ಸಿನಿವಾಣಿ

PHOTOS: ಸ್ಯಾಂಡಲ್​ವುಡ್ ನಟಿಯರ ಬ್ಲ್ಯಾಕ್ ಆಂಡ್ ವೈಟ್ ಚಾಲೆಂಜ್

ಬೆಂಗಳೂರು: ಟ್ವಿಟರ್, ಇನ್​ಸ್ಟಾಗ್ರಾಂನಲ್ಲಿ ಆಗಾಗ ಏನಾದರೊಂದು ಟ್ರೆಂಡ್ ಆಗುತ್ತಿರುತ್ತದೆ. ಪ್ರಸ್ತುತ ವಿಚಾರಕ್ಕಾಗಿ ಹ್ಯಾಶ್-ಟ್ಯಾಗ್ ಸೇರಿಸಿ ಒಗ್ಗಟ್ಟನ್ನು ಪ್ರದರ್ಶಿಸುವ ಪ್ರಕ್ರಿಯೆ ಅಂತಲೂ ಇದನ್ನು ಕರೆಯಬಹುದು. ಇದೀಗ ಅದೇ ರೀತಿ ಬ್ಲಾ್ಯಕ್ ಆಂಡ್ ವೈಟ್ ಫೋಟೋ ಫೋಟೋ ಹಂಚಿಕೊಳ್ಳುವ ಮೂಲಕ ಮಹಿಳೆಯರು ಹೊಸ ಅಭಿಯಾನ ಶುರು ಮಾಡಿದ್ದಾರೆ. ವಿದೇಶದಿಂದ ಶುರುವಾದ ಈ ಕ್ಯಾಂಪೇನ್ ಇದೀಗ ಸ್ಯಾಂಡಲ್​ವುಡ್ ನಟಿಯರನ್ನೂ ಸೆಳೆದಿದೆ.

ಏನಿದು ಬ್ಲ್ಯಾಕ್ ಆಂಡ್ ವೈಟ್ ಚಾಲೆಂಜ್? ಇದು ಮಹಿಳೆಯರಿಗಾಗಿಯೇ ಶುರುವಾದ ಅಭಿಯಾನ. ಮಹಿಳೆಯ ಬೆಂಬಲ ಮಹಿಳೆಗೆ ಮತ್ತು ಸ್ತ್ರೀ ಶಕ್ತಿ, ಬೆಂಬಲ ಮತ್ತು ಸ್ತ್ರೀ ಸ್ವಾತಂತ್ರದ ದೃಷ್ಟಿಯಿಂದಲೂ ಈ ರೀತಿಯ ಟ್ರೆಂಡ್ ಸದ್ಯ ಚಾಲ್ತಿಯಲ್ಲಿದೆ.

ಚಂದನವನದ ಸಾಕಷ್ಟು ನಟಿಯರು ತಮ್ಮ ಫೋಟೋಗಳನ್ನು ಬ್ಲ್ಯಾಕ್ ಆಂಡ್ ವೈಟ್ ಮಾಡಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದರ ಜತೆಗೆ, ಬೇರೆಯವರಿಗೂ ಚಾಲೆಂಜ್ ವರ್ಗಾಯಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಮಂದಣ್ಣ, ಶ್ರುತಿ ಹರಿಹರನ್, ಸಂಯುಕ್ತಾ ಹೊರನಾಡು, ಐಂದ್ರಿತಾ ರೇ, ರಚಿತಾ ರಾಮ್ ಶಾನ್ವಿ, ಶರ್ವಿುಳಾ ಮಾಂಡ್ರೆ, ರಾಧಿಕಾ ಚೇತನ್, ಹಿತಾ, ಮಾನ್ವಿತಾ, ಹರ್ಷಿಕಾ ಪೂಣಚ್ಚ, ಅಮೂಲ್ಯ, ಆಶಿಕಾ ರಂಗನಾಥ್ ... ಹೀಗೆ ಸ್ಯಾಂಡಲ್​ವುಡ್​ನ ಬಹುತೇಕ ನಟಿಯರು ಕಪ್ಪು-ಬಿಳುಪಿನ ಫೋಟೋ ಹಂಚಿಕೊಂಡು ಮಹಿಳೆಯ ಬೆಂಬಲ ಮಹಿಳೆಗೆ ಎನ್ನುತ್ತಿದ್ದಾರೆ.

‘ಎಲ್ಲರೂ ಒಟ್ಟಾಗಿ ಎಲ್ಲ ಮಹಿಳೆಯರನ್ನು ಬೆಂಬಲಿಸೋಣ. ಪ್ರಶಂಸೆಯನ್ನೂ ನೀಡೋಣ. ಶುಭ ಹಾರೈಕೆ, ಆಶೀರ್ವಾದವಿರಲಿ ಒಟ್ಟಿಗೆ ಸ್ವೀಕರಿಸೋಣ. ಬೆನ್ನು ತಟ್ಟೋಣ. ಎಲ್ಲರನ್ನೂ ಹುರಿದುಂಬಿಸೋಣ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಗೌರವಿಸೋಣ’ ಎಂದು ಈ ಅಭಿಯಾನದ ಬಗ್ಗೆ ಹೇಳಿಕೊಳ್ಳುತ್ತಾರೆ ಅದಿತಿ ಪ್ರಭುದೇವ.