2022 ಆಗಸ್ಟ್​ 7ರಂದು ರಾತ್ರಿ 7 ಗಂಟೆಗೆ ಮಗುವಿಗೆ ಜನ್ಮ ನೀಡುತ್ತೇನೆ: ಸಮಂತಾ ಹೇಳಿಕೆ ವೈರಲ್​

Samantha
Published on

ಹೈದರಾಬಾದ್​: ಪ್ರೀತಿಸಿ ಮದುವೆಯಾದ ಕೆಲವೇ ವರ್ಷಗಳಲ್ಲಿ ತಮ್ಮ ವೈವಾಹಿಕ ಸಂಬಂಧವನ್ನು ಕಡಿದುಕೊಂಡಿರುವ ಮಾಜಿ ತಾರಾ ದಂಪತಿ ಸಮಂತಾ ಮತ್ತು ನಾಗಚೈತನ್ಯ ಸಿನಿಮಾ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಇಬ್ಬರ ಡಿವೋರ್ಸ್ ವಿಚಾರವನ್ನು ಅಭಿಮಾನಿಗಳೂ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಒಂದಲ್ಲ ಒಂದು ರೀತಿಯಲ್ಲಿ ಇಬ್ಬರ ಸಂಬಂಧವನ್ನು ನೆನಪಿಸುತ್ತಿದ್ದಾರೆ.

ಇದೀಗ ಸಮಂತಾರ 2019ನೇ ಇಸವಿಯ ಹಳೆಯ ವಿಡಿಯೋವೊಂದನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಯಾಮ್​ ಮತ್ತು ಚಾಯ್​ ಆದರ್ಶ ದಂಪತಿಗಳಾಗಿದ್ದರು. ವಿಡಿಯೋದಲ್ಲಿ ಅಭಿಮಾನಿಗಳೊಂದಿಗೆ ಸಮಂತಾ ಸಂವಾದ ನಡೆಸಿದ್ದಾರೆ. ಈ ವೇಳೆ ಗರ್ಭಾವಸ್ಥೆಯ ಬಗ್ಗೆಯು ಮಾತನಾಡಿದ್ದಾರೆ.

ನನ್ನ ದೇಹದಲ್ಲಿ ಬದಲಾವಣೆ ನೋಡಲು ಅಭಿಮಾನಿಗಳು ಎದುರು ನೋಡುತ್ತಿರುವುದು ನನಗೆ ಅರ್ಥವಾಗಿದೆ. ಏನಾದರೂ ಸಿಹಿ ಸುದ್ದಿ ಇದೆಯೇ ಎಂದು ಅನೇಕರು ಕೇಳುತ್ತಾರೆ. ನಾನು 2022ರ ಆಗಸ್ಟ್​ 7ರಂದು ರಾತ್ರಿ 7 ಗಂಟೆಗೆ ಮಗುವಿಗೆ ಜನ್ಮ ನೀಡುತ್ತೇನೆ ಎಂದಿದ್ದರು.

2019ರಲ್ಲೇ ಮಾಡಿದ್ದ ಈ ಕಾಮೆಂಟ್​ ಇದೀಗ ಮತ್ತೆ ಮುನ್ನೆಲೆ ಬಂದಿದೆ. ಅಭಿಮಾನಿಗಳು ಹಳೆಯ ವಿಡಿಯೋ ಶೇರ್​ ಮಾಡಿದ್ದು, ಅದು ವೈರಲ್​ ಆಗಿದೆ. ಯಾವುದೇ ಸಮಸ್ಯೆ ಉದ್ಭವಿಸದೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಹೇಳಿದಂತೆಯೇ ಸಮಂತಾ ತಾಯಿ ಆಗುತ್ತಿದ್ದರೇನೋ? ಆದರೆ, ಇಬ್ಬರ ಸಾಂಸಾರಿಕ ಜೀವನದಲ್ಲಿ ಏನಾಯ್ತೋ ಕಾಣೆ? ಇದೀಗ ಇಬ್ಬರು ದೂರಾಗಿದ್ದಾರೆ. ಆದರೂ ಇಬ್ಬರು ಮತ್ತೆ ಒಂದಾಗಬಹುದು ಅಂತಾ ಅಭಿಮಾನಿಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಆದರೆ, ಆ ಕಾಲ ಕೂಡಿಬರುತ್ತಾ ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net