ಮುಂಬೈ: ನಟ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದೆ. ಬಾಲಿವುಡ್ನಲ್ಲಂತೂ ಈ ಚಿತ್ರ ರಣವೀರ್ ಸಿಂಗ್ ಅಭಿನಯದ 83 ಸಿನಿಮಾಗೆ ಒಳ್ಳೆಯ ಸ್ಪರ್ಧೆ ನೀಡಿ ಹಿಂದಿಯಲ್ಲೂ ಒಳ್ಳೆಯ ಹಣಗಳಿಕೆ ಮಾಡಿದೆ.
ಸಿನಿಮಾ ಮೂಲಗಳ ಪ್ರಕಾರ ಹಿಂದಿ ಅವತರವಣಿಕೆಯಲ್ಲಿ ಬಿಡುಗಡೆಯಾದ ಪುಷ್ಪ 100 ಕೋಟಿ ರೂ. ಬಿಸಿನೆಸ್ ಮಾಡಿದೆ ಎಂದು ಹೇಳಲಾಗಿದೆ. ಅಲ್ಲದೆ, ಈಗಲೂ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಲೇ. ಹಿಂದಿಯಲ್ಲಿ ಪುಷ್ಪ ಚಿತ್ರದ ಸಾಧನೆಯನ್ನು ಕೊಂಡಾಡಿರುವ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್, ಈ ಚಿತ್ರದ ಯಶಸ್ಸು ಬಾಲಿವುಡ್ ಸ್ಟಾರ್ಗಳಿಗೆ ಮಾಡಿದ ಕಪಾಳ ಮೋಕ್ಷ ಎಂದಿದ್ದಾರೆ. ನೆಟ್ಟಿಗರು ಕೂಡ ಇದು ನಿಜ ಎಂದು ಧ್ವನಿಗೂಡಿಸಿದ್ದಾರೆ.
ಬಾಲಿವುಡ್ನಲ್ಲಿ ಸೃಜನಶೀಲತೆ ಇಲ್ಲ. ಹಳೆಯ ಹಾಡು, ಸಿನಿಮಾಗಳನ್ನೇ ರೀಮಿಕ್ಸ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಯಶಸ್ವಿ ಚಿತ್ರ ಅಥವಾ ಬಯೋಪಿಕ್ಗಳನ್ನು ಮಾಡುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಧ್ವನಿಯೇರಿಸಿದ್ದಾರೆ.
ಟಾಲಿವುಡ್, ಬಾಲಿವುಡ್ ಅನ್ನು ವಶಪಡಿಸಿಕೊಳ್ಳಲು ಇದು ಸುಸಮಯವಾಗಿದೆ. ಭ್ರಷ್ಟ ಬಾಲಿವುಡ್ ಇನ್ನು ಮುಂದೆ ಭಾರತ ಅಥವಾ ಅದರ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ. ತೆಲುಗು ಚಲನಚಿತ್ರಗಳು ಭಾರತೀಯ ಸಂಸ್ಕೃತಿ/ಕುಟುಂಬದ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಮತ್ತು ಭಾರತದ ಜನರು ಅದನ್ನು ಇಷ್ಟಪಡುತ್ತಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ತೆಲುಗು ಚಲನಚಿತ್ರಗಳನ್ನು ಮಾರುಕಟ್ಟೆಗೆ ತರಬೇಕು ಎಂದು ಮತ್ತೊಬ್ಬ ನೆಟ್ಟಿಗ ಅಭಿಪ್ರಾಯಪಟ್ಟಿದ್ದಾರೆ.
ಪುಷ್ಪ ಸಿನಿಮಾವನ್ನು ರಂಗಸ್ಥಳಂ ಖ್ಯಾತಿಯ ಸುಕುಮಾರ್ ನಿರ್ದೇಶನ ಮಾಡಿದ್ದು, ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿ, ಭರ್ಜರಿ ಕಲೆಕ್ಸನ್ ಕೂಡ ಮಾಡಿಕೊಂಡಿದೆ. ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ಗೆ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಚಿತ್ರದ ಎರಡನೇ ಭಾಗದ ಶೂಟಿಂಗ್ಗೆ ಚಿತ್ರತಂಡ ತಯಾರಿ ನಡೆಸಿದೆ. (ಏಜೆನ್ಸೀಸ್)