿ ರಶ್ಮಿಕಾ ವಿಶ್ ಹೇಗಿರಲಿದೆ ಎಂಬ ಕುತೂಹಲ ಫ್ಯಾನ್ಸ್ ಬಳಗದಲ್ಲಿತ್ತು. ಅದಕ್ಕಿಗ ಉತ್ತರ ಸಿಕ್ಕಿದೆ. ‘ಹ್ಯಾಪ ಬರ್ತ್ಡೇ ಟು ಮೈ ಕಾಮ್ರೆಡ್ ದೇವರಕೊಂಡ’ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳ ಆಸೆಯನ್ನೂ ಈಡೇರಿಸಿದ್ದಾರೆ.
ಇತ್ತ ಅದೇ ಪೋಸ್ಟ್ಗೆ ಹಲವರು ಖಾರವಾಗಿಯೂ ಪ್ರತಿಕ್ರಿಸಿದ್ದಾರೆ. ‘ಕನ್ನಡ ಸಿನಿಮಾಕ್ಕೆ ಪರಿಚಯಿಸಿದ ರಕ್ಷಿತ್ ಶೆಟ್ಟಿ ಬರ್ತ್ಡೇಗೆ ವಿಶ್ ಮಾಡಿಲ್ಲ. ಈಗ ವಿಜಯ್ಗೆ ತಪ್ಪದೆ ವಿಶ್ ಮಾಡಿದ್ದೀರಾ’ ಎಂದು ಚಾಟಿ ಬೀಸಿದ್ದಾರೆ.