ಸಿನಿವಾಣಿ

ಗೇಮ್​​ ಚೇಂಜರ್​ ಕಲೆಕ್ಷನ್​: ಟಾಲಿವುಡ್​ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ ರಾಮ್​ ಗೋಪಾಲ್​ ವರ್ಮಾ ಟ್ವೀಟ್​! Ram Gopal Varma

Ram Gopal Varma : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ( RGV ) ಅವರು ತಮ್ಮ ಸಿನಿಮಾಗಳಿಗಿಂತ ವಿವಾದಗಳಿಂದಲೇ ಸುದ್ದಿ ಮಾಡಿದ್ದು ಹೆಚ್ಚು. ಆರ್​ಜಿವಿ ಮಾತನಾಡುವ ಶೈಲಿ, ಅಭಿಪ್ರಾಯ ವ್ಯಕ್ತಪಡಿಸುವ ರೀತಿ ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ. ಯಾವುದೇ ವಿಷಯದ ಬಗ್ಗೆ ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುತ್ತಾರೆ. ಅದಕ್ಕಾಗಿಯೇ ಆರ್‌ಜಿವಿ ಸೆನ್ಸೇಷನಲ್ ನಿರ್ದೇಶಕ ಎಂಬ ಹೆಸರು ಗಳಿಸಿದ್ದಾರೆ.

ಇದೀಗ ಆರ್​ಜಿವಿ ಅವರು ನಟ ರಾಮ್​ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾದ ಕುರಿತು ಇತ್ತೀಚೆಗೆ ಮಾಡಿರುವ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಆರ್​ಜಿವಿ ಮಾಡಿದ ಟ್ವೀಟ್​ ಏನು ಎಂಬುದನ್ನು ನಾವೀಗ ತಿಳಿಯೋಣ.

ರಾಮ್​ಚರಣ್​ ಅಭಿನಯದ ಮತ್ತು ಆರ್​. ಶಂಕರ್​ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಯಿತು. ಈ ಸಿನಿಮಾ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಅಲ್ಲದೆ, ಮೊದಲ ದಿನ 186 ಕೋಟಿ ರೂ. ಗಳಿಕೆಯಾಗಿ ಎಂದು ಚಿತ್ರತಂಡವೇ ಹೇಳಿಕೊಂಡಿದೆ. ಅಲ್ಲದೆ, ಈ ಸಿನಿಮಾಗೆ 450 ಕೋಟಿ ರೂ. ಖರ್ಚಾಗಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಆರ್​ಜಿವಿ ಮಾರ್ಮಿಕವಾಗಿ ಟ್ವೀಟ್​ ಮಾಡಿದ್ದಾರೆ.

ಗೇಮ್​ ಚೇಂಜರ್ ಚಿತ್ರಕ್ಕೆ 450 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಲೆಕ್ಕಾಚಾರದ ಪ್ರಕಾರ, ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರಕ್ಕೆ 4500 ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ಅದೇ ರೀತಿ 'ಗೇಮ್ ಚೇಂಜರ್' ಮೊದಲ ದಿನ 186 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಅಲ್ಲು ಅರ್ಜುನ್ ಅವರ 'ಪುಷ್ಪ-2' ಚಿತ್ರ 1860 ಕೋಟಿ ರೂಪಾಯಿ ಕಲೆಕ್ಷನ್ ಮಾಡಬೇಕಿತ್ತು ಎಂದು ಆರ್​ಜಿವಿ ಅವರು ಮಾರ್ಮಿಕವಾಗಿ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಇಲ್ಲಿ ಅಗತ್ಯವಿರುವ ಮೂಲ ತತ್ವವೆಂದರೆ ಸತ್ಯವು ನಂಬುವ ರೀತಿ ಇರಬೇಕು. ಅಲ್ಲದೆ, ಸುಳ್ಳು ಹೇಳಿದರು ಕೂಡ ನಂಬುವ ರೀತಿ ಇರಬೇಕೆಂದು ಆರ್​ಜಿವಿ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ, ಟ್ವೀಟ್​ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಅಂದಹಾಗೆ ರಾಮ್​ಚರಣ್-ಶಂಕರ್ ಕಾಂಬೋದಲ್ಲಿ ಮೂಡಿಬಂದ 'ಗೇಮ್ ಚೇಂಜರ್' ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಇದೊಂದು ರಾಜಕೀಯ ಆಕ್ಷನ್ ಥ್ರಿಲ್ಲರ್ ಸಿನಿಮಾ. ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೇಮ್ ಚೇಂಜರ್ ಚಿತ್ರವು ಮೊದಲ ದಿನ ವಿಶ್ವದಾದ್ಯಂತ 186 ಕೋಟಿ ರೂ.ಗಳ ಒಟ್ಟು ಕಲೆಕ್ಷನ್ ಗಳಿಸಿದೆ ಎಂದು ತಯಾರಕರು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಈ ಚಿತ್ರದ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ನಮಗೆ ಕಾಮೆಂಟ್​ ಮಾಡಿ ತಿಳಿಸಿ. (ಏಜೆನ್ಸೀಸ್​)