ಸಿನಿವಾಣಿ

ಇದು ತುಂಬಾ ಕಷ್ಟಕರವಾಗಿದ್ದರೆ ಸುಮ್ಮನಿರಿ ಮತ್ತು ಬದಕಲು ಬಿಡಿ: ನಟಿ ಕಾಜಲ್​ ಅಗರ್ವಾಲ್​ ಮನವಿ

ಹೈದರಾಬಾದ್​: ನಟಿ ಕಾಜಲ್​ ಅಗರ್ವಾಲ್​ ಗರ್ಭಿಣಿ ಆಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ದುಬೈನಲ್ಲಿರುವ ಕಾಜಲ್ ತಮ್ಮ ಬೇಬಿ ಬಂಪ್​ ಫೋಟೋ ಶೇರ್​ ಮಾಡಿದ್ದಾರೆ. ಅಲ್ಲದೆ, ಇನ್​ಸ್ಟಾಗ್ರಾಂ ಮೂಲಕ ಒಂದು ಸಂದೇಶವನ್ನು ಸಹ ರವಾನಿಸಿದ್ದಾರೆ.

ನಾನೀಗ ಜೀವನದಲ್ಲಿ ಅತ್ಯಂತ ಅದ್ಭುತವಾದ ಹೊಸ ಬೆಳವಣಿಗೆಯನ್ನು ಅನುಭವಿಸುತ್ತಿದ್ದೇನೆ. ಗರ್ಭಿಣಿಯಾಗಿ ಮತ್ತು ಸಂತೋಷದ ಜೀವನವನ್ನು ಅನುಭವಿಸುತ್ತಿದ್ದೇನೆ ಎಂದಿರುವ ಕಾಜಲ್​, ಕೆಲವು ಕಾಮೆಂಟ್‌ಗಳು/ ಬಾಡಿ ಶೇಮಿಂಗ್​ ಕುರಿತ ಸಂದೇಶಗಳು/ ಮೀಮ್‌ಗಳು ನಿಜವಾಗಿಯೂ ಯಾರಿಗೂ ಒಳಿತು ಮಾಡುವುದಿಲ್ಲ. ನಾವು ದಯೆಯಿಂದ ವರ್ತಿಸುವುದನ್ನು ಕಲಿಯೋಣ. ಅದು ತುಂಬಾ ಕಷ್ಟಕರವಾಗಿದ್ದರೆ ಸುಮ್ಮನಿದ್ದುಬಿಡಿ ಮತ್ತು ಬದಕಲು ಬಿಡಿ ಎಂದಿದ್ದಾರೆ. ಅಲ್ಲದೆ, ಹೆರಿಗೆಯ ನಂತರ, ನಾವು ಮೊದಲಿನ ರೀತಿಯಲ್ಲಿ ಹಿಂತಿರುಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಅಥವಾ ಗರ್ಭಧಾರಣೆಯ ಮೊದಲು ನಾವು ನೋಡುತ್ತಿದ್ದ ರೀತಿಯಲ್ಲಿ ಸಂಪೂರ್ಣವಾಗಿ ಹಿಂತಿರುಗುವುದಿಲ್ಲ ಮತ್ತು ಅದು ಸತ್ಯ ಕೂಡ ಎಂದು ಕಾಜಲ್​ ಬರೆದುಕೊಂಡಿದ್ದು, ಬಾಡಿ ಶೇಮಿಂಗ್​ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.

ಕಾಜಲ್ ಈ ವಿಷಯದ ಕುರಿತು ಮತ್ತಷ್ಟು ಮಾತನಾಡಿದ್ದು, ಮಗುವನ್ನು ಪೋಷಿಸುವ ಮತ್ತು ಹೆರಿಗೆ ಮಾಡುವ ಮಹಿಳೆಯರ ಸಾಮರ್ಥ್ಯ ಅದ್ಭುತವಾಗಿದೆ. ಗರ್ಭಾವಸ್ಥೆಯಲ್ಲಿ ಬರುವ ಕೆಲವು ದೇಹದ ಬದಲಾವಣೆಗಳು ಅಹಿತಕರವಾಗಿರುತ್ತವೆ. ಆದರೆ, ಅವುಗಳು ನಿಮ್ಮ ಬೆಳೆಯುತ್ತಿರುವ ಮಗುವನ್ನು ಬೆಂಬಲಿಸುತ್ತವೆ. ಗರ್ಭಾವಸ್ಥೆಯು ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಕಾಜಲ್​ ಹೇಳಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೋಗಳಲ್ಲಿ ಕಾಜಲ್ ಬೇಬಿ ಬಂಪ್​ ಪ್ರದರ್ಶಿಸಿದ್ದು, ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಕಾಜಲ್ ಅಗರ್ವಾಲ್ ಅವರು ಮೆಗಾಸ್ಟಾರ್​ ಚಿರಂಜೀವಿ ಅಭಿನಯದ ಆಚಾರ್ಯ ಮತ್ತು ಹಿಂದಿ ಚಿತ್ರ ಉಮಾ ಮತ್ತು ದುಲ್ಕರ್ ಸಲ್ಮಾನ್ ಅವರ ಹೇ ಸಿನಾಮಿಕಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)