ಸಿನಿವಾಣಿ

ಖಜಾನಾ ಜುವೆಲರಿಗೆ ನಟಿ ರಶ್ಮಿಕಾ ರಾಯಭಾರಿ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಖ್ಯಾತಿ ಗಿಟ್ಟಿಸಿಕೊಂಡಿರುವ ಮತ್ತು ಬಾಲಿವುಡ್​ನಲ್ಲಿಯೂ ಛಾಪು ಮೂಡಿಸುತ್ತಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ‘ಖಜಾನಾ ಜುವೆಲರಿ’ ಬ್ರಾಂಡ್​ನ ರಾಯಭಾರಿಯಾಗಿದ್ದಾರೆ. ಈಗಾಗಲೇ ಹಲವು ಜಾಹೀರಾತುಗಳಿಗೆ ಮುಖವಾಗಿರುವ ರಶ್ಮಿಕಾ ನೂತನವಾಗಿ ‘ಖಜಾನಾ’ ಆಭರಣಗಳು ಮತ್ತು ಅವುಗಳ ವಿಶೇಷತೆಗಳನ್ನು ಹೇಳಿಕೊಳ್ಳಲಿದ್ದಾರೆ. ರಶ್ಮಿಕಾ ಅವರನ್ನು ಆಯ್ದುಕೊಂಡ ಬಗ್ಗೆ ಹೇಳಿಕೊಳ್ಳುವ ಖಜಾನಾ ಜುವೆಲರಿಯ ಮುಖ್ಯಸ್ಥ ಕಿಶೋರ್ ಕುಮಾರ್ ಜೈನ್, ‘ದೇಶದ ಎಲ್ಲೆಡೆ ತಮ್ಮದೆ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರು, ಇದೀಗ ಖಜಾನಾ ಬ್ರಾಂಡ್​ಗೆ ರಾಯಭಾರಿಯಾಗಿದ್ದು, ಖುಷಿ ನೀಡಿದೆ. ಶೀಘ್ರದಲ್ಲಿಯೇ ಪ್ರಚಾರ ಕೆಲಸ ಶುರುವಾಗಲಿದೆ’ ಎಂದಿದ್ದಾರೆ. ಅದೇ ರೀತಿ ರಶ್ಮಿಕಾ ಸಹ ಮಾತನಾಡಿದ್ದಾರೆ. ‘ಅತ್ಯಾರ್ಷಕ ಆಭರಣಗಳು ಖಜಾನಾದಲ್ಲಿವೆ. ಈ ಬ್ರಾಂಡ್​ನ ಮುಖವಾಗಿದ್ದಕ್ಕೆ ಹೆಮ್ಮೆ ಇದೆ’ ಎಂದಿದ್ದಾರೆ. ಚೆನ್ನೈನಲ್ಲಿ 1993ರಲ್ಲಿ ಖಜಾನಾ ಮಳಿಗೆ ಆರಂಭಿಸಿದ್ದ ಕಿಶೋರ್ ಕುಮಾರ್ ಜೈನ್, ಇದೀಗ ದೇಶಾದ್ಯಂತ 50ಕ್ಕೂ ಅಧಿಕ ಶೋರೂಮ್ಳನ್ನು ಹೊಂದಿದೆ.