ಸಿನಿವಾಣಿ

ರಿತೇಶ್​, ಪ್ರೀತಿ ಝಿಂಟಾರನ್ನು ಅಪ್ಪಿ, ಕೈಗೆ ಮುತ್ತಿಟ್ಟಾಗ ಕೊಟ್ಟ ಎಕ್ಸ್​ಪ್ರೆಷನ್ ಬಗ್ಗೆ ಜೆನಿಲಿಯಾ ಹೇಳಿದ್ದಿಷ್ಟು..!

ಮುಂಬೈ: ಕೆಲ ತಿಂಗಳ ಹಿಂದೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದಕ್ಕೆ ರಿತೇಶ್ ದೇಶ್​ಮುಖ್​- ಜೆನಿಲಿಯಾ ದಂಪತಿ ಹೋಗಿದ್ದಾಗ ಅಲ್ಲಿ ರಿತೇಶ್ ಹಾಗೂ ನಟಿ ಪ್ರೀತಿ ಝಿಂಟಾ ಭೇಟಿಯಾಗಿ ಉಭಯಕುಶಲೋಪರಿ ನಡೆಸಿದ್ದರು. ಇದೇ ಸಂದರ್ಭದಲ್ಲಿ ಪ್ರೀತಿ ಝಿಂಟಾ ಕೈಗಳಿಗೆ ರಿತೇಶ್​ ಮುತ್ತು ಕೊಟ್ಟು, ಅಪ್ಪಿಕೊಂಡು ಆತ್ಮೀಯತೆಯಿಂದ ನಡೆದುಕೊಂಡಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ಜೆನಿಲಿಯಾ ಆ ದೃಶ್ಯವನ್ನು ನೋಡಿ ಒಂದು ರೀತಿಯ ಎಕ್ಸ್​ಪ್ರೆಷನ್ ಕೊಟ್ಟಿದ್ದರು. ಇದಿಷ್ಟು​ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿತ್ತು. ಟಿಪಿಕಲ್ ಹೆಂಡತಿ ಹೇಗಿರುತ್ತಾಳೆ ಎಂಬುದನ್ನು ಅನಾವರಣಗೊಳಿಸಿತ್ತು.

ಇದೀಗ ಆ ವಿಡಿಯೋ ಬಗ್ಗೆ ಬಹು ತಿಂಗಳ ಬಳಿಕ ಜೆನಿಲಿಯಾ ಮಾತನಾಡಿದ್ದಾರೆ. ನಟ ಅರ್ಬಾಜ್​ ಖಾನ್​ ನಡೆಸಿಕೊಡುವ ಪಿಂಚ್ ಹೆಸರಿನ ಟಾಕ್​ ಶೋನಲ್ಲಿ ಮಾತನಾಡಿದ ಜೆನಿಲಿಯಾ, ಬಹಳ ಸಮಯದ ನಂತರ ನಾನು ಪ್ರಶಸ್ತಿ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದೆ. ನಾನು ಎಲ್ಲವನ್ನು ಧರಿಸಿದ್ದೆ ಮತ್ತು ಹೈ ಹೀಲ್ಸ್ ಕೂಡ ಹಾಕಿಕೊಂಡಿದ್ದೆ. ಸಮಾರಂಭದಲ್ಲಿ ತುಂಬಾ ಜನರನ್ನು ಭೇಟಿ ಮಾಡುತ್ತಿದ್ದೆವು, ತುಂಬಾ ಸಂಭಾಷಣೆ ನಡೆಸುತ್ತಿದ್ದೆವು. ಪ್ರೀತಿ ಮತ್ತು ರಿತೇಶ್ ಸಂಭಾಷಣೆ ನಡೆಸುವ ವೇಳೆ ಹೈ ಹೀಲ್ಸ್​ನಿಂದಾಗಿ ನನ್ನ ಪಾದಗಳು ನನಗೆ ತುಂಬಾ ಹಿಂಸೆ ನೀಡುತ್ತಿತ್ತು. ದುರದೃಷ್ಟವಶಾತ್ ಇದೇ ಸಮಯದಲ್ಲಿ ಕ್ಯಾಮರಾಮನ್ ನನ್ನ ಎಕ್ಸ್​ಪ್ರೆಷನ್ ಸೆರೆಹಿಡಿದಿದ್ದಾರೆ ಎಂದರು.

ಸಿನಿಮಾ ವಿಚಾರಕ್ಕೆ ಬಂದರೆ, ಜೆನಿಲಿಯಾ ಡಿಸೋಜಾ ಅವರು ತುಜೆ ಮೇರಿ ಕಸಮ್, ಸಾಂಬಾ, ಚೆನ್ನೈ ಕಾದಲ್, ಸಂತೋಷ್ ಸುಬ್ರಮಣ್ಯಂ, ಜಾನೆ ತು ಯಾ ಜಾನೆ ನಾ ಮತ್ತು ತೇರೇ ನಾಲ್ ಲವ್ ಹೋ ಗಯಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ರಿತೀಶ್ ದೇಶಮುಖ್ ಕೊನೆಯದಾಗಿ ಭಾಗಿ 3ರಲ್ಲಿ ಕಾಣಿಸಿಕೊಂಡರು. (ಏಜೆನ್ಸೀಸ್​)