ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ಆರ್ಆರ್ಆರ್ ಚಿತ್ರತಂಡ, ಇನ್ನೇನು ಮಿಕ್ಕ ಶೂಟಿಂಗ್ ಶುರುಮಾಡಿಕೊಳ್ಳಲು ಅಣಿಯಾಗಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಅದು ಮುಂದೂಡುತ್ತಲೇ ಬಂದಿತು. ಇನ್ನೇನು ಶೂಟಿಂಗ್ಗೆ ಚಾಲನೆ ಸಿಕ್ಕಿತು ಎನ್ನುವಷ್ಟರಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ಮತ್ತೆ ವಿಳಂಬವಾಯಿತು. ಹಾಗಾಗಿ ರಾಜಮೌಳಿ ಸದ್ಯ ಆರ್ಆರ್ಆರ್ ಸಿನಿಮಾ ಕಯ ಬಿಟ್ಟು ಫಾರ್ಮ್ ಹೌಸ್ನತ್ತ ನಡೆದಿದ್ದಾರೆ!
ಹೌದು, ಲಾಕ್ಡೌನ್ ಅವಧಿಯಲ್ಲಿಯೇ ಆರ್ಆರ್ಆರ್ ಸಿನಿಮಾದ ಕೆಲಸಗಳ ಜತೆಗೆ ಮಹೇಶ್ ಬಾಬು ಜತೆಗಿನ ಸಿನಿಮಾವನ್ನೂ ಘೋಷಣೆ ಮಾಡಿದ್ದರು ರಾಜಮೌಳಿ. ಅಭಿಮಾನಿಗಳಿಗೂ ಈ ಸುದ್ದಿ ಖುಷಿಯ ಜತೆಗೆ ಕುತೂಹಲಕ್ಕೂ ಕಾರಣವಾಗಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಮಹೇಶ್ ಬಾಬು ಸಿನಿಮಾದತ್ತ ದೃಷ್ಟಿಹಾಯಿಸಿದ್ದಾರೆ ರಾಜಮೌಳಿ. ಹೈದರಾಬಾದ್ ಬಳಿಕ ನೆರಕೆಟ್ಪಲ್ಲಿ ಫಾರ್ಮ್ಹೌಸ್ನಲ್ಲಿ ಕುಟುಂಬದ ಜತೆ ತಂಗಿದ್ದು, ಆ ಚಿತ್ರದ ಬಗ್ಗೆಯೇ ಹೆಚ್ಚು ಕೆಲಸ ಮಾಡುತ್ತಿದ್ದಾರಂತೆ.
ಇದನ್ನೂ ಓದಿ: ಈ ಮಿಲ್ಕಿ ಬ್ಯೂಟಿಗೆ ಕಾಜಲ್ ತರಹ ಆಗೋ ಆಸೆಯಂತೆ!
ಈಗಾಗಲೇ ಮಹೇಶ್ ಬಾಬು ಜತೆಗಿನ ಸಿನಿಮಾದ ಬಹುತೇಕ ಚಿತ್ರಕತೆ ಕೊನೇ ಹಂತಕ್ಕೆ ಬಂದಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರದ ಪೂರ್ತಿ ಸ್ಕ್ರಿಪ್ಟ್ ಸಿದ್ಧವಾಗಲಿದೆಯಂತೆ. ಅದರ ಜತೆಗೆ ಇನ್ನುಳಿದ ಪಾತ್ರವರ್ಗದ ಆಯ್ಕೆಯನ್ನೂ ಮಾಡಿಕೊಂಡು, ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದ್ದಾರೆ. ಇನ್ನು ಕೆಲ ದಿನಗಳು ಕಳೆದಂತೆ ಆರ್ಆರ್ಆರ್ ಚಿತ್ರದ ಶೂಟಿಂಗ್ಗೆ ಚಾಲನೆ ನೀಡಲಿದ್ದಾರೆ. (ಏಜೆನ್ಸೀಸ್)