ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ಎಂದು ದೂರಿದ್ದು, ಆತನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದು ಎಲ್ಲವೂ ಸುದ್ದಿಯಾಗಿದೆ. ಅತ್ತ ಗಂಡ ಆದಿಲ್ ದುರ್ರಾನಿ ಅರೆಸ್ಟ್ ಆಗುತ್ತಿದ್ದಂತೆಯೇ, ಇತ್ತ ರಾಖಿ ಮಾಧ್ಯಮದವರ ಎದುರು ಕುಸಿದು ಬಿದ್ದಿದ್ದಾರೆ.
ಕಳೆದ ವಾರ ಗಂಡನ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹೊರಿಸಿದ ಮೇಲೆ ರಾಖಿ ತನ್ನ ಗಂಡನ ವಿರುದ್ಧ ಪೊಲೀಸ್ ಸ್ಟೇಶನ್ ಮೆಟ್ಟಿಲು ಏರಿದ್ದರು. ವರದಕ್ಷಿಣಿ ಕೇಸ್ನ ಜತೆಗೆ ಕಳತ್ತನ ಮತ್ತು ಹಳೆ ನಡೆಸಿದ ಆರೋಪಗಳನ್ನೂ ಹೊರಿಸಿದ್ದರು. ಓಶಿವಾರಾ ಪೊಲೀಸ್ನವರು ಆದಿಲ್ನನ್ನು ಬಂಧಿಸಿ ನಡೆಸುತ್ತಿರುವಾಗಲೇ, ಇತ್ತ ರಾಖಿ ಮೂರ್ಛೆ ಹೋಗಿದ್ದಾರೆ.
ಬುಧವಾರ ಮಾಧ್ಯಮದವರನ್ನು ರಾಖಿ ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ಆದಿಲ್ನಿಂದ ತನಗೆ ಏನೆಲ್ಲಾ ಆಯಿತು ಎಂದು ಹೇಳಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದ ಮೇಲೆ ಆದಿಲ್, ಇಡೀ ದಿನ ರಾಖಿಗೆ ಪೋನ್ ಮಾಡುತ್ತಿದ್ದರಂತೆ. ಇದನ್ನೆಲ್ಲ ವಿವರಿಸುವಾಗ, ರಾಖಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಕಾರ್ನಲ್ಲಿ ಕೂರಿಸಿ, ನೀರು ಕುಡಿಸಿದಾಗ ಅವರು ಮತ್ತೊಮ್ಮೆ ಎದ್ದು ಕುಳಿತಿದ್ದಾರೆ.
ರಾಖಿ ಇದಕ್ಕೂ ಮುನ್ನ ರಿತೇಶ್ ಎಂಬಾತನನ್ನು ಮದುವೆಯಾಗಿದ್ದರು. ಇಬ್ಬರೂ 'ಬಿಗ್ ಬಾಸ್ 15' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಕಾರಣಾಂತರಗಳಿಂದ ಕಳೆದ ವರ್ಷ ದೂರಾವಾಗಿದ್ದರು. ಇದಾದ ಮೇಲೆ ಮೈಸೂರು ಮೂಲದ ಆದಿಲ್ ಎಂಬಾತನನ್ನು ರಾಖಿ ಮದುವೆಯಾಗಿದ್ದು, ಈಗ ಆ ಮದುವೆಯೂ ಮುರಿದುಬಿದ್ದಿದೆ.