ಸಿನಿವಾಣಿ

ಅಮಿತಾಭ್​​ ಮನೆಯನ್ನು ಬಾಡಿಗೆಗೆ ಪಡೆದ ಕೃತಿ ಸನೋನ್​: ತಿಂಗಳ ಬಾಡಿಗೆ ಮೊತ್ತ ಕೇಳಿದ್ರೆ ಬೆರಗಾಗ್ತೀರಿ!

ಮುಂಬೈ: ಬಾಲಿವುಡ್​ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ಅವರು ದೇಶ-ವಿದೇಶಗಳಲ್ಲಿ ಲಕ್ಷಾಂತರ ಮೌಲ್ಯದ ಆಸ್ತಿ ಹೊಂದಿರುವುದು ತಿಳಿದೇ ಇದೆ. ಮುಂಬೈನ ಪ್ರತಿಷ್ಠಿತ ಅಂಧೇರಿ ಏರಿಯಾದಲ್ಲಿಯೂ ಒಂದು ಡುಪ್ಲೆಕ್ಸ್​ ಫ್ಲ್ಯಾಟ್​ ಅನ್ನು ಹೊಂದಿದ್ದಾರೆ. ಇದೀಗ ಆ ಫ್ಲ್ಯಾಟ್​ ಅನ್ನು ಬಾಲಿವುಡ್​ ಹಾಟ್​ ಬ್ಯೂಟಿ ಕೃತಿ ಸನೋನ್ ಎರಡು ವರ್ಷಗಳ ಕಾಲ ಬಾಡಿಗೆಗೆ ಪಡೆದಿದ್ದಾರೆ.

ಅಮಿತಾಬ್ ಬಚ್ಚನ್ ಅವರ ಈ ಫ್ಲಾಟ್ ಅಂಧೇರಿ ಪಶ್ಚಿಮದ ಲೋಖಂಡವಾಲಾ ರಸ್ತೆಯಲ್ಲಿರುವ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿದೆ. ನಾಲ್ಕು ಕಾರುಗಳನ್ನು ಪಾರ್ಕ್​ ಮಾಡುವಷ್ಟು ಅನುಕೂಲಕರವಾದ ಪಾರ್ಕಿಂಗ್​ ಜಾಗವು ಸೇರಿದಂತೆ ಫ್ಲ್ಯಾಟ್​ಗೆ ಪ್ರತಿ ತಿಂಗಳ ಬಾಡಿಗೆ ಬರೋಬ್ಬರಿ 10 ಲಕ್ಷ ರೂಪಾಯಿಯನ್ನು ಕೃತಿ ಸನೋನ್​ ನೀಡುತ್ತಿದ್ದಾರೆ.

ಕಳೆದ ನವೆಂಬರ್​ 12ರಂದು ಕೃತಿ ಸನೋನ್​ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದದ ಅವಧಿಯು ಅಕ್ಟೋಬರ್​ 2021 ರಿಂದ ಅಕ್ಟೋಬರ್​ 2023ರವರೆಗೂ ಮಾನ್ಯವಾಗಿರಲಿದೆ. ಮುಂಗಡ ಹಣವಾಗಿ ಈಗಾಗಲೇ 60 ಲಕ್ಷ ರೂ. ಅನ್ನು ಕೃತಿ ಪಾವತಿಸಿದ್ದಾರೆ. 2021ರ ಏಪ್ರಿಲ್​ನಲ್ಲಿ ಈ ಫ್ಲ್ಯಾಟ್​ ಅನ್ನು ಅಮಿತಾಭ್​ ಬರೋಬ್ಬರಿ 31 ಕೋಟಿ ರೂಪಾಯಿಗೆ ಖರೀದಿಸಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಕೃತಿ ಕೊನೆಯದಾಗಿ ಮಿಮಿ ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರದಲ್ಲಿ ಅದ್ಭುತ ನಟನೆಗೆ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಕೃತಿ ಅವರು 'ಬಚ್ಚನ್​ ಪಾಂಡೆ', 'ಆದಿಪುರುಷ', 'ಭೆದಿಯಾ' ಮತ್ತು 'ಗಣಪತ್' ನಂತಹ ಬಿಗ್​ ಬಜೆಟ್​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)