ಸಿನಿವಾಣಿ

ಆಲಿಯಾ​ ಜತೆ ಮಲಗುವುದೆಂದರೆ ಅದೊಂದು ಹೋರಾಟ! ರಣಬೀರ್​​ ಹೇಳಿಕೆಗೆ ಆಲಿಯಾ ಉತ್ತರ ಹೀಗಿತ್ತು....

ಮುಂಬೈ: ತಾರಾ ದಂಪತಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಬ್ರಹ್ಮಾಸ್ತ್ರ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸಿನಿಮಾ ಗೆಲುವಿನ ಕುರಿತು ಇತ್ತೀಚಿನ ಸಂದರ್ಶನದಲ್ಲಿ ಮಾತನಾಡುವಾಗ ರಣಬೀರ್​ ಕಪೂರ್​ ಹೇಳಿದ ಮಾತೊಂದು ಇದೀಗ ಭಾರಿ ಸುದ್ದಿಯಾಗುತ್ತಿದೆ.

ಪತ್ನಿ ಆಲಿಯಾ ಭಟ್​ ಜೊತೆ ಮಲಗುವುದೆಂದರೆ ಒಂದು ಹೋರಾಟ ಎಂದು ರಣಬೀರ್​ ಕಪೂರ್​ ಹೇಳಿರುವ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಬಾಲಿವುಡ್​ ಬಬಲ್​ಗೆ ನೀಡಿದ ಸಂದರ್ಶನದಲ್ಲಿ ಇಬ್ಬರ ನಡುವಿನ ಸಹಿಸಿಕೊಳ್ಳುವಿಕೆ ಬಗ್ಗೆ ಆ್ಯಂಕರ್​ ಕೇಳಿದ ಪ್ರಶ್ನೆಗೆ ಉತ್ತಿರಿಸಿದ ರಣಬೀರ್​, ನಿದ್ದೆಯಲ್ಲಿ ಆಲಿಯಾರ ವರ್ತನೆಗಳ ಬಗ್ಗೆ ಮಾತನಾಡಿದ್ದಾರೆ. ಬೆಡ್​ ಮೇಲೆ ಮಲಗಿರುವಾಗ ಆಲಿಯಾ ಒದ್ದಾಡುವುದು ಜಾಸ್ತಿ ಮತ್ತು ಇಡೀ ಜಾಗವನ್ನೇ ಅತಿಕ್ರಮಿಸಿಕೊಂಡು ಬಿಡುತ್ತಾರೆ. ಕೊನೆಗೆ ಉಳಿಯವುದು ಒಂದು ಚೂರು ಜಾಗ. ಆಕೆಯ ತಲೆ ಎಲ್ಲೋ ಇದ್ದರೆ, ಅವಳ ಕಾಲುಗಳು ಇನ್ನೆಲ್ಲೋ ಇರುತ್ತವೆ. ಅಂತಿಮವಾಗಿ ನಾನು ಹಾಸಿಗೆಯ ಯಾವುದೋ ಮೂಲೆಯಲ್ಲಿರುತ್ತೇನೆ. ನಿಜವಾಗಿಯೂ ಆಲಿಯಾರೊಂದಿಗೆ ಮಲಗುವುದು ಹೋರಾಟವೇ ಸರಿ ಎಂದು ರಣಬೀರ್​ ಹೇಳಿದ್ದಾರೆ.

ಇದೇ ಪ್ರಶ್ನೆಗೆ ಉತ್ತರಿಸಿದ ಆಲಿಯಾ, ರಣಬೀರ್​ ಅವರಲ್ಲಿ ನಾನು ಒಂದನ್ನು ತುಂಬಾ ಇಷ್ಟಪಡುತ್ತೇನೆ. ಅದು ಅವನು ತುಂಬಾ ಮೌನಿ. ಅವನೊಬ್ಬ ಒಳ್ಳೆಯ ಕೇಳುಗ. ಆದರೆ, ಆತನ ಅತಿಯಾದ ಮೌನವೇ ನನಗೆ ಕಿರಿಕಿರಿ. ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಕೆಲವೊಮ್ಮೆ ಅವನು ಪ್ರತಿಕ್ರಿಯಿಸಬೇಕೆಂದು ಬಯಸುತ್ತೇನೆ. ಆದರೆ, ಆತ ಪ್ರತಿಕ್ರಿಯಿಸುವುದೇ ಇಲ್ಲ. ಏಕೆಂದರೆ ಅವನು ಜೆನ್‌ (ಶಾಂತಿಯುತ ಮತ್ತು ಶಾಂತ)ನಂತೆ ಎಂದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಆಲಿಯಾ ಮತ್ತು ರಣಬೀರ್​ ಕಪೂರ್​ ಅವರ ಬ್ರಹ್ಮಾಸ್ತ್ರ ಸಿನಿಮಾ ಬಾಲಿವುಡ್​ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಸೂಪರ್ ಹೀರೋ ನಾಟಕವಾಗಿದ್ದು, ಬೆಂಕಿಯೊಂದಿಗೆ ವಿಶೇಷ ಬಂಧವನ್ನು ಹಂಚಿಕೊಳ್ಳುವ ಸರಳ ವ್ಯಕ್ತಿಯ ಸುತ್ತ ಸುತ್ತುತ್ತದೆ. ಇದರಲ್ಲಿ ಆಲಿಯಾ ಭಟ್, ರಣಬೀರ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ನಾಗಾರ್ಜುನ, ಮೌನಿ ರಾಯ್ ಮತ್ತು ಅಮಿತಾಬ್ ಬಚ್ಚನ್ ಇದ್ದಾರೆ. ಇದನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 9 ರಂದು ಥಿಯೇಟರ್‌ಗಳಲ್ಲಿ ಬ್ರಹ್ಮಾಸ್ತ್ರ ತೆರೆಕಂಡಿತ್ತು. (ಏಜೆನ್ಸೀಸ್​)