ಕನ್ನಡ ಭಾಷೆಯ ಬಗ್ಗೆ ಮತ್ತು ಕನ್ನಡ ಸಿನಿಮಾಗಳ ಮೇಲೆ ಪ್ರೀತಿ, ಗೌರವ ಇಲ್ಲದ ಕಾರಣ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ, ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅದರಲ್ಲಿಯೂ, ಈ ಬಾರಿ ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾದ ನಟಿ ರಶ್ಮಿಕಾ ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಮಾರ್ಚ್ 17 ರಂದು ರಾಜ್ಯದೆಲ್ಲೆಡೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹುಬ್ಬವನ್ನು ಅವರು ಈಗ ಭೌತಿಕವಾಗಿ ಇಲ್ಲಿ ಇಲ್ಲದಿದ್ದರೂ, ತುಂಬಾನೆ ವೈಭವವಾಗಿ ಆಚರಿಸಿಲಾಗಿತ್ತು.
ಬೇರೆ ಬೇರೆ ರಾಜ್ಯದ ಸ್ಟಾರ್ ನಟರುಗಳು ಅಪ್ಪು ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿ ಜತೆಗೆ ಅಂದು ರಿಲೀಸ್ ಆದ ನಟನ ಕೊನೆಯ ಸಿನಿಮಾ 'ಜೇಮ್ಸ್' ಹಿಟ್ ಆಗಲಿ ಎಂದು ಆಶಿಸಿದರು. ಆದರೆ, ಕನ್ನಡದ ನಟಿಯಾಗಿ ಜತೆಗೆ ಅಪ್ಪು ಅವರ ಜತೆಗೆ ನಟಿಸಿದರೂ ರಶ್ಮಿಕಾ ಮಂದಣ್ಣ ಮಾತ್ರ ಪುನೀತ್ ರಾಜ್ಕುಮಾರ್ ಅವರನ್ನು ಅಂದು ನೆನಪಿಸಿಕೊಂಡಿಲ್ಲ. ಹೌದು, ಅಪ್ಪು ಅವರು ನಿಧನರಾದಾಗಲೂ ನಟಿ ರಶ್ಮಿಕಾ ಮಂದಣ್ಣ ಅವರು ಅವರ ಬಗ್ಗೆ ಯಾವ ಒಂದು ಮಾಧ್ಯಮದಲ್ಲಿಯೂ ಒಂದು ಮಾತು ಸಹ ಮಾತಾಡಲೂ ಇಲ್ಲ. ಕೇವಲ, ನಟ ಪುನೀತ್ ರಾಜ್ಕುಮಾರ್ ಅವರ ಕೊನೆಯ ದರ್ಶನ ಪಡೆದರು ಹೊರಟರು. ಆಗ, ಅಪ್ಪು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದ್ದರು ರಶ್ಮಿಕಾ ಮಂದಣ್ಣ.
ಇಷ್ಟೆಲ್ಲಾ ಆದ ಬಳಿಕವೂ, ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಅವರು ಟಾಲಿವುಡ್ ನಟ ಅಲ್ಲು ಅರ್ಜುನ್ 40ನೇ ಹುಟ್ಟು ಹಬ್ಬಕ್ಕೆ (ಏಪ್ರಲ್ 8 ರಂದು) ಬೆಳ್ಳಂಬೆಳಗ್ಗೆ ಶುಭಾಶಯಗಳು ತಿಳಿಸಿದ್ದಾರೆ. ಹೀಗೆ, ನಟಿ ರಶ್ಮಿಕಾ ಹಲವು ಬಾರಿ ಹಲವು ಪರಭಾಷೆಯ ನಟ-ನಟಿಯರಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. ಹಾಗಾದರೆ, ರಶ್ಮಿಕಾಗೆ ಕೇವಲ ಪರಭಾಷೆಯ ನಟ-ನಟಿಯರ ಹುಟ್ಟು ಹಬ್ಬ ಮಾತ್ರ ನೆನಪಿರುತ್ತೆ? ಎಂದು ನೆಟ್ಟಿಗರು ಪ್ರಶ್ನಿಸ ತೊಡಗಿದ್ದಾರೆ. ಕರುನಾಡ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬ ನಟಿಗೆ ನೆನಪಿಲ್ಲವೇ? ಎಂದು ಹಿಗ್ಗಾ-ಮುಗ್ಗಾ ಛೀಮಾರಿ ಹಾಕುತ್ತಿದ್ದಾರೆ. ನಟಿ ರಶ್ಮಿಕಾಗೆ ಯಾವಾಗಲೂ ಪರಭಾಷೆಯ ಸೆಲೆಬ್ರಿಟಿಗಳನ್ನು ಮೆಚ್ಚಿಸಲು, ಒಲಿಸಿಕೊಳ್ಳಲು ನಾಚಿಕೆಯಾಗಬೇಕು ಎಂದು ಕೆಲವು ನೆಟ್ಟಿಗರು ಕಿಡಿಕಾರಿದ್ದಾರೆ.