ಸಿನಿವಾಣಿ

ರೈ - ದ ಗ್ರೇಟೆಸ್ಟ್ ಗ್ಯಾಂಗ್​ಸ್ಟರ್ ಎವರ್ - ಹೀಗೊಂದು ಫಿಲಂ ತೆರೆ ಕಾಣಬೇಕಿತ್ತು; ಆರ್​ಜಿವಿ ರಿಲೀಸ್ ಮಾಡಿದ್ದು ಫಸ್ಟ್​ ಲುಕ್ ಮಾತ್ರ!

ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಇನ್ನಿಲ್ಲ. ಈ ಹೊತ್ತಲ್ಲಿ ಸಾಮಾನ್ಯ ನಡುವೆ ಮಾತುಕತೆಯ ಕೇಂದ್ರ ಬಿಂದು ಮುತ್ತಪ್ಪ ರೈಯೇ ಹೊರತು ಬೇರಾರೂ ಅಲ್ಲ. ಹೌದು, ಭೂಗತ ದೊರೆಯಾಗಿದ್ದ ಮನುಷ್ಯ ಸಮಾಜ ಸೇವಕನಾಗಿ ಜನಾನುರಾಗಿಯಾಗಿ ರೂಪುಗೊಂಡದ್ದು, ಕಾನೂನಿನ ಕುಣಿಕೆಗಳಿಂದ ತಪ್ಪಿಸಿಕೊಂಡದ್ದು ಹೇಗೆ? ಅಪರಾಧ ಪ್ರಪಂಚಕ್ಕೆ ಇಳಿದರೆ ಹೊರಬರಲಾಗದು ಎಂಬುದು ಒಂದು ರೀತಿಯಲ್ಲಿ ಸಾರ್ವಕಾಲಿಕ ಸತ್ಯ. ಆದರೆ ಅದು ರೈ ವಿಷಯದಲ್ಲಿ ಅಲ್ಲ!

ಆರ್​ಜಿವಿ ಎಂದೇ ಪ್ರಸಿದ್ಧರಾದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 2016ರ ಮೇ1 ರಂದು ಬಿಡುಗಡೆ ಮಾಡಿದ 'ರೈ ಸಿನಿಮಾದ ಫಸ್ಟ್ ಲುಕ್​ ನಲ್ಲೂ ಇದೇ ವಿಷಯ ಗಮನಸೆಳೆಯುತ್ತದೆ. ವಿವೇಕ್ ಒಬೆರಾಯ್​ ಅವರನ್ನು ತೆರೆಯ ಮೇಲೆ ಮುತ್ತಪ್ಪ ರೈ ಆಗಿ ಪ್ರದರ್ಶಿಸುವುದಕ್ಕೆ ಆರ್​ಜಿವಿ ಸಿದ್ಧತೆ ನಡೆಸಿದ್ದರು. ಈ ಸಿನಿಮಾದ ಕಿಕ್ಕರ್ ದ ಗ್ರೇಟೆಸ್ಟ್ ಗ್ಯಾಂಗ್​ಸ್ಟರ್ ಎವರ್​ . ಸಿ.ಆರ್​. ಮನೋಹರ್ ನಿರ್ಮಾಪಕರು ಎನ್ನುವ ಮಾಹಿತಿ ಇದೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಸಿನಿಮಾ ನಿರ್ಮಿಸುವ ಚಿಂತನೆಯಲ್ಲಿದ್ದರು ಅವರು.

ಈ ಸಿನಿಮಾ ಅವರ ಮಹತ್ವಾಕಾಂಕ್ಷೆಯ ಸಿನಿಮಾ ಆಗಿತ್ತು. ಆದರೆ, ದುರದೃಷ್ಟವಶಾತ್​ ಫಸ್ಟ್​ ಲುಕ್ ಬಳಿಕ ಸಿನಿಮಾ ನಿರ್ಮಾಣ ಮುಂದೆ ಸಾಗಲಿಲ್ಲ. ವಿಶೇಷ ಅಂದರೆ ರೈ ಸಿನಿಮಾದ ಫಸ್ಟ್ ಲುಕ್ ಭರ್ಜರಿಯಾಗಿದ್ದು ಇದುವರೆಗೆ 16.5 ಲಕ್ಷ ವ್ಯೂವ್ಸ್​ ಕಂಡಿದೆ. ಅದರ ಲುಕ್ ಇಲ್ಲಿದೆ ನೋಡಿ..