ಸಿನಿವಾಣಿ

ಶ್ರೀಲೀಲಾ ನನ್ನ ಮಗಳಲ್ಲ, ಆಕೆ ಡಿವೋರ್ಸ್​ ಬಳಿಕ ಜನಿಸಿದಳು! ಮೊದಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ ನಟಿ

ಹೈದರಾಬಾದ್​: ಚಿತ್ರರಂಗಕ್ಕೆ ಈಗಷ್ಟೇ ಪ್ರವೇಶ ನೀಡಿ ಮೊದಲ ಚಿತ್ರದಲ್ಲೇ ಕನ್ನಡಿಗರ ಮನಗೆದ್ದಿರುವ ನಟಿ ಶ್ರೀಲೀಲಾ, ಇದೀಗ ವೈಯಕ್ತಿಕ ವಿಚಾರಗಳಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ನಿನ್ನೆ ತೆರೆಕಂಡಿರುವ ಪೆಳ್ಳಿಸಂದ ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಶ್ರೀಲೀಲಾ ಪಾದರ್ಪಣೆ ಮಾಡಿದ್ದಾರೆ.

ಪೆಳ್ಳಿಸಂದ ಡಿ ಚಿತ್ರ ಒಳ್ಳೆಯ ಆರಂಭ ಪಡೆದುಕೊಂಡಿದ್ದು, ಶ್ರೀಲೀಲಾರ ಬ್ಯೂಟಿ ಮತ್ತು ಡ್ಯಾನ್ಸ್​ಗೆ ತೆಲುಗು ಚಿತ್ರರಂಗದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಬಿಡುಗಡೆ ಒಂದು ಕಡೆಯಾದರೆ, ಶ್ರೀಲೀಲಾ ಇದೀಗ ವೈಯಕ್ತಿಯ ವಿಚಾರದಿಂದ ಭಾರೀ ಸುದ್ದಿಯಾಗಿದ್ದಾರೆ. ಶ್ರೀಲೀಲಾ ಅವರು ತೆಲುಗಿನ ಖ್ಯಾತ ಉದ್ಯಮಿ ಸೂರಪನೇನಿ ಸುಭಾಕರ ರಾವ್​ ಅವರ ಮಗಳು ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ವರದಿಗಳನ್ನು ನೋಡಿದ ಸುಭಾಕರ ರಾವ್​ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಶ್ರೀಲೀಲಾ ನನ್ನ ಮಗಳಲ್ಲ. ನನ್ನ ಪತ್ನಿಯ ಜತೆ ಡಿವೋರ್ಸ್​ ಆದ ಬಳಿಕ ಆಕೆ ಶ್ರೀಲೀಲಾಗೆ ಜನ್ಮ ನೀಡಿದ್ದಾಳೆ. ಡಿವೋರ್ಸ್​ ಕೇಸ್​ ಇನ್ನು ಕೋರ್ಟಿನಲ್ಲಿ ಬಾಕಿ ಇದೆ. ನಾನು ಅವಳ ತಂದೆಯಲ್ಲ. ಶ್ರೀಲೀಲಾ ಮಾಧ್ಯಮಗಳ ಸಂದರ್ಶನದಲ್ಲಿ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದೆ ನನ್ನ ಹೆಸರು ಉಲ್ಲೇಖಿಸುತ್ತಿದ್ದಾರೆಂದು ಹೇಳಿದ್ದಾರೆ.

ಇನ್ನು ಸುಭಾಕರ ರಾವ್​ ನೀಡಿರುವ ಹೇಳಿಕೆ ಬಗ್ಗೆ ಶ್ರೀಲೀಲಾ ಹಾಗೂ ಅವರ ತಾಯಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ನಿರ್ದೇಶಕ ಎ.ಪಿ. ಅರ್ಜುನ್​ ಅವರ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನಸ್ಸು ಗೆದ್ದರು. ಬಳಿಕ ಶ್ರೀ ಮುರುಳಿ ಜತೆ ಭರಾಟೆ ಚಿತ್ರದಲ್ಲಿ ನಟಿಸಿದರು. ನಿನ್ನೆ ತೆರೆಕಂಡಿರೋ ಪೆಳ್ಳಿಸಂದ ಡಿ ಚಿತ್ರದ ಮೂಲಕ ಟಾಲಿವುಡ್​ಗೂ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. (ಏಜೆನ್ಸೀಸ್​)