ಸಿನಿವಾಣಿ

#BBK8: ಒಂದು ವೇಳೆ ಅರವಿಂದ್​-ಮಂಜು ನಡುವೆ ಟೈ ಆದ್ರೆ ಏನಾಗಲಿದೆ? 3ನೇ ವ್ಯಕ್ತಿಗೂ ಹೊಡೆಯುತ್ತಾ ಬಂಪರ್​?

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಆಗಸ್ಟ್​ 7) ಮತ್ತು ನಾಳೆ (ಆಗಸ್ಟ್​ 8) ಸುಮಾರು 10 ತಾಸಿನ ಫಿನಾಲೆ ಕಾರ್ಯಕ್ರಮ ನಡೆಯಲಿದೆ. ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗ್ರ್ಯಾಂಡ್​ ಫಿನಾಲೆ ಅದ್ಧೂರಿಯಾಗಿಯೇ ನೆರವೇರಲಿದೆ. ಇದರ ನಡುವೆ ಈ ಬಾರಿ ಬಿಗ್​ಬಾಸ್​ ಟ್ರೋಫಿ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.

ಕೊರನಾ ಲಾಕ್​ಡೌನ್​ನಿಂದ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸುವ ಮೂಲ ಕನ್ನಡದ ಬಿಗ್​ಬಾಸ್​ ಶೋ ಹೊಸ ದಾಖಲೆಯನ್ನೇ ಬರೆದಿದೆ. ರೇಟಿಂಗ್​ ವಿಚಾರದಲ್ಲೂ ಕಾರ್ಯಕ್ರಮ ಮುಂಚೂಣಿಯಲ್ಲಿದೆ. ಈ ವಿಚಾರದಲ್ಲಿ ನಟ ಸುದೀಪ್​ ಅವರ ತುಂಬಾನೇ ಪ್ರಮುಖವಾದದ್ದು ಎಂದು ಹೇಳಿದರೆ ತಪ್ಪಾಗಲಾರದು.

ಈಗ ಯಾರು ಗೆಲ್ಲಬಹುದು ಎಂಬ ನೆಟ್ಟಿಗರ ಲೆಕ್ಕಾಚಾರದ ಕಡೆಗೆ ಬರೋಣ... ಸದ್ಯ ಮನೆಯಲ್ಲಿ ಅರವಿಂದ್​ ಕೆ.ಪಿ., ಮಂಜು ಪಾವಗಡ, ದಿವ್ಯಾ ಉರುಡುಗ, ವೈಷ್ಣವಿ ಗೌಡ ಮತ್ತು ಪ್ರಶಾಂತ್​ ಸಂಬರಗಿ ಉಳಿದುಕೊಂಡಿದ್ದಾರೆ. ಅದರಲ್ಲೂ ಅರವಿಂದ್​ ಮತ್ತು ಮಂಜು ನಡುವೆ ಟ್ರೋಫಿಗಾಗಿ ತೀವ್ರ ಪೈಪೋಟಿ ನಡೆಯಲಿದೆಯಂತೆ. ಇಬ್ಬರಿಗೂ ಸಮನಾದ ಅಭಿಮಾನಿಗಳ ಬಳಗವೂ ಇದೆ.

ಕಳೆದ ಎರಡು ವಾರಗಳಲ್ಲಿ ಮಂಜು ಮತ್ತು ಅರವಿಂದ್​ ವೋಟಿಂಗ್​ನಲ್ಲೂ ಸಮನಾಗಿ ಬಂದು ನಿಂತಿದ್ದಾರೆನ್ನಲಾಗಿದೆ. ಬಹುಶಃ ಇಬ್ಬರ ನಡುವಿನ ಸ್ಪರ್ಧೆ ಟೈ ಆದರೂ ಆಗಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ. ಒಂದು ವೇಳೆ ಇಬ್ಬರ ನಡುವೆ ಟೈ ಆದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರ ಮುಂದಿದೆ.

ಅರವಿಂದ್​-ಮಂಜು ನಡುವಿನ ಸ್ಪರ್ಧೆ ಟೈ ಆದರೆ, ಬಹುಶಃ ಕಲರ್ಸ್​ ಕನ್ನಡ ಬಹುಮಾನದ ಹಣವನ್ನು ಸಮನಾಗಿ ಇಬ್ಬರಿಗೂ ಹಂಚಬಹುದು ಮತ್ತು ದಿವ್ಯಾ ಉರುಡುಗ ಅಥವಾ ವೈಷ್ಣವಿ ಗೌಡ ಅವರನ್ನು ರನ್ನರ್​​ ಅಪ್​ ಎಂದು ಘೋಷಿಸಬಹುದು. ಇದರಿಂದ ಮೂರನೇ ವ್ಯಕ್ತಿಗೂ ಲಾಭವಾಗಲಿದೆ ಎಂಬ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆಯಾಗಿದೆ. ಆದರೆ, ಫಲಿತಾಂಶ ಏನಾಗಲಿದೆ ಎಂಬುದಕ್ಕೆ ನಾಳೆ ರಾತ್ರಿಯವರೆಗೂ ಕಾಯಬೇಕಿದೆ. (ಏಜೆನ್ಸೀಸ್​)