ಸಿನಿವಾಣಿ

ಬಿಗ್​ಬಾಸ್​ ಮನೆಯೊಳಗೆ ರೋಮ್ಯಾನ್ಸ್​! ಫೇಮಸ್​ ಯೂಟ್ಯೂಬರ್​ ಪ್ರೀತಿಗೆ ಗುಡ್​ ಬೈ ಹೇಳಿದ ನಟಿ ದೀಪ್ತಿ

ಹೈದರಾಬಾದ್​: ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್​ ಹಾಗೂ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಇದೀಗ ಜಗಜ್ಜಾಹೀರಾಗಿದೆ. ಅದನ್ನು ಸ್ವತಃ ಷಣ್ಮುಖ ಕೂಡ ಹೇಳಿಕೊಂಡಿದ್ದಾನೆ.

ಶಾನು ಪ್ರಸ್ತುತ ತೆಲುಗು ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಯಾಗಿದ್ದಾರೆ. ಬಿಗ್​ಬಾಸ್​ ಮನೆಗೆ ಹೋದಾಗಿನಿಂದಲೂ ದೀಪ್ತಿ, ಶಾನುಗೆ ತುಂಬಾ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆತ ನಾಮಿನೇಶನ್​ ಆದಾಗಲೆಲ್ಲ ವೋಟ್​ ಮಾಡಿ ಉಳಿಸುವಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದೀಪ್ತಿ ಪ್ರತಿ ಬಾರಿ ಜನರಲ್ಲಿ ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡುತ್ತಾರೆ. ಇಬ್ಬರು ತುಂಬಾ ಪ್ರೀತಿಸುತ್ತಿರುವು ತೆಲುಗಿನಲ್ಲಿ ಹಾಟ್​ ಟಾಪಿಕ್​.

ಆದರೆ, ಅದಕ್ಕಿಂತ ದೊಡ್ಡ ಹಾಟ್​ ಟಾಪಿಕ್​ ಇದೀಗ ವೈರಲ್​ ಆಗಿದೆ. ಅದೇನು ಅಂದರೆ, ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿಗ್​ಬಾಸ್​ನಲ್ಲಿ ಶಾನು ಕ್ಯಾಪ್ಟನ್​ ಆದ ನಂತರ ನೆಡೆದ ಇತ್ತೀಚಿನ ಎಪಿಸೋಡ್​ನಲ್ಲಿ ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿರುವ ದೀಪ್ತಿ ತುಂಬಾ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಅಲ್ಲದೆ, ಆಕೆಯ ಭಾವನೆಗಳನ್ನು ಕದಡಿದೆ. ಹೀಗಾಗಿ ಆಕೆಯ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿದ್ದಾರೆ. ಅಭಿಮಾನಿಗಳು ಕೂಡ ಅದನ್ನು ಸ್ವೀಕರಿಸಿದ್ದಾರೆ.

ಷಣ್ಮುಖ್ ಜಸ್ವಂತ್ ಶೋನಿಂದ ಎಲಿಮಿನೇಟ್ ಆದ ನಂತರ ಇಬ್ಬರು ನಿಜವಾಗಿಯೂ ತಮ್ಮ ಮಾರ್ಗಗಳನ್ನು ಬೇರ್ಪಡಿಸಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)