More

    ಫನ್​ ಬಕೆಟ್​ ಭಾರ್ಗವನ ಕಾಮಕಾಂಡ ಬಿಚ್ಚಿಟ್ಟ ವಿಶಾಖಪಟ್ಟಣಂ ಎಸಿಪಿ: ಸಂತ್ರಸ್ತ ಬಾಲಕಿಗ್ಯಾಕೆ ಈ ದುರಾಸೆ ಬಂತು!

    ವಿಜಯವಾಡ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನವಾಗಿದ್ದು, ಪ್ರಕರಣ ಕುರಿತ ಸಮಗ್ರ ಮಾಹಿತಿಯನ್ನು ವಿಶಾಖಪಟ್ಟಣಂ ನಗರದ ಸಹಾಯಕ ಪೊಲೀಸ್​ ಆಯುಕ್ತರಾದ ಪ್ರೇಮ್​ ಕಾಜಲ್​ ಮಾಧ್ಯಮಗಳ ಮುಂದೆ ವಿವರಿಸಿದರು.

    ಟಿಕ್​ಟಾಕ್​ನಲ್ಲಿ ನಾನೊರ್ವ ಬಿಗ್​ ಸ್ಟಾರ್​
    ಟಿಕ್​ಟಾಕ್ (ಪ್ರಸ್ತುತ ಭಾರತದಲ್ಲಿ ಬ್ಯಾನ್​ ಆಗಿದೆ) ಮೂಲಕ ಬಾಲಕಿಯನ್ನು ಪರಿಚಯಿಸಿಕೊಂ​ಡ ಆರೋಪಿ ಭಾರ್ಗವ, ಟಿಕ್​ಟಾಕ್​ನಲ್ಲಿ ನಾನೊರ್ವ ಬಿಗ್​ ಸ್ಟಾರ್​ ಬೇರೆ ಮಾಧ್ಯಮಗಳಲ್ಲಿ ಅವಕಾಶ ಕೊಡಿಸುತ್ತೇನೆಂದು ಪುಸಲಾಯಿಸಿದ್ದ. ಹೀಗೆ ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಚಾಟಿಂಗ್​ ಮಾಡುತ್ತಿದ್ದ. ಅಲ್ಲದೆ, ಆಗಾಗಾ ಭೇಟಿ ಸಹ ಮಾಡುತ್ತಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಮೇಲೆ ಪ್ರೇಮ ನಿವೇದನೆ ಮಾಡಿದ್ದ. ಅಲ್ಲದೆ, ಇಬ್ಬರ ಜತೆಗೂಡಿ ವಿಡಿಯೋ ಮಾಡಲು ಮೊದಲೇ ಪ್ರಸ್ತಾಪ ಮಾಡಿದ್ದ ಎಂದು ಎಸಿಪಿ ಹೇಳಿದರು. ಆದರೆ, 14ನೇ ವಯಸ್ಸಿನಲ್ಲೇ ಸ್ಟಾರ್​ ಆಗುವ ಆಸೆ ಬಾಲಕಿಗೆ ಬಂದಿದ್ದು ನಿಜಕ್ಕೂ ದುರ್ದೈವವೇ ಸರಿ.

    ಬೆದರಿಸಿ ಅತ್ಯಾಚಾರ ಮಾಡಿರುವ ಆರೋಪ
    ವಿಡಿಯೋ ಮಾಡಲು ಬಾಲಕಿ ಬಟ್ಟೆ ಬದಲಾಯಿಸುವಾಗ ಭಾರ್ಗವ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದಿದ್ದ ಎನ್ನಲಾಗಿದೆ. ತನ್ನ ಬಳಿ ಅಶ್ಲೀಲ ಫೋಟೋ-ವಿಡಿಯೋ ಇರುವುದಾಗಿ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಆಕೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವುದಾಗಿ ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಸದ್ಯ ಭಾರ್ಗವನ ಫೋನ್​ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಅಪ್ರಾಪ್ತೆಯೊಂದಿಗೆ ಸಾಮಾಜಿಕ ಜಾಲತಾಣ ಅಥವಾ ಇತರೆ ಆ್ಯಪ್​ ಮೂಲಕ ಪ್ರೇಮ ಸಂಬಂಧ ಅಪರಾಧ ಎಂದಿರುವ ಎಸಿಪಿ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆಯ ಫೋಟೋ ಅಥವಾ ಹೆಸರನ್ನಾಗಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

    ಇದನ್ನೂ ಓದಿರಿ: ಕರೊನಾ ಸೋಂಕಿತರಿಗೆ ಊಟ ಕೊಡದ ವೈದ್ಯಾಧಿಕಾರಿ ಮುಖದಲ್ಲಿ ನೀರಿಳಿಸಿದ ಶಾಸಕ! ವಿಡಿಯೋ ವೈರಲ್​

    ಮತ್ತಷ್ಟು ಹುಡುಗಿಯರು ಮೋಸ ಹೋಗಿದ್ದಾರಾ?
    ಭಾರ್ಗವನ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮತ್ತಷ್ಟು ಹುಡುಗಿಯರು ಈತನಿಂದ ಮೋಸ ಹೋಗಿರಬಹುದಾ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

