ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ ಎಂದ ನಟಿ ಶ್ವೇತಾ ತಿವಾರಿ! ವಿಡಿಯೋ ವೈರಲ್​, ಜಾಲತಾಣದಲ್ಲೇ ತರಾಟೆ

shwetha tivari
Published on

ಭೋಪಾಲ್​: "ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ (ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೇ)" ಎಂದು ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ವೇದಿಕೆಯಲ್ಲೇ ಹೇಳಿದ್ದು, ಈ ಮಾತು ವಿವಾದದ ಕಿಡಿ ಹೊತ್ತಿಸಿದೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದ್ದು, ನೆಟ್ಟಿಗರಿಂದ ಟೀಕೆಗಳ ಸುರಿಮಳೆಯೇ ಹರಿದುಬರುತ್ತಿದೆ. ಅತ್ತ ಶ್ವೇತಾ ತಿವಾರಿಯ ಮಾತಿನ ವಿರುದ್ಧ ಗರಂ ಆಗಿರುವ ಮಧ್ಯಪ್ರದೇಶದ ಗೃಹ ಸಚಿವರು ನಟಿ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?: ಮಹಾಭಾರತ ಧಾರಾವಾಹಿಯಲ್ಲಿ ಭಗವಾನ್ ಕೃಷ್ಣಾ ಖ್ಯಾತಿ ಸೌರಭ್ ರಾಜ್ ಜೈನ್ ಜತೆ ಫ್ಯಾಷನ್ ಸಂಬಂಧಿತ ವೆಬ್ ಸರಣಿಯೊಂದರಲ್ಲಿ ನಟಿಸಿರುವ ಶ್ವೇತಾ ತಿವಾರಿ, ಇತ್ತೀಚಿಗೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಾ, "ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ (ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೇ)'' ಎಂದುಬಿಟ್ಟರು.

ದೇವರ ಕುರಿತು ಶ್ವೇತಾ ತಿವಾರಿ ಕೊಟ್ಟ ವಿವಾದಾತ್ಮಕ ಹೇಳಿಕೆಯನ್ನು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತೀವ್ರವಾಗಿ ಖಂಡಿಸಿದ್ದಾರೆ. ಈ ಹೇಳಿಕೆ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಭೋಪಾಲ್ ಪೊಲೀಸ್ ಕಮಿಷನರ್​ಗೆ ಸೂಚಿಸಿದ್ದಾರೆ.

ಹಿಂದಿಯ ಬಿಗ್​ಬಾಸ್​-4ರ ವಿಜೇತೆ ಶ್ವೇತಾ ತಿವಾರಿ, ಅನೇಕ ಟಿವಿ ಶೋಗಳು, ಧಾರಾವಾಹಿ, ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದಾ ಹಾಟ್​ನೆಸ್​ ಆಗಿಯೇ ಕಾಣಿಸಿಕೊಳ್ಳುತ್ತಾ ಗಮನಸೆಳೆಯುವ ಶ್ವೇತಾ ತಿವಾರಿ, ಎರಡು ಮಕ್ಕಳ ತಾಯಿ. ಇವರ ದಾಪಂತ್ಯ ಜೀವನದಲ್ಲಿ ಉಂಟಾದ ಬಿರುಕಿನಿಂದಲ್ಲೂ ಸುದ್ದಿಯಲ್ಲಿದ್ದರು.

Maharashtra, Sep 21 (ANI): Television actress Shweta Tiwari spotted at Filmcity, in Mumbai on Tuesday. (ANI Photo)
Maharashtra, Sep 21 (ANI): Television actress Shweta Tiwari spotted at Filmcity, in Mumbai on Tuesday. (ANI Photo)

ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ ಎಂದ ಶ್ವೇತಾರ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸೇರಿದಂತೆ ಹಲವರು ಕಟುವಾಗಿ ಟೀಕಿಸಿದ್ದಾರೆ. 'ಇಂತಹ ನಿರ್ಲಜ್ಜರನ್ನು ಕತ್ತರಿಸಬೇಕು'. 'ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಯಾರಿಗೂ ಶೋಭೆಯಲ್ಲ'. 'ಕೆಲವರು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ...' ಹೀಗೆ ಶ್ವೇತಾ ತಿವಾರಿಯನ್ನು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net