ಸಿನಿವಾಣಿ

ತಾರಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುವಂತಿದೆ ಸಮಂತಾರ ಈ ನಡೆ..!

ಪಣಜಿ: ಸಾಲು ಸಾಲು ಸಿನಿಮಾ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡಿರುವ ನಟಿ ಸಮಂತಾ ಸದ್ಯ ತಮ್ಮ ಫ್ರೆಂಡ್​ ಜತೆ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ, ಸಮಂತಾ ಜತೆಯಲ್ಲಿ ಪತಿ ನಾಗಚೈತನ್ಯ ಇಲ್ಲದಿರುವುದು ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬುದು ಮತ್ತೊಮ್ಮೆ ಚರ್ಚೆಯಾಗುತ್ತಿದೆ.

ಇತ್ತೀಚೆಗೆ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ವಿಚಾರ ಹೆಚ್ಚು ಸದ್ದು ಮಾಡಿತ್ತು. ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ತಾರಾ ದಂಪತಿ ಡಿವೋರ್ಸ್​ ಆಗಲಿದ್ದಾರೆಂದು ಸಾಕಷ್ಟು ಚರ್ಚೆಯಾಗುತ್ತಿದ್ದರೂ, ಇದುವರೆಗೂ ಯಾರೋಬ್ಬರು ಈ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ.

ಆದರೆ, ಸಮಂತಾ ನಡೆ ಮಾತ್ರ ಅದಕ್ಕೆ ಪುಷ್ಠಿ ನೀಡುವಂತಿದೆ. ಇತ್ತೀಚೆಗೆ ನಾಗಾರ್ಜುನ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸದೇ ಕೇವಲ ಶುಭಕೋರಿದ್ದರು. ಅಲ್ಲದೆ, ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದರು. ಇದೀಗ ತಾರಾ ದಂಪತಿ ನಡುವೆ ಯಾವುದು ಸರಿಯಿಲ್ಲ ಎನ್ನುವುದಕ್ಕೆ ಮತ್ತೊಂದು ಪುಷ್ಟಿ ದೊರೆತಿದೆ.

ಮದುವೆಯ ಬಳಿಕ ಯಾವುದೇ ಪ್ರವಾಸ ಕೈಗೊಂಡರು ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಹೋಗುತ್ತಿದ್ದರು. ಸದ್ಯ ಸಮಂತಾ ಒಬ್ಬರೇ ತಮ್ಮ ಫ್ರೆಂಡ್​ ಜತೆ ಗೋವಾ ಪ್ರವಾಸದಲ್ಲಿದ್ದಾರೆ. ಅವರ ಜತೆಯಲ್ಲಿ ನಾಗಚೈತನ್ಯ ಇಲ್ಲದಿರುವುದು ಇದೀಗ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬ ಚರ್ಚೆಗೆ ಪುಷ್ಟಿ ನೀಡಿದೆ.

ಅಂದಹಾಗೆ ಸಮಂತಾ ಅವರು ತಮ್ಮ ಬೆಸ್ಟ್​ ಫ್ರೆಂಡ್​ ಹಾಗೂ ಪ್ರಖ್ಯಾತ ಫ್ಯಾಸನ್​ ಡಿಸೈನರ್​ ಶಿಲ್ಪಾ ರೆಡ್ಡಿ ಜತೆಯಲ್ಲಿ ಗೋವಾ ಪ್ರವಾಸದ ಸವಿಯನ್ನು ಅನುಭವಿಸುತ್ತಿದ್ದಾರೆ. ಕಯಾಕಿಂಗ್​, ಬೈಸಿಕಲ್​ ರೈಡ್​ ಸೇರಿದಂತೆ ಸಖತ್​ ಎಂಜಾಯ್​ ಮಾಡುತ್ತಿರುವ ಸಮಂತಾ ಅದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಸಮಂತಾ ಶಾಕುಂತಲಂ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)