More

    ನಾಳೆ ಹೊಂಬಾಳೆ ಫಿಲ್ಮ್ಸ್​ ತಂಡದಿಂದ ಹೊಸ ಚಿತ್ರ ಘೋಷಣೆ: ನಿರ್ದೇಶಕ/ಹೀರೋ ರಿಷಬ್​ ಶೆಟ್ಟಿ?

    ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ಬ್ಯಾಕ್​ ಟು ಬ್ಯಾಕ್​ ಹೊಸ ಸಿನಿಮಾಗಳನ್ನು ಘೋಷಣೆ ಮಾಡುತ್ತಿದೆ. ಪವನ್​ ಕುಮಾರ್​ ನಿರ್ದೇಶನ ಹಾಗೂ ನಟ ಪುನೀತ್​ ರಾಜ್​ಕುಮಾರ್ ಅಭಿನಯದ ದ್ವಿತ್ವ ಹಾಗೂ ರಕ್ಷಿತ್​ ಶೆಟ್ಟಿ ನಿರ್ದೇಶನ/ನಟನೆಯ ರಿಚರ್ಡ್​ ಆಂಟನಿ ಚಿತ್ರಗಳನ್ನು ಕೆಲವೇ ದಿನಗಳ ಹಿಂದೆ ಘೋಷಣೆ ಮಾಡಿದ್ದು, ಅದರ ಬೆನ್ನಲ್ಲೇ ತಮ್ಮ ಬ್ಯಾನರ್​ 11ನೇ ಚಿತ್ರವನ್ನು ಕೂಡ ಹೊಂಬಾಳೆ ಫಿಲ್ಮ್ಸ್​ ಇಂದು ಘೋಷಣೆ ಮಾಡಿದೆ.

    ಆದರೆ, ಸಿನಿಮಾದ ಹೆಸರು, ನಿರ್ದೇಶಕ ಹಾಗೂ ನಾಯಕ ಯಾರು ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ. ಬದಲಾಗಿ “ನಿನ್ನಳೊಗಿನ ಕಿಚ್ಚು ನಿನ್ನನ್ನು ಸುಡದಿರಲಿ” ಎಂಬ ಟ್ಯಾಗ್​ಲೈನ್​ನೊಂದಿಗೆ ಕಾಡ್ಗಿಚ್ಚಿನ ಫೋಸ್ಟರ್​ ಮಾತ್ರ ಬಿಡುಗಡೆ ಮಾಡಿದೆ.

    ಪೋಸ್ಟರ್​ ಬಿಡುಗಡೆ ಬೆನ್ನಲ್ಲೇ ನಾಯಕ ಯಾರಿರಬಹುದು ಮತ್ತು ನಿರ್ದೇಶನ ಯಾರು ಮಾಡಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಕೆಲವರು ರಿಷಬ್​ ಶೆಟ್ಟಿ ಹೆಸರನ್ನು ಎಳೆದುತಂದಿದ್ದಾರೆ. ಅದಕ್ಕೆ ಕಾರಣವೂ ಇದೆ. ಕೆಲವು ದಿನಗಳ ಹಿಂದೆ ಮಾತನಾಡಿದ್ದ ರಿಷಬ್​ ಶೆಟ್ಟಿ ಪ್ರಕೃತಿ ಮತ್ತು ಮನಷ್ಯನ ಸಂಬಂಧದ ಕುರಿತು ಚಿತ್ರ ಮಾಡುವುದಾಗಿ ಹೇಳಿದ್ದರು. ಇದೀಗ ಹೊಂಬಾಳೆ ಫಿಲ್ಮ್ಸ್​ ಬಿಡುಗಡೆ ಮಾಡಿರುವ ಪೋಸ್ಟರ್​ ನೋಡಿದ್ರೆ ರಿಷಬ್​ ಹೇಳಿಕೆಗೆ ಪುಷ್ಠಿ ನೀಡುವಂತಿದೆ. ಹೀಗಾಗಿ ರಿಷಬ್​ ಅವರ ಚಿತ್ರವಿರಬಹುದು ಎಂಬ ಚರ್ಚೆ ಜಾಲತಾಣದಲ್ಲಿ ಕೇಳಿಬರುತ್ತಿದೆ.