    ಚಾಟಿಂಗ್​ನಿಂದ ಬೆಳೆಯಿತು ಸಲುಗೆ
    ವಿಜಯನಗರಂ ಜಿಲ್ಲೆಯ ಕೊಟ್ಟವಲಸಾ ಏರಿಯಾದ ನಿವಾಸಿ ಆಗಿರುವ ಭಾರ್ಗವ ಟಿಕ್​ಟಾಕ್​ ವಿಡಿಯೋಗಳಿಂದ ತುಂಬಾ ಫೇಮಸ್​ ಆಗಿದ್ದಾನೆ. ಒಮ್ಮೆ ಚಾಟಿಂಗ್​ ಮೂಲಕ ವಿಶಾಖಪಟ್ಟಣಂ ಜಿಲ್ಲೆಯ ಸಿನ್ಹಗಿರಿ ಕಾಲನಿಯ 14 ವರ್ಷದ ಬಾಲಕಿಯ ಪರಿಚಯವಾಗಿದೆ. ಸಿನ್ಹಗಿರಿ ಕಾಲನಿ ವಿಜಯನಗರಂ ಮತ್ತು ವಿಶಾಖಪಟ್ಟಣಂ ಗಡಿಭಾಗದಲ್ಲಿದೆ. ಚಾಟಿಂಗ್​ನಿಂದ ಆರಂಭವಾದ ಪರಿಚಯ ತುಂಬಾ ಸಲುಗೆಗೆ ತಿರುಗಿತ್ತು.

    ತನ್ನ ಜತೆಗಿರುವ ಅಪ್ರಾಪ್ತೆಯನ್ನು ಭಾರ್ಗವ ಅನನ್ಯ ಎಂದು ಪರಿಚಯಿಸಿದ್ದ. ಇಬ್ಬರ ನಡುವಿನ ಸಲುಗೆ ನಿರಂತರವಾಗಿ ಚಾಟ್​ ಮಾಡುವುದು ಮತ್ತು ಪದೇಪದೆ ಭೇಟಿಯಾಗುವುದು ಮಾಡುತ್ತಿದ್ದರು. ಭಾರ್ಗವ್​, ಟಿಕ್​ಟಾಕ್​ ವಿಡಿಯೋ ಹೆಸರಲ್ಲಿ ಅಪ್ರಾಪ್ತೆಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹೀಗಿರುವಾಗ ಒಮ್ಮೆ ಅಪ್ರಾಪ್ತೆಯ ದೇಹದಲ್ಲಾದ ಬದಲಾವಣೆಯನ್ನು ನೋಡಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಆಕೆ ಅಷ್ಟರಲ್ಲಾಗಲೇ ನಾಲ್ಕು ತಿಂಗಳ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.

    ಇದನ್ನೂ ಓದಿರಿ: ಬೆಳ್ಳಂಬೆಳಗ್ಗೆ ಎಲ್ಲರಿಗಿಂತ ಬೇಗ ಎಚ್ಚರಗೊಂಡ ಗೇಲ್ ಏಕಾಂಗಿಯಾಗಿ ಹೊರಟಿದ್ದೆಲ್ಲಿಗೆ?​

    ತಂಗಿಯ ಹೆಸರಲ್ಲಿ ತನ್ನ ಜತೆ ಇಟ್ಟುಕೊಂಡಿದ್ದ
    ಅಪ್ರಾಪ್ತೆಯ ತಾಯಿ ಇದೇ ತಿಂಗಳ 16ರಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು ಮಗಳ ಸ್ಥಿತಿಗೆ ಫನ್​ ಬಕೆಟ್​ ಭಾರ್ಗವ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿಶಾಖಪಟ್ಟಣಂ ನಗರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭಾರ್ಗವ್​ನನ್ನು ಬಂಧಿಸಲಾಗಿದೆ. ಆತನು ಸಹ ಅಪ್ರಾಪ್ತೆಯನ್ನು ತಂಗಿಯ ಹೆಸರಲ್ಲಿ ಅಧೀನದಲ್ಲಿ ಇಟ್ಟುಕೊಂಡು ದೈಹಿಕ ಸಂಪರ್ಕ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಭಾರ್ಗವ ಬಂಧನಕ್ಕೂ ಮುಂಚೆ ಆತ ಕೆಲವೊಂದು ಅವಕಾಶದ ಮೇಲೆ ಹೈದರಾಬಾದ್​ಗೆ ಹೋಗಿದ್ದ. ಆಡಿಯೋ ಕಾರ್ಯಕ್ರಮವೊಂದರಲ್ಲಿ ಭಾರ್ಗವ ಸ್ಕಿಟ್ಸ್​ ಸಹ ಮಾಡಿದ್ದ. ಟಿಕ್​ಟಾಕ್​ ಮಾತ್ರವಲ್ಲದೆ, ಇತರೆ ಆ್ಯಪ್​ಗಳಲ್ಲಿಯೂ ಭಾರ್ಗವ ವಿಡಿಯೋ ಮಾಡಿದ್ದ. ಸಂತ್ರಸ್ತೆಯ ತಾಯಿ ದೂರು ನೀಡಿದ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದ್ದು, ದಿಶಾ ಪೊಲೀಸರು ಭಾರ್ಗವ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಬಂಧಿಸಲಾಗಿದ್ದು, ಈ ಪ್ರಕರಣ ಇದೀಗ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್​)

    ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪ: ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನ!

    ಬಾಲಕಿ ಮೇಲೆ ರೇಪ್​: ಫನ್​ ಬಕೆಟ್​ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್​ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts