ಸಿನಿವಾಣಿ

ಆಸ್ಪತ್ರೆಯಲ್ಲಿದ್ದ ಪ್ರಭುದೇವ್​ಗೆ ವೈದ್ಯೆಯೊಂದಿಗೆ ಲವ್​; ಮದುವೆಯಾಗಿದ್ದು ಸತ್ಯವೆಂದ ಸಹೋದರ

ಚೆನ್ನೈ: ನಟ, ಡ್ಯಾನ್ಸ್​ ಕೋರಿಯಾಗ್ರಫರ್​ ಪ್ರಭುದೇವ್​ ಗೌಪ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಪ್ರಭುದೇವ್​ ಮದುವೆ ವಿಚಾರಕ್ಕೆ ಸ್ಪಷ್ಟೀಕರಣ ಸಿಕ್ಕಿದೆ. ಪ್ರಭುದೇವ್​ ಮದುವೆಯಾಗಿದ್ದು ಯಾರನ್ನ? ಅವರ ಮಧ್ಯೆ ಪ್ರೀತಿ ಹುಟ್ಟಿದ್ದೇಗೆ ಎನ್ನುವುದನ್ನು ಅವರ ಸಹೋದರ ಬಾಯಿ ಬಿಟ್ಟಿದ್ದಾರೆ.

ಈ ಹಿಂದೆ ಪ್ರಭುದೇವ್​ ಅವರು ಬ್ಯಾಕ್​ ಬೋನ್​ ಮತ್ತು ಕಾಲುಗಳ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆ ಸಮಯದಲ್ಲಿ ಅಲ್ಲಿನ ವೈದ್ಯೆ ಹಿಮಾನಿಯೊಂದಿಗೆ ಸ್ನೇಹ ಬೆಳೆದಿದೆ. ಸ್ನೇಹ ಪ್ರೀತಿಗೆ ತಿರುಗಿದೆ. ಮೇ ತಿಂಗಳಲ್ಲಿ ಚೆನ್ನೈನಲ್ಲಿ ಇವರಿಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಲಾಕ್​ಡೌನ್​ ಇದ್ದ ಕಾರಣ ಯಾರಿಗೂ ತಿಳಿಸದೆ, ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನೆರವೇರಿದೆ ಎಂದು ಅವರ ಸಹೋದರ ರಾಜು ಸುಂದರಮ್​ ತಿಳಿಸಿದ್ದಾರೆ. ಮದುವೆಗೂ ಮೊದಲು ಎರಡು ತಿಂಗಳ ಕಾಲ ಅವರಿಬ್ಬರು ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದರು ಎನ್ನುವುದೂ ಬಹಿರಂಗವಾಗಿದೆ.

ಕೆಲ ಮೂಲಗಳ ಪ್ರಕಾರ ಹೇಮಾನಿ ಇದುವರೆಗೆ ಪ್ರಭುದೇವ್​ ಅವರ ಕುಟುಂಬವನ್ನು ಕೇವಲ ಎರಡು ಬಾರಿ ಭೇಟಿ ಮಾಡಿದ್ದಾರಂತೆ. ಪ್ರಭುದೇವ್​ಗೆ ರಾಮ್​ಲತಾ ಅವರೊಂದಿಗೆ ಮೊದಲನೇ ಮದುವೆಯಾಗಿದೆ. ನಟಿ ನಯನತಾರಾ ಅವರೊಂದಿಗೆ ಸಂಬಂಧವಿದೆ ಎನ್ನುವ ವಿಚಾರಗಳೂ ಸಿನಿಮಾ ಕ್ಷೇತ್ರದಲ್ಲಿ ಕೇಳಿಬಂದಿತ್ತು. (ಏಜೆನ್ಸೀಸ್)