ಸಿನಿವಾಣಿ

ಹಾಟ್​ ಫೋಟೋ ಹರಿಬಿಟ್ಟ ವರದನಾಯಕ ಸಿನಿಮಾ ಖ್ಯಾತಿಯ ನಟಿ ನಿಕೇಶಾ ಪಟೇಲ್!

ಹೈದರಾಬಾದ್​: ವರದನಾಯಕ, ಡಕೋಟಾ ಪಿಕ್ಚರ್​ ಮತ್ತು ಲವ್​ ಯು ಆಲಿಯಾ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ನಟಿ ನಿಕೇಶಾ ಪಟೇಲ್, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ಸದ್ಯ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿರುವ ನಿಕೇಶಾ, ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರು ಹೃದಯಕ್ಕೆ ಕನ್ನ ಹಾಕುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ನಿಕೇಶಾ ಬಿಕಿನಿ ಫೋಟೋವನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ.

ನೀಲಿ ಬಣ್ಣದ ಬಿಕಿನಿಯಲ್ಲಿ ಕ್ಯಾಮೆರಾಗೆ ಪೊಸ್​​ ನೀಡಿರುವ ಫೋಟೋವನ್ನು ಶೇರ್​ ಮಾಡಿದ್ದು, ಸಾವಿರಾರು ಲೈಕ್ಸ್​ ಮತ್ತು ಕಾಮೆಂಟ್​ಗಳು ಹರಿದುಬಂದಿವೆ. ನಿಕೇಶ್​ ಹಾಟ್​ ಲುಕ್​ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಸದ್ಯ ನಿಕೇಶಾ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಯಾರಾದರೂ ಅವಕಾಶ ನೀಡಿದರೆ, ಸಿನಿ ರಂಗದಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸಲು ನಿಕೇಶಾ ರೆಡಿಯಾಗಿದ್ದಾರೆ. (ಏಜೆನ್ಸೀಸ್​)