ಉದ್ಯಮಿಯ ಹತ್ಯೆಗೆ ಸ್ಕೆಚ್ ಹಾಕಿದ್ರಾ 'ಸಮಾಜ ಸೇವಕ' ಮುತ್ತಪ್ಪ ರೈ?

Muttappa
Published on

ಬೆಂಗಳೂರು: ಭೂಗತ ಲೋಕದ ಮಾಜಿ ಪಾತಕಿ ಮುತ್ತಪ್ಪ ರೈ "ಸಮಾಜ ಸೇವಕ"ರಾಗಿ, ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾಗಿ ಜನರ ಗಮನಸೆಳೆದವರು. ಇತ್ತೀಚೆಗೆ ಕ್ಯಾನ್ಸರ್ ಕಾರಣಕ್ಕೆ ಇಡೀ ರಾಜ್ಯದ ಗಮನ ಸೆಳೆದ ಅವರೀಗ ಮತ್ತೆ ಹಳೆಯ ದಂಧೆಗೆ ಮುಂದಾಗಿದ್ದಾರಾ? ಉದ್ಯಮಿಯ ಹತ್ಯೆಗೆ ಸ್ಕೆಚ್ ಹಾಕಿರುವ ಆರೋಪ ಅವರನ್ನೀಗ ಮತ್ತೆಯ ಸುದ್ದಿಯ ಮುನ್ನೆಲೆಗೆ ತಂದು ನಿಲ್ಲಿಸಿದೆ.

ಉದ್ಯಮಿ ರಾಕೇಶ್ ಮಲ್ಲಿ ಹತ್ಯೆಗೆ ಮುತ್ತಪ್ಪ ರೈ ಸ್ಕೆಚ್ ಹಾಕಿದ್ದರೆಂಬ ವಿಚಾರ ಈಗ ಸದ್ದುಮಾಡುತ್ತಿದೆ. ರಾಕೇಶ್ ಮಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ದಿಗ್ವಿಜಯ ನ್ಯೂಸ್ ಜತೆಗೆ ಮಾತನಾಡಿರುವ ರಾಕೇಶ್ ಮಲ್ಲಿ, ಬಂಟ್ವಾಳದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ರಿಯಲ್ ಎಸ್ಟೇಟ್​ನಲ್ಲಿ ಯಾವುದೇ ದಾಖಲೆಗಳಿಲ್ಲದೆ ಹಣ ಹೂಡಿಕೆ ಮಾಡಿದ್ದು, ಅದನ್ನು ವಾಪಸ್ ಕೇಳಿದ್ದಕ್ಕೆ ರೈ ತನ್ನ ಹತ್ಯೆ ಸ್ಕೆಚ್ ಹಾಕಿದ್ದಾರೆ ಎಂದು ಉದ್ಯಮಿ ರಾಕೇಶ್ ಮಲ್ಲಿ ಆರೋಪಿಸಿದ್ದಾರೆ.

ನನ್ನ ಮತ್ತು ಇತರೆ ಕೆಲವರ ಪಾಲುದಾರಿಕೆಯೊಂದಿಗೆ ಬಂಟ್ವಾಳದಲ್ಲಿ ಖರೀದಿಸಿದ ಜಮೀನನ್ನು ಮುತ್ತಪ್ಪ ರೈ ಭೂಮಿಯನ್ನು ಮಕ್ಕಳ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಈ ಬಗ್ಗೆ ಕಳೆದ ಕೆಲವು ತಿಂಗಳಿಂದ ಪ್ರಶ್ನಿಸುತ್ತಿರುವ ನನ್ನನ್ನು ಹತ್ಯೆ ಮಾಡಲು ರೈ ತನ್ನ ಸಂಬಂಧಿ ಮನ್ವಿತ್ ರೈಗೆ ಸುಪಾರಿ ಕೊಟ್ಟಿದ್ದರು. ಆದರೆ ಮನ್ವಿತ್ ಈ ವಿಷಯವನ್ನು ನನಗೆ ತಿಳಿಸಿದ್ದ. ಈಗ ಆತನ ಹತ್ಯೆಗೂ ಮುತ್ತಪ್ಪ ರೈ ಸ್ಕೆಚ್​ ಹಾಕಿದ್ದ ಎಂದು ರಾಕೇಶ್ ಮಲ್ಲಿ ದೂರಿದ್ದು, ಪೂರ್ಣ ವಿವರಕ್ಕಾಗಿ ವಿಡಿಯೋ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net