ಸಿನಿವಾಣಿ

ಕಾಮಿಡಿಗಿಂತ ಹೀರೋಗಳ ಜತೆ ರೊಮ್ಯಾನ್ಸ್​ ಮಾಡುವುದೇ ಸುಲಭ! ಬೋಲ್ಡ್​ ಹೇಳಿಕೆ ನೀಡಿದ ರಾಶಿ ಖನ್ನಾ

ಹೈದರಾಬಾದ್​: ಬಾಲಿವುಡ್​ನಲ್ಲಿ 2013ರಲ್ಲಿ ತೆರೆಕಂಡ ‘ಮದ್ರಾಸ್ ಕೆಫೆ’ ಚಿತ್ರದೊಂದಿಗೆ ಸಿನಿಮಾ ಕೆರಿಯರ್ ಆರಂಭಿಸಿದ್ದ ರಾಶಿ ಖನ್ನಾ, ಅದಾದ ಮೇಲೆ ದಕ್ಷಿಣದ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡರು. ಈಗಲೂ ತಮಿಳು ಮತ್ತು ತೆಲುಗಿನಲ್ಲಿ ರಾಶಿ ತುಂಬಾ ಬಿಜಿಯಾಗಿದ್ದಾರೆ. ಇದರ ನಡುವೆ ಹಿಂದಿಗೂ ಕಮ್​ ಬ್ಯಾಕ್​ ಮಾಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಸದ್ಯ ರಾಶಿ ಅವರು ಟಾಲಿವುಡ್​ ಸೂಪರ್​ ಸ್ಟಾರ್​ ಗೋಪಿಚಂದ್​ ನಟನೆಯ "ಪಕ್ಕಾ ಕಮರ್ಷಿಯಲ್​" ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ನಾಳೆ (ಜುಲೈ 1) ಬಿಡುಗಡೆಯಾಗುತ್ತಿದೆ. ಹೀಗಾಗಿ ಪ್ರಚಾರದಲ್ಲಿ ಭಾಗಿಯಾಗಿರುವ ರಾಶಿ, ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಭಾರೀ ವೈರಲ್​ ಆಗಿದೆ.

ಕಾಮಿಡಿ ಮಾಡುವುದು ತುಂಬಾ ಕಷ್ಟ. ಹಾಸ್ಯ ಪಾತ್ರಗಳಲ್ಲಿ ನಟಿಸುವುದು ಕಷ್ಟಕರ ಎಂಬುದನ್ನು ಕಂಡುಕೊಂಡಿದ್ದೇನೆ. ಅದಕ್ಕಿಂತ ರೊಮ್ಯಾನ್ಸ್​ ಮಾಡುವುದೇ ತುಂಬಾ ಸುಲಭ. ಕಾಮಿಡಿಗಿಂತ ಹೀರೋಗಳ ಜೊತೆಯಲ್ಲಿ ರೊಮ್ಯಾನ್ಸ್​ ಮಾಡುವುದೇ ತುಂಬಾ ಸುಲಭ ಎಂದು ನನಗೀಗ ಅನಿಸುತ್ತಿದೆ ಎಂದಿದ್ದಾರೆ.

ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಾನು ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸಿದ್ದೇನೆ. ಅಂತಹ ದೃಶ್ಯಗಳಿಂದ ತುಂಬಾ ಬೇಸರವಾಗಿದೆ. ಇದೇ ಮೊದಲ ಬಾರಿಗೆ ಪಕ್ಕಾ ಕಮರ್ಷಿಯಲ್​ ಸಿನಿಮಾದಲ್ಲಿ ಕಾಮಿಡಿ ಪಾತ್ರವನ್ನು ಮಾಡಿದ್ದೇನೆ. ಕಾಮಿಡಿಯನ್ನು ತುಂಬಾ ಎಂಜಾಯ್​ ಮಾಡಿದ್ದೇನೆ. ನನ್ನ ಕಾಮಿಡಿ ಟೈಮ್​ ಕೂಡ ಈ ಸಿನಿಮಾದಲ್ಲಿ ಚೆನ್ನಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರು ತುಂಬಾ ನಗಲಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್​)