ಸಿನಿವಾಣಿ

ಏನಿದು ರಶ್ಮಿಕಾರ ಹೊಸ ಅವತಾರ!? ತಮಿಳುನಾಡಿನಲ್ಲಿ ರಾರಾಜಿಸಿದ ಚಸ್ಮಾ ಸುಂದರಿಯ ಹೇರ್​ಲೆಸ್​ ಫೋಟೋ

ಚೆನ್ನೈ: ಚಸ್ಮಾ ಸುಂದರಿ ಹಾಗೂ ನ್ಯಾಷನಲ್​ ಕ್ರಷ್​ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಮಂದಣ್ಣರ ನಟನೆ ಮತ್ತು ಸೌಂದರ್ಯಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ರಶ್ಮಿಕಾರ ಕ್ಯೂಟ್​ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿರುತ್ತವೆ. ಆದರೆ, ಇದೀಗ ತಲೆ ಬೋಳಿಸಿರುವ ರಶ್ಮಿಕಾರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಫೋಟೋ ನೋಡಿದ ಅನೇಕರಿಗೆ ಶಾಕ್​ ಆಗಿದ್ದರೆ, ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಅಂದಹಾಗೆ ರಶ್ಮಿಕಾ ತಲೆ ಬೋಳಿಸಿರುವ ಫೋಟೋಗಳು ಕಂಡುಬಂದಿರುವುದು ತಮಿಳುನಾಡಿನಲ್ಲಿ. ಅದರಲ್ಲೂ ಸಲೂನ್​ಗಳ ಜಾಹಿರಾತು ಫಲಕಗಳಲ್ಲಿ ಈ ಫೋಟೋಗಳು ರಾರಾಜಿಸುತ್ತಿವೆ. ತಮ್ಮ ಸಲೂನ್​ ಉದ್ಯಮದ ಜಾಹಿರಾತಿಗಾಗಿ ಫೋಟೋ ಅಳವಡಿಸಿದ್ದಾರೆಂದು ತಿಳಿದುಬಂದಿದೆ.

ಇನ್ನೊಂದೆಡೆ ರಶ್ಮಿಕಾರ ಇದೇ ಫೋಟೋ ಮೀಮ್ಸ್​ ಹಾಗೂ ಟ್ರೋಲಿಗರ ದಾಳವಾಗಿದೆ. ರಶ್ಮಿಕಾರೇ ಮೊದಲಲ್ಲ. ಈ ಹಿಂದೆ ಕೀರ್ತಿ ಸುರೇಶ್​ ಮತ್ತು ನಯನತಾರಾರ ತಲೆ ಬೋಳಿಸಿರುವ ಫೋಟೋಗಳು ಸಹ ವೈರಲ್​ ಆಗಿದ್ದವು.

ರಶ್ಮಿಕಾ ಅಭಿನಯದ ಕಾಲಿವುಡ್​ನ ಮೊದಲ ಚಿತ್ರ ಸುಲ್ತಾನ್​ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದ ಕಾರಣ ಈ ರೀತಿ ಮಾಡಿದ್ದಾರೆಂಬ ಆರೋಪಗಳು ಸಹ ಕೇಳಿಬಂದಿದೆ. ಸದ್ಯ ಅಭಿಮಾನಿಗಳು ಸಾಕಷ್ಟು ಆಕ್ರೋಶವನ್ನು ಹೊರಹಾಕಿದ್ದು, ರಶ್ಮಿಕಾರ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)​