ಸಿನಿವಾಣಿ

ಅಮೆರಿಕಾ ಜಪಾನ್​ನಲ್ಲಿ ಬಾಹುಬಲಿ, ಸಾಹೋ ಅಬ್ಬರ; ಪ್ರಭಾಸ್​ ಚಿತ್ರಗಳು ಮರುಬಿಡುಗಡೆ

ಅಕ್ಟೋಬರ್​ 23ಕ್ಕೆ ಪ್ರಭಾಸ್​ ಹುಟ್ಟುಹಬ್ಬ. ಆ ವಿಶೇಷ ದಿನದಂದು ಸಾಹೋ ಮತ್ತು ಬಾಹುಬಲಿ ಸಿನಿಮಾ ತಂಡಗಳು ವಿಶೇಷ ಉಡುಗೊರೆಯನ್ನು ನೀಡಿವೆ. ಅದೇನೆಂದರೆ, ಈ ಎರಡು ಸಿನಿಮಾಗಳು ಜಪಾನ್​ ಮತ್ತು ಅಮೆರಿಕದಲ್ಲಿ ಮರು ಬಿಡುಗಡೆ ಆಗಲಿವೆ.

ಕರೊನಾ ಹಿನ್ನಲೆಯಲ್ಲಿ ಕಳೆದ ಏಳು ತಿಂಗಳಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಶುರುವಾಗಿದ್ದು, ಪ್ರಭಾಸ್ ನಟನೆಯ ಬಾಹುಬಲಿ ಪಾರ್ಟ್ 2 ಮತ್ತು ಸಾಹೋ ಸಿನಿಮಾಗಳು ಜಪಾನ್​ ಮತ್ತು ಅಮೆರಿಕದ ಹಲವು ಚಿತ್ರಮಂದಿರಗಳಲ್ಲಿ ಮತ್ತೆ ರಿಲೀಸ್​ ಆಗಲಿವೆ.

ಸದ್ಯ ರಾಧೆ ಶ್ಯಾಮ್​ ಮತ್ತು ಆದಿಪುರುಷ್​ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದರ ಜತೆಗೆ ಬಹುಭಾಷೆಗಳಲ್ಲಿ ಸಿದ್ಧವಾಗಲಿರುವ ಸಿನಿಮಾದಲ್ಲಿಯೂ ಪ್ರಭಾಸ್​ ನಟಿಸಲಿದ್ದು, ಅಲ್ಲಿ ಅವರಿಗೆ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)