ಸಿನಿವಾಣಿ

ನನ್ನದು ನಿನ್ನ ಬಾಲ್​ಗಳಿಗಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿಯ ಖಡಕ್​ ಉತ್ತರ

ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಲೈವ್​ ಚಾಟಿಂಗ್​ ನಡೆಸುವ ನಟಿಯರಿಗೆ ಫ್ಯಾನ್ಸ್​ ರೂಪದ ಕೆಲ ಕಿಡಿಗೇಡಿಗಳು ಅಶ್ಲೀಲವಾಗಿ ಮಾತನಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ಸೈಬರ್​ ಕ್ರೈಂ ಎಂಬ ಕನಿಷ್ಠ ತಿಳಿವಳಿಕೆಯು ಇರುವುದಿಲ್ಲ.

ಇತ್ತೀಚೆಗೆ ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟಿ ಯಶಿಕಾ ಆನಂದ್​ ಸಹ ಇಂಥದ್ದೇ ಕಹಿ ಅನುಭವವನ್ನು ಎದುರಿಸಿದ್ದಾರೆ. ಯಶಿಕಾ ತೆಲುಗಿನಲ್ಲಿ ಕೇವಲ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್​ ದೇವರಕೊಂಡ ಅಭಿನಯದ ನೋಟಾ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಆದರೆ, ಸಿನಿಮಾ ಸೋತಿದ್ದರಿಂದ ಟಾಲಿವುಡ್​ನಿಂದ ಯಶಿಕಾಗೆ ಹೆಚ್ಚಿನ ಸಿನಿಮಾ ಆಫರ್​ಗಳು ಬರಲಿಲ್ಲ.

ತಮಿಳಿನಲ್ಲಿ ಹಲವು ಚಿತ್ರಗಳಿಗೆ ಸಹಿ ಮಾಡಿರುವ ಯಶಿಕಾ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಶೂಟಿಂಗ್​ ಸ್ತಬ್ಧವಾಗಿದೆ. ಈ ಮಧ್ಯೆ ಗುರುವಾರ ಅಭಿಮಾನಿಗಳೊಂದಿಗೆ ಯಶಿಕಾ ಇನ್​ಸ್ಟಾಗ್ರಾಂ ಸಂವಹನ ನಡೆಸಿದರು.

ಈ ವೇಳೆ ಅಭಿಮಾನಿ ಸೋಗಿನ ಕಿಡಿಗೇಡಿಯೊಬ್ಬ ಯಶಿಕಾರ ಸ್ತನಗಳ ಗಾತ್ರದ ಬಗ್ಗೆ ಪಶ್ನಿಸಿದನು. ಇದಕ್ಕೆ ಖಡಕ್​ ಉತ್ತರ ನೀಡಿರುವ ಯಶಿಕಾ "ನಿಮ್ಮ ಚೆಂಡುಗಳಿಗಿಂತ ದೊಡ್ಡದಾಗಿವೆ" ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ಈ ರೀತಿ ಕಿರಿಕಿರಿ ಉಂಟು ಮಾಡುವ ಪ್ರಶ್ನೆಗಳು ಅಭಿಮಾನಿಗಳೊಂದಿಗೆ ಸಂವಹನ ನಡೆಸುವಾಗಲೆಲ್ಲಾ ನಟಿಯರಿಗೆ ಎದುರಾಗುವುದು ಸಾಮಾನ್ಯವಾಗಿದೆ. ಕೆಲವು ನಟಿಯರು ಇಂತಹ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಮುನ್ನಡೆಯುತ್ತಾರೆ. ಆದರೆ, ಇನ್ನು ಕೆಲವರು ಇದನ್ನು ಸಾರ್ವಜನಿಕರ ಗಮನಕ್ಕೆ ತಂದು ನಮ್ಮ ನಡುವೆ ಇಂತವರು ಇದ್ದಾರೆಂದು ತಿಳಿಸುತ್ತಾರೆ.

ಇದೀಗ ಯಶಿಕಾ ನೀಡಿದ ಖಡಕ್​ ಉತ್ತರಕ್ಕೆ ಅವರ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣ ಹಿಂಬಾಲಕರು ಸಂಪುರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)