ಪಾಳುಬಾವಿಯಲ್ಲಿ ಮೂವರು ಗಂಡಂದಿರ ಪತ್ನಿಯ​ ಶವ ಪತ್ತೆ: ಅನುಮಾನ ಮೂಡಿಸಿದ ಮನೆಯ ಗೋಡೆ ಬರಹ!

Shilpa mubaraik
Published on

ಚಿಕ್ಕಬಳ್ಳಾಪುರ: ಪಾಳು ಬಾವಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ಮುಸಲ್ಮಾನರ ಹಳ್ಳಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಶಿಲ್ಪಾ ಮುಬಾರಕ್ ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಬಾವಿಗೆ ಬೀಸಾಕಿರುವ ಶಂಕೆ ವ್ಯಕ್ತವಾಗಿದೆ. ಶಿಲ್ಪಾ ಮೂರು ಮದುವೆಯಾಗಿದ್ದು, ಇಬ್ಬರು ಗಂಡಂದಿರನ್ನ ಕಳೆದುಕೊಂಡಿದ್ದಾರೆ.

ಇನ್ನು ಶಿಲ್ಪಾ ಮನೆಯ ಗೋಡೆ ಮೇಲೆ ಐ ಮಿಸ್ ಯೂ ವಿ ಅಂತಾ ಬರೆಯಲಾಗಿದ್ದು. ಇದು ಕೊಲೆಯೋ? ಅಥವಾ ಆತ್ಮಹತ್ಯೆಯೋ? ಎಂದು ಪೊಲೀಸ್​ ತನಿಖೆಯಿಂದ ಬಯಲಾಗಬೇಕಿದೆ. ಆತ್ಮಹತ್ಯೆಯು ಹಲವು ಅನುಮಾಗಳಿಂದ ಕೂಡಿದ್ದು, ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net