ಮುಂಬೈ: ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮೀ ಬಾಂಬ್' ಚಿತ್ರದ ಟೀಸರ್ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಈ ಟ್ರೇಲರ್ ನೋಡಿದವರೆಲ್ಲಾ ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಎನ್ನದೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸರಿಯಾಗಿ, ಕೇವಲ 24 ಗಂಟೆಗಳಲ್ಲಿ ಈ ಟ್ರೇಲರ್ಗೆ 70 ಮಿಲಿಯನ್ ವೀಕ್ಷಣೆ ಸಿಕ್ಕಿದೆ.
ಇದನ್ನೂ ಓದಿ: ಹಣ ದುರ್ಬಳಕೆ ಆದ ದಾಖಲೆ ಇಲ್ಲ: ಸುಶಾಂತ್ ಪರ ವಕೀಲ
ಈ ಮಧ್ಯೆ, ನಟ ಪುಲ್ಕಿತ್ ಸಾಮ್ರಾಟ್ ಸಹ ಪ್ರತಿಕ್ರಿಯಿಸಿದ್ದಾರೆ. ಚಿತ್ರ ಬಂಪರ್ ಹಿಟ್ ಆಗಲಿಲ್ಲ ಎಂದರೆ, ಬಳೆ ತೊಡುವುದಾಗಿ ಅವರು ಹೇಳಿದ್ದಾರೆ. ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಪುಲ್ಕಿತ್ ಟ್ರೇಲರ್ ನೋಡಿ ಬಃಲ ಖುಷಿಯಾಗಿದ್ದಾರೆ.
ಅದರಲ್ಲೂ ಈ ಟ್ರೇಲರ್ನಲ್ಲಿ ಒಂದು ಸಂಭಾಷಣೆಯಿದೆ. ಒಂದು ಪಕ್ಷ ಯಾವತ್ತಾದರೂ ದೆವ್ವಗಳು ತನ್ನ ಎದುರು ಬಂದರೆ, ಬಳೆ ತೊಡುವುದಾಗಿ ಅಕ್ಷಯ್ ಅವರ ಪಾತ್ರ ಹೇಳುತ್ತದೆ. ಈ ಸಂಭಾಷಣೆಯಿಂದ ಸ್ಫೂತಿ ಪಡೆದಿರುವ ಪುಲ್ಕಿತ್, ಚಿತ್ರ ಬಂಪರ್ ಹಿಟ್ ಆಗಲಿಲ್ಲ ಎಂದರೆ, ಬಳೆ ತೊಡುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ್, 'ನಿಮ್ಮ ಮಾತು ನಿಜವಾದರೆ ಸಿಹಿ ಹಂಚುತ್ತೇನೆ' ಎಂದಿದ್ದಾರೆ.
ಬರೀ ಪುಲ್ಕಿತ್ ಮಾತ್ರವಲ್ಲ, ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಈ ಟ್ರೇಲರ್ಗೆ ಫುಲ್ಫಿದಾ ಆಗಿದ್ದಾರೆ. ನಟಿಯರಾದ ಕೃತಿ ಸನಾನ್, ದಿವ್ಯಾ ದತ್ತಾ, ನಿರ್ಮಾಪಕಿ ಏಕ್ತಾ ಕಪೂರ್ ಮುಂತಾದವರು ಟ್ರೇಲರ್ ಮೆಚ್ಚಿ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: VIDEO| ಚಿನ್ನದ ನಾಣ್ಯದಲ್ಲಿ ಬಂಗಾರದ ಮನುಷ್ಯ!
ಇನ್ನು, ಅಕ್ಷಯ್ ಕುಮಾರ್ ಇತ್ತೀಚೆಗೆ ಬಾಲಿವುಡ್ನಲ್ಲಿನ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ್ದರು. ಯಾರೋ ಕೆಲವರು ಮಾಡುವುದರಿಂದ ಇಡೀ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುವುದು ಸರಿಯಲ್ಲ ಎಂದಿದ್ದರು. ಈ ಕುರಿತು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಅದಕ್ಕೆ ಪ್ರತಿಯಾಗಿ 'ಲಕ್ಷ್ಮೀ ಬಾಂಬ್' ಚಿತ್ರವನ್ನು ನೋಡುವುದಿಲ್ಲ ಎಂದು ಪ್ರತಿಜ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಬ್ಯಾನ್ ಲಕ್ಷ್ಮೀ ಬಾಂಬ್ ಎಂಬ ಅಭಿಯಾನವನ್ನು ಶುರು ಮಾಡಿದ್ದಾರೆ.