ಸಿನಿವಾಣಿ

ಮದ್ವೆಯಾದ ಮಾರನೇ ದಿನವೇ ಭಾರಿ ಎಡವಟ್ಟು ಮಾಡಿಕೊಂಡು ವಿವಾದಕ್ಕೆ ಗುರಿಯಾದ ನಯನತಾರಾ!

ಚೆನ್ನೈ: ಏಳು ವರ್ಷಗಳ ಡೇಟಿಂಗ್​ ನಂತರ ಲೇಡಿ ಸೂಪರ್​ ಸ್ಟಾರ್​ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್​ ತಮ್ಮಿಬ್ಬರ ಸಂಬಂಧಕ್ಕೆ ವಿವಾಹದ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ಜೂನ್​ 9ರಂದು ಮಹಾಬಲಿಪುರಂನ ಖಾಸಗಿ ರೆಸಾರ್ಟ್​ ಒಂದರಲ್ಲಿ ಇಬ್ಬರು ಕುಟುಂಬದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ.

ಮದುವೆಯಾದ ಮಾರನೇ ದಿನವೇ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ತಮ್ಮ ನೆಚ್ಚಿನ ದೇವರನ್ನು ಭೇಟಿಯಾಗಿದ್ದಾರೆ. ಹೌದು. ತಿರುಪತಿಗೆ ಭೇಟಿ ನೀಡಿದ ತಾರಾದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ವೈವಾಹಿಕ ಜೀವನ ಸುಖಮಯವಾಗಿರಲೆಂದು ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಭೇಟಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಯನಾ ಹಳದಿ ಸೀರೆಯಲ್ಲಿ ಕಂಗೊಳಿಸುತ್ತಿದ್ದರೆ, ವಿಘ್ನೇಶ್​ ಬಿಳಿ ಕುರ್ತಾ ಧರಿಸಿ ಮಿಂಚಿದ್ದಾರೆ.

ತಿರುಪತಿ ಭೇಟಿಯ ವೇಳೆ ನಯನಾ ಮತ್ತು ವಿಘ್ನೇಶ್​ ಕೆಟ್ಟ ಕಾರಣದಿಂದ ಸುದ್ದಿಯಾಗಿದ್ದಾರೆ. ನಯನಾ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ತಿರುಮಲ ದೇವಸ್ಥಾನದ ಮಾಡಾ ಸ್ಟ್ರೀಟ್​ನಲ್ಲಿ ನಯನಾ ಚಪ್ಪಲಿ ಹಾಕಿಕೊಂಡು ಓಡಾಡಿರುವ ಆರೋಪ ಕೇಳಿಬಂದಿದೆ. ಪಾದರಕ್ಷೆ ಧರಿಸಿ ಪವಿತ್ರ ದೇವಾಲಯದ ಬಳಿ ಫೋಟೋ ಶೂಟ್ ಮಾಡಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ಸ್ಥಳಕ್ಕೆ ಹೇಗೆ ಬರಬೇಕೆಂಬುದು ತಿಳಿದಿಲ್ಲವಾ ಎಂದು ಸಾರ್ವಜನಿಕರ ಕಿಡಿಕಾರಿದ್ದಾರೆ.

ಪವಿತ್ರ ದೇವಾಲಯದ ಸಮೀಪವಿರುವ ನಾಲ್ಕು ಮಾಡಾ ಬೀದಿಗಳಲ್ಲಿ ಶೂ ಮತ್ತು ಚಪ್ಪಲಿಗಳನ್ನು ಧರಿಸಲು ಅನುಮತಿ ಇಲ್ಲ. (ಏಜೆನ್ಸೀಸ್​)