ಸಿನಿವಾಣಿ

ಹನಿಮೂನ್​ಗಾಗಿ ಮಾಲ್ಡೀವ್ಸ್​ಗೆ ಹಾರಿರುವ ರತ್ನನ್​ ಬೆಡಗಿ: ಬೋಲ್ಡ್​ ಫೋಟೋಸ್​ ಶೇರ್​ ಮಾಡಿದ ರೆಬಾ!

ಬೆಂಗಳೂರು: ನಟ ಡಾಲಿ ಧನಂಜಯ್​ ಅಭಿನಯದ “ರತ್ನನ್​ ಪ್ರಪಂಚ” ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದ ನಟಿ ರೆಬಾ ಮೊನಿಕಾ ಜಾನ್​ ಇತ್ತೀಚೆಗಷ್ಟೇ ತಮ್ಮ ಬಾಯ್​ಫ್ರೆಂಡ್​ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಅವರು ಹನಿಮೂನ್​ ಪ್ರವಾಸದಲ್ಲಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ತಮ್ಮ ಬಾಯ್​ಫ್ರೆಂಡ್​ ಜೊಮನ್​ ಜೋಸೆಫ್​ ಜತೆ ಹೊಸ ಬಾಳ ಪಯಣವನ್ನು ಆರಂಭಿಸಿರುವ ರೆಬಾ ಸದ್ಯ ಹನಿಮೂನ್​ಗಾಗಿ ಮಾಲ್ಡೀವ್ಸ್​ನಲ್ಲಿ ಬೀಡು ಬಿಟ್ಟಿದ್ದಾರೆ. ಜೋಸೆಫ್​ ಜತೆಗಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ರೆಬಾ ಬೋಲ್ಡ್​ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ರೆಬಾ ಮತ್ತು ಜೋಸೆಫ್​ ಮದುವೆ ಕ್ರಿಶ್ಚಿಯನ್​ ಸಂಪ್ರದಾಯದಂತೆ ಕುಟುಂಬ, ಸ್ನೇಹಿತರು ಹಾಗೂ ಬಂಧುಬಳಗದವರ ಸಮ್ಮುಖದಲ್ಲಿ ಬೆಂಗಳೂರಿನ ಚರ್ಚ್​ ಕಳೆದ ಜನವರಿಯಲ್ಲಿ ಸರಳವಾಗಿ ನೆರವೇರಿದೆ.

ಜೋಮನ್​ ಜೋಸೆಫ್​ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ವಿಚಾರವನ್ನು ಕಳೆದ ವರ್ಷ ರೆಬಾ ಘೋಷಿಸಿದ್ದರು. ಸುಮಾರು ಒಂದು ವರ್ಷಗಳ ಕಾಲ ಡೇಟಿಂಗ್​-ಮೀಟಿಂಗ್​ ನಡೆಸಿದ್ದ ಜೋಡಿ, ಇದೀಗ ವೈವಾಹಿಕ ಬಂಧನದ ಮೂಲಕ ಜೀವನದ ಹೊಸ ಇನ್ನಿಂಗ್ಸ್​ ಅನ್ನು ಒಟ್ಟಿಗೆ ಪ್ರಾರಂಭಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ರೆಬಾ ನಿವಿನ್​ ಪೌಲಿ ಅಭಿನಯದ “ಜಾಕೊಬಿಂಟೆ ಸ್ವರ್ಗರಾಜ್ಯಂ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೂಪರ್​ ಸ್ಟಾರ್​ ವಿಜಯ್​ ಅಭಿನಯದ ಬಿಗಿಲ್​ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಕೊನೆಯದಾಗಿ ಥೊವಿನೋ ಅಭಿನಯದ ಫಾರೆನ್ಸಿಕ್​ ಮತ್ತು ಧನಂಜಯ್​ ಅಭಿನಯದ ರತ್ನನ್​ ಪ್ರಪಂಚ ಚಿತ್ರದಲ್ಲಿ ರೆಬಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)