ಸಿನಿವಾಣಿ

VIDEO: ಪುನೀತ್​ ರಾಜ್​ಕುಮಾರ್ ನೆನಪಿನಲ್ಲಿ 'ಬೊಂಬೆ ಹೇಳುತೈತೆ' ಹಾಡು ಹಾಡಿದ ಮಲಯಾಳಂ ನಟ ಜಯರಾಮ್...

ಕೊಚ್ಚಿ: ಮಲಯಾಳಂ ನಟ ಸೂಪರ್ ಸ್ಟಾರ್ ಜಯರಾಮ್ ದಿ. ನಟ ಪುನೀತ್ ರಾಜ್​ ಕುಮಾರ್ ಅವರಿಗೆ ಹಾಡನ್ನು ಹಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಈ ಹಾಡು ನಮ್ಮೆಲ್ಲರ ಸಹೋದರ ಪುನೀತ್​ ರಾಜ್​ಕುಮಾರ್ ಸರ್ ಅವರಿಗೆ ಅರ್ಪಣೆ ಎಂದು ಜಯರಾಮ್ ಹೇಳಿದ್ದಾರೆ.

ಚಿನ್ನದ ಅಂಗಡಿಯೊಂದು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಜಯರಾಮ್ ವೇದಿಕೆಯೇರಿ ವಿವಿಧ ಹಾಡು ಹಾಡಿದ್ದಾರೆ. ಈ ವೇಳೆ ಬೊಂಬೆ ಹೇಳುತೈತೆ ಹಾಡನ್ನು ಹಾಡಿ ಪುನೀತ್ ರಾಜ್​ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅಕ್ಕಿನೇನಿ ನಾಗಾರ್ಜುನ್, ಪ್ರಭು ಗಣೇಶನ್ ಸೇರಿದಂತೆ ವಿವಿಧ ನಟ, ನಟಿಯರು ಉಪಸ್ಥಿತರಿದ್ದರು.

ಪುನೀತ್ ರಾಜ್​ಕುಮಾರ್ ಎಲ್ಲಾ ಭಾಷೆಯ ಸಿನಿಮಾ ಮಂದಿಯೊಂದಿಗೆ ಸ್ನೇಹ ಹೊಂದಿದ್ದರು. ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಮರುಗಿತ್ತು. ಇದೀಗ ಪುನೀತ್ ಇನ್ನಿಲ್ಲವಾಗಿ ಒಂದು ವರ್ಷ ಸಮೀಪಿಸುತ್ತಿದ್ದರೂ, ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಮಾ ಮಂದಿ ಇಂದಿಗೂ ಪುನೀತ್ ರಾಜ್ ಕುಮಾರ್ ಅವರನ್ನು ಒಂದಿಲ್ಲೊಂದು ಕಾರಣದಿಂದ ನೆನಪಿಸಿಕೊಳ್ಳುತ್ತಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದಲ್ಲಿ ಮಲಯಾಳಂ ನಟ ಜಯರಾಮ್ ಕನ್ನಡ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ.