ಸಿನಿವಾಣಿ

ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್​ ಕಾಲ್​ ಸೀಕ್ರೆಟ್​ ಮೇಲೆ ಪೊಲೀಸರ ಕಣ್ಣು

ಬೆಂಗಳೂರು: ನಟಿ ಸೌಜನ್ಯ ಅಲಿಯಾಸ್​ ಸವಿ ಮಾದಪ್ಪ ಸಾವಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಕುಂಬಳಗೋಡು ಠಾಣಾ ಪೊಲೀಸರು ನಟಿಯ ಕೊನೆಯ ಫೋನ್​ ಕಾಲ್​ ಸೀಕ್ರೆಟ್​​ ಹಿಂದೆ ಬಿದ್ದಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ತಾಂತ್ರಿಕ ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇನ್ನು ಸೌಜನ್ಯ ಸ್ನೇಹಿತ ಕಂ ನಟ ವಿವೇಕ್ ಘಟನ ನಡೆದ ದಿನ ಸ್ಥಳದಲ್ಲಿ ಇರಲಿಲ್ಲ. ಅಂದು ಆತನ ಬೇರೆ ಟವರ್ ಲೊಕೇಶನ್​ನಲ್ಲಿದ್ದ ಅನ್ನೋದು‌ ದೃಢವಾಗಿದೆ.

ಪ್ರಸ್ತುತ ಪೊಲೀಸರ ಗಮನ ಸೌಜನ್ಯ ಫೋನ್​ನಿಂದ ಕೊನೆಯ ಕರೆ ಯಾರಿಗೆ ಹೋಗಿದೆ ಎಂಬುದರ ಮೇಲಿದೆ. ಆತ್ಮಹತ್ಯೆಗೂ ಮುನ್ನ ಯಾರಿಗೆ ಕೊನೆಯ ಕರೆ ಮಾಡಿದ್ರು? ಲಾಸ್ಟ್ ಕಾಲ್​ನಲ್ಲಿ‌ ಎಷ್ಟೊತ್ತು ಮಾತನಾಡಿದ್ದಾರೆ? ಯಾವೆಲ್ಲಾ ವಿಷಯಗಳನ್ನು ಹೇಳಿಕೊಂಡಿದ್ದಾರೆ? ಎಂದು ತಿಳಿದುಕೊಳ್ಳಲು ಸೌಜನ್ಯಳ‌ "CDR" ಪಡೆದು, ಪರಿಶೀಲನೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಸೌಜನ್ಯ ಬ್ಯಾಂಕ್​ ಖಾತೆಗೆ ಅವರ ತಂದೆ ಪ್ರಭು ಮಾದಪ್ಪ ಒಂದು ಲಕ್ಷ ಡಿಪಾಸಿಟ್ ಮಾಡಿದ್ದು ದೃಢವಾಗಿದೆ. ಮಗಳ ಆತ್ಮಹತ್ಯೆ ಬಗ್ಗೆ ತಂದೆ ಪ್ರಭು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೌಜನ್ಯಳಿಂದ ವಿವೇಕ್​ಗೆ ಹಣ ವರ್ಗಾವಣೆ ಆಗುತ್ತಿತ್ತಾ? ಅನ್ನೋದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಏಕೆಂದರೆ, ಇದೇ ವಿಚಾರವಾಗಿ ಸೌಜನ್ಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಟಿ ಸೌಜನ್ಯ ಹೆಸರಲ್ಲೆ ಬಾಡಿಗೆ ಫ್ಲ್ಯಾಟ್​ ಇತ್ತು. ಕುಂಬಳಗೋಡಿನ ಸನ್​ ವರ್ತ್ ಅಪಾರ್ಟ್ಮೆಂಟ್​ನ‌ 5E ಬ್ಲಾಕ್​ನ ನಂಬರ್ 901 ಫ್ಲ್ಯಾಟ್​ನಲ್ಲಿ ಸೌಜನ್ಯ ವಾಸವಿದ್ದರು. ತಿಂಗಳಿಗೆ 15 ರಿಂದ 20 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರು. ಬೆಳಗ್ಗೆಯಿಂದ ರಾತ್ರಿ ೧೦ ಗಂಟೆವರೆಗೆ ಪಿಎ ಮಹೇಶ್​, ಸೌಜನ್ಯ ಜೊತೆಗಿರುತ್ತಿದ್ದ. ಬಳಿಕ ತನ್ನ ಮನೆಗೆ ತೆರಳುತ್ತಿದ್ದ. ಆಗಾಗ, ವಿವೇಕ್​ ಸೌಜನ್ಯ ಭೇಟಿಯಾಗುತ್ತಿದ್ದ. ಒಂದೊಮ್ಮೆ ಫ್ರೆಂಡ್ಸ್ ಸರ್ಕಲ್ ಜತೆ ಪಾರ್ಟಿ ಮಾಡುತ್ತಿದ್ದರು.

ಇಂದು ವಿವೇಕ್​-ಮಹೇಶ್​ ವಿಚಾರಣೆ

ಕುಂಬಳಗೋಡು ಪೊಲೀಸರು ಇಂದು ಸೌಜನ್ಯಾಳ ಬಾಯ್ ಫ್ರೆಂಡ್ ಮತ್ತು ಮೇಕಪ್ ಮ್ಯಾನ್ ವಿಚಾರಣೆ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಇಬ್ಬರದ್ದು ಯಾವುದೇ ಪಾತ್ರ ಇಲ್ಲ ಎಂದು ಸಾಬೀತಾಗಿದೆ. ಆದರೂ, ಸೌಜನ್ಯ ತಂದೆ ಪ್ರಭು‌ ಮಾದಪ್ಪ ದೂರು ಕೊಟ್ಟಿರುವ ಹಿನ್ನೆಲೆ‌ ವಿಚಾರಣೆ ನಡೆಸಲಿದ್ದಾರೆ. ಇಬ್ಬರ ಮೊಬೈಲ್​​ಗಳನ್ನ ರಿಟ್ರೀವ್ ಮಾಡುವ ಸಾಧ್ಯತೆ. ಇಬ್ಬರ‌ ಮೊಬೈಲ್​ಗಳನ್ನ ಟೆಕ್ನಿಕಲ್ ಸೆಲ್​ಗೆ ಕಳಿಸುವ ಸಾಧ್ಯತೆ ಇದೆ. ಈಗಾಗಲೇ ಕ್ಲಿಯರ್‌ ಕಟ್ ಸೂಸೈಡ್ ಎಂದು ವೈದ್ಯರ ಮೌಖಿಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮೂರು ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೆಲೆಬ್ರಿಟಿ ಬದುಕು ನಡೆಸಲು ಸಾಧ್ಯವಾಗಿಲ್ಲ, ಆರೋಗ್ಯ ಸಮಸ್ಯೆ ಹಾಗೂ ಪ್ರೀತಿ ನಿರಾಕರಣೆ ಮೂರು ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)