    ಇನ್ನು ಕೆಲವರು ರಿಷಬ್​ ಶೆಟ್ಟಿ ನಟ ಕಿಚ್ಚ ಸುದೀಪ್​ ಅವರಿಗೆ ಚಿತ್ರ ಮಾಡುವುದಾಗಿ ಬಹು ದಿನಗಳ ಹಿಂದೆಯೇ ಹೇಳಿದ್ದರು. ಅಲ್ಲದೆ, ಹೊಂಬಾಳೆ ಫಿಲ್ಮ್ಸ್​ನ ವಿಜಯ ಕಿರಂಗದೂರ್​ ಕೂಡ ಸುದೀಪ್​ ಅವರಿಗೆ ಚಿತ್ರ ನಿರ್ಮಾಣ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಅಲ್ಲದೆ, ಸದ್ಯ ಬಿಡುಗಡೆ ಮಾಡಿರುವ ಪೋಸ್ಟರ್​ನ ಟ್ಯಾಗ್​ಲೈನ್​ನಲ್ಲಿ ಕಿಚ್ಚು ಎಂಬ ಪದವಿದ್ದು, ಇದು ರಿಷಬ್​, ಸುದೀಪ್​ ಹಾಗೂ ಹೊಂಬಾಳೆ ಫಿಲ್ಮ್ಸ್​ ಕಾಂಬಿನೇಷನ್​ ಚಿತ್ರವಿರಬಹುದು ಎಂಬ ಚರ್ಚೆಯು ಸಹ ಮುನ್ನೆಲೆಗೆ ಬಂದಿದೆ.

    ಮೊತ್ತೊಂದು ಚರ್ಚೆಯ ಪ್ರಕಾರ ರಿಷಬ್​ ಲಾಕ್​ಡೌನ್​ ಸಂದರ್ಭದಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕತೆ ಎಣೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕತೆ ರೆಡಿಯಾಗಿದೆ ಹೇಳುವುದೊಂದೆ ಬಾಕಿ ಎಂಬ ಮಾತುಗಳನ್ನು ರಿಷಬ್​ ಆಡಿದ್ದರು. ಇನ್ನು ರಿಷಬ್ ಶೆಟ್ಟಿ ಕೊನೆಯದಾಗಿ ನಿರ್ದೇಶನ ಮಾಡಿದ್ದು, ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’. ಅದಾದ ಬಳಿಕ ನಟನೆಯಲ್ಲಿಯೇ ಹೆಚ್ಚು ಸಕ್ರಿಯರಾಗಿ, ಒಂದಷ್ಟು ಸಿನಿಮಾಗಳ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಇದೀಗ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಿದ್ದು, ಸೆಪ್ಟೆಂಬರ್ ವೇಳೆಗೆ ಸಿನಿಮಾ ಸೆಟ್ಟೆರಲಿದೆ ಎನ್ನಲಾಗುತ್ತಿದೆ.

    ಆದರೆ, ಹೊಂಬಾಳೆ ಫಿಲ್ಮ್ಸ್​ ಯಾವ ಗುಟ್ಟನ್ನು ಬಿಟ್ಟು ಕೊಡದೇ ಇರುವುದರಿಂದ ನಿಖರವಾಗಿ ಏನು ಹೇಳಲಾಗದು. ಆದರೂ ಜಾಲತಾಣದಲ್ಲಿ ಸದ್ಯ ಚರ್ಚೆ ಜೋರಾಗಿಯೇ ಸಾಗಿದೆ. ಆದರೆ, ಚಿತ್ರದ ಹೆಸರೇನು, ಯಾರು ನಾಯಕ ಮತ್ತು ನಿರ್ದೇಶನ ಜವಬ್ದಾರಿ ಯಾರಿಗೆ ಎಂಬ ಕುತೂಹಲಕಾರಿ ಪ್ರಶ್ನೆಗಳ ಉತ್ತರಕ್ಕಾಗಿ ನಾಳೆ ಬೆಳಗ್ಗೆ 11.45ರವರೆಗೆ ಕಾಯಲೇ ಬೇಕಿದೆ. ಏಕೆಂದರೆ, ನಾಳೆ ಚಿತ್ರದ ಹೆಸರು ಮತ್ತು ಫಸ್ಟ್​ ಲುಕ್​ ಅನಾವರಣಗೊಳ್ಳಲಿದೆ.

    ಪೂಜಾಗೆ ಸಿಕ್ತು ಸಂಕ್ರಾಂತಿ ಕ್ವೀನ್ ಪಟ್ಟ!

    ದಿವ್ಯಾ ಸುರೇಶ್ ನಿರ್ಗಮನ: ನಾಲ್ಕು ದಿನಗಳಿರುವಾಗ ಬಿಗ್ ಬಾಸ್​ನಿಂದ ಹೊರಕ್ಕೆ

    ಆಸ್ಪತ್ರೆಯಲ್ಲಿ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts