ವೈಷ್ಣವಿ ಗೌಡ ಮತ್ತು ದಿವ್ಯಾ ಉರುಡುಗ 
ಸಿನಿವಾಣಿ

ಕೊನೆಯ ಹಂತದಲ್ಲಿ ತಲೆಕೆಳಗಾಗುತ್ತಾ ಎಲ್ಲರ ಲೆಕ್ಕಾಚಾರ? ದಿವ್ಯಾ ಉರುಡುಗಗೆ ವೈಷ್ಣವಿ ಗೌಡ ಶಾಕ್​..!

ಬೆಂಗಳೂರು: ಬಿಗ್​​ಬಾಸ್​ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಇನ್ನೂ ಮೂರೇ ದಿನಗಳಲ್ಲಿ ಈ ಬಾರಿ ಬಿಗ್​ಬಾಸ್​ ವಿನ್ನರ್​ ಯಾರೆಂಬುದು ಅಧಿಕೃತವಾಗಿ ಬಹಿರಂಗವಾಗಲಿದೆ. ಇದರ ನಡುವೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಯಾರಿರಲಿದ್ದಾರೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ.

ಫೈನಲ್​ನಲ್ಲಿ ಅರವಿಂದ್​ ಕೆ.ಪಿ., ದಿವ್ಯಾ ಉರುಡುಗ, ವೈಷ್ಣವಿ ಗೌಡ, ಮಂಜು ಪಾವಗಡ ಮತ್ತು ಪ್ರಶಾಂತ್​ ಸಂಬರಗಿ ಇರಲಿದ್ದಾರೆ. ಇದು ಅಧಿಕೃತವೂ ಹೌದು. ಗ್ರ್ಯಾಂಡ್​ ಫಿನಾಲೆ ವೇಳೆ ಕೊನೆಯ ಸುತ್ತಿನ ಎಲಿಮಿನೇಶನ್​ ರೌಂಡ್​ ಸಹ ನಡೆಯಲಿದೆ. ಈ ಬಾರಿಯ ಟ್ರೋಫಿ ಮತ್ತು ನಗದು ಬಹುಮಾನಕ್ಕೆ ಅರವಿಂದ್​ ಮತ್ತು ಮಂಜು ಪಾವಗಡ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂಬ ಚರ್ಚೆ ಶುರುವಾಗಿದೆ.

ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಯಾರಿರಲಿದ್ದಾರೆ ಎಂಬ ಚರ್ಚೆಯು ಮುನ್ನೆಲೆಗೆ ಬಂದಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ದಿವ್ಯಾ ಉರುಡುಗ ಅವರನ್ನು ವೈಷ್ಣವಿ ಹಿಂದಿಕ್ಕಿದ್ದಾರೆ ಎನ್ನಲಾಗಿದೆ. ಅಂದರೆ ಮೂರನೇ ಸ್ಥಾನವನ್ನು ವೈಷ್ಣವಿ ಮತ್ತು ನಾಲ್ಕನೇ ಸ್ಥಾನದಲ್ಲಿ ದಿವ್ಯಾ ಉರುಡುಗ ಹಾಗೂ ಐದನೇ ಸ್ಥಾನದಲ್ಲಿ ಸಂಬರಗಿ ಇರಲಿದ್ದಾರೆ ಎನ್ನಲಾಗುತ್ತಿದೆ.

ಈ ವಾರ ಮಧ್ಯದಲ್ಲಿ ನಡೆದ ಎಲಿಮಿನೇಶ್​ ಸುತ್ತಿನಲ್ಲಿ ವೋಟಿನ ಆಧಾರದ ಮೇಲೆ ಸ್ಪರ್ಧಿಗಳನ್ನು ಉಳಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಂತೆ ಕ್ರಮವಾಗಿ ಅರವಿಂದ್​, ವೈಷ್ಣವಿ, ಮಂಜು, ದಿವ್ಯಾ ಉರುಡುಗ ಮತ್ತು ಪ್ರಶಾಂತ್​​ ಐವರು ಫೈನಲ್​ ಸ್ಪರ್ಧಿಗಳಾಗಿ ಉಳಿದುಕೊಳ್ಳಲಿದ್ದಾರೆ. ಇದರ ಪ್ರಕಾರ ವೈಷ್ಣವಿ, ಮಂಜು ಪಾವಗಡ ಮತ್ತು ದಿವ್ಯಾರನ್ನು ಹಿಂದಿಕ್ಕಿದ್ದಾರೆ. ವೈಷ್ಣವಿ ಹೆಚ್ಚಿನ ವೋಟ್​ ಪಡೆದುಕೊಂಡಿದ್ದಾರೆನ್ನಲಾಗಿದೆ.

ಆದರೆ, ಅಂತಿಮ ಫಲಿತಾಂಶ ಆಗಸ್ಟ್​ 8ರಂದು ಹೊರಬೀಳಲಿದ್ದು, ಅಲ್ಲಿಯವರೆಗೂ ಎಲ್ಲರ ಲೆಕ್ಕಾಚಾರ ತಲೆಕೆಳಗಾಬಹುದು. ಈಗಲೂ ವೋಟಿಂಗ್​ ಲೈನ್​ ತೆರೆದಿದ್ದು, ನೆಚ್ಚಿನ ಸ್ಪರ್ಧಿಗೆ ವೋಟ್​ ಮಾಡುವ ಅವಕಾಶವಿದೆ. (ಏಜೆನ್ಸೀಸ್​)