VIDEO| ಚಿನ್ನದ ನಾಣ್ಯದಲ್ಲಿ ಬಂಗಾರದ ಮನುಷ್ಯ!

collage (4)
Published on

ವರನಟ ಡಾ. ರಾಜಕುಮಾರ್​ ಬಗ್ಗೆ ಹೇಳುವುದಕ್ಕೆ ಪದಗಳು ಸಾಲುವುದಿಲ್ಲ. ಕನ್ನಡ ಸಿನಿಮಾ ರಂಗಕ್ಕೆ ಅವರ ಕೊಡುಗೆಯೂ ಅಪಾರ. ಅವರಿಲ್ಲದೆ 14 ವರ್ಷಗಳಾದರೂ ಇಂದಿಗೂ ಅವರನ್ನು ಪೂಜಿಸುವ ಅಭಿಮಾನಿಗಳಿದ್ದಾರೆ. ಅದರಲ್ಲೂ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಅವರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅವರ ಭಾವಚಿತ್ರ ಇರುವ ಅಂಚೆ ಚೀಟಿಯನ್ನೂ ಈಗಾಗಲೇ ನೋಡಿದ್ದೀರಿ. ಶಾಲಾ ಪಠ್ಯದಲ್ಲಿಯೂ ಅವರ ಕಥೆ ಓದಿದ್ದೀರಿ. ಇದೀಗ ಅಭಿಮಾನಿಯೊಬ್ಬರು ಡಾ. ರಾಜಕುಮಾರ್ ಅವರ ಮುಖಭಾವದ ಚಿತ್ರವಿರುವ ಬಂಗಾರದ ನಾಣ್ಯವನ್ನು ಸಿದ್ಧಪಡಿಸಿದ್ದಾರೆ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದ್ದು, ಈ ಕುಸುರಿ ಕೆಲಸ ಮಾಡಿದವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net