ಪಣಜಿ: ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದಲ್ಲಿ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ ಬೆನ್ನಲ್ಲೇ ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಗೋವಾದ ಸಿಕೇರಿಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಪೂನಂ ಪಾಂಡೆ ದಂಪತಿಯನ್ನು ಗುರುವಾರವಷ್ಟೇ ಕಲಂಗೂಟ್ ಪೊಲೀಸರು ಬಂಧಿಸಿದ್ದರು. ಸರ್ಕಾರಿ ಪ್ರದೇಶದಲ್ಲಿ ಪೂನಂ ಪಾಂಡೆ ಪೋರ್ನ್ ವಿಡಿಯೋಕ್ಕೆ ರೂಪದರ್ಶಿಯಾಗಿದ್ದು, ಈಕೆಯ ಪತಿ ಸ್ಯಾಮ್ ಬಾಂಬೆ ಚಿತ್ರೀಕರಣ ಮಾಡಿದ್ದರು.
ಇದನ್ನು ಗಮನಿಸಿದ್ದ ಸ್ಥಳೀಯರು, ಸಾರ್ವಜನಿಕವಾಗಿ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ, ಕಾಣಕೋಣ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಇವರ ಚಿತ್ರೀಕರಣಕ್ಕೆ ಭದ್ರತೆ ನೀಡಿದ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದೀಗ ಬಂಧನವಾದ ಒಂದೇ ದಿನಕ್ಕೆ ಬೇಲ್ ಪಡೆದು ಹೊರಬಂದಿದ್ದಾರೆ.
ಇದನ್ನೂ ಓದಿ: ‘777 ಚಾರ್ಲಿ’ ಟೀಮ್ಗೆ ಬಂದ ಕಾಲಿವುಡ್ನ ಬಾಬ್ಬಿ ಸಿಂಹ
ತಲಾ 20 ಸಾವಿರ ಭದ್ರತಾ ಠೇವಣಿ ಇಟ್ಟು, ಕೋರ್ಟ್ ಅನುಮತಿ ನೀಡುವ ವರೆಗೂ ಗೋವಾದಿಂದ ಹೋಗಹೋಗುವಂತಿಲ್ಲ ಎಂದಿದೆ. (ಏಜೆನ್ಸೀಸ್